ಉ.ಕ ಸುದ್ದಿಜಾಲ ಬೆಳಗಾವಿ :
ಬೆಳಗಾವಿಯಲ್ಲಿ ರೈತರಿಂದ ಜೈಲ ಭರೋ ಪಾದಯಾತ್ರೆ ಹಿನ್ನೆಲೆ. ಮುನ್ನಜಾಗೃತ ಕ್ರಮವಾಗಿ ರಾಷ್ಟ್ರೀಯ ಹೆದ್ದಾರಿ, ರಸ್ತೆಗಳು, ಟೋಲ್ ಪ್ಲಾಜಾ ತಡೆಗೆ ನಿಷೇಧ. ಬಿಎನ್ಎಸ್ ಕಾಯ್ದೆ 2023ಕಲಂ 163 ಅಡಿಯಲ್ಲಿ ನಿರ್ಬಂಧ ವಿಧಿಸಿ ಆದೇಶ.
ಯಾವುದೇ ಕಾರಣಕ್ಕೂ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುವಂತಿಲ್ಲ ಎಂದು ಆದೇಶ. ಮತ್ತೆ ನಿಷೇಧ ಆದೇಶ ಮುಂದೊರೆಸಿದ ಜಿಲ್ಲಾಡಳಿತ. ಬೆಳಗಾವಿ ಜಿಲ್ಲಾಧಿಕಾರಿ ಆದೇಶ. ಎಂಟು ಷರತ್ತುಗಳನ್ನ ವಿಧಿಸಿ ಆದೇಶ ಹೊರಡಿಸಿದ ಡಿಸಿ.
ಬೆಳಗಾವಿ ಜಿಲ್ಲೆಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 48 ಸೇರಿದಂತೆ. ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಯಾವುದೇ ವ್ಯಕ್ತಿ, ಸಂಘಟನೆ, ಗುಂಪು ಪ್ರತಿಭಟನೆಗೆ ನಿಷೇಧ. ಜಿಲ್ಲೆಯಲ್ಲಿರುವ ಮೂರು ಟೋಲ್ ಪ್ಲಾಜಾಗಳು ಬಂದ್ ಮಾಡಲು ಅವಕಾಶ ಇಲ್ಲ. ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕಿಸುವ ರಸ್ತೆಗಳಲ್ಲಿ ಟ್ರ್ಯಾಕ್ಟರ್ ಸೇರಿ ವಾಹನ ಅಡ್ಡಗಟ್ಟುವಂತಿಲ್ಲ.
ಸಾರ್ವಜನಿಕ, ಸರ್ಕಾರಿ ಆಸ್ತಿ ಪಾಸ್ತಿಗೆ ಹಾನಿ ಮಾಡುವಂತಿಲ್ಲ. ಎಸ್ಪಿ ಮತ್ತು ಪೊಲೀಸ್ ಕಮಿಷನರ್ ಗೆ ಅಗತ್ಯ ಭದ್ರತೆಗೆ ಸೂಚನೆ. ನಿರ್ಬಂಧ ಆದೇಶ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚನೆ.
