ಉ.ಕ ಸುದ್ದಿಜಾಲ ಬೆಳಗಾವಿ :

ಬೆಳಗಾವಿ ಜಿಲ್ಲೆಯಲ್ಲಿ ಕಬ್ಬಿಗೆ 3600 ದರ ಘೋಷಣೆ – ಸತೀಶ್ ಜಾರಕಿಹೊಳಿ ನಿರಂತರ ಪ್ರಯತ್ನ ಸಫಲ. ಪ್ರತಿ ಟನಗೆ 3600 ದರ ಕೊಡಲು ಕಾರ್ಖಾನೆ ಮಾಲೀಕರ ಒಪ್ಪಿಗೆ. ಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸಭೆಯಲ್ಲಿ 3500ಗೆ ಒಪ್ಪಿದ್ದ ಕಾರ್ಖಾನೆ ಮಾಲೀಕರು. ಎರಡು ದಿನಗಳ ಸತೀಶ್ ಜಾರಕಿಹೊಳಿ ಕಸರತ್ತಿನಿಂದ ಮತ್ತೆ 3500 ರಿಂದ 3600 ರುಪಾಯಿ ಒಪ್ಪಿಗೆ.

ಇದು ಬೆಳಗಾವಿ ಜಿಲ್ಲೆ ಸಕ್ಕರೆ ಕಾರ್ಖಾನೆಗಳು ದರ ನೀಡಲಿ. ಬೇರೆ ಜಿಲ್ಲೆ ದರ ಬೇರೆಬೇರೆ ನಿಗದಿ ಆಗಲಿದೆ. ಇಂದು ಬೆಳಗಾವಿ ಹಿಂಡಲಗಾ ಜೈಲು ಭರೋ ಚಳುವಳಿ ಕೈಬಿಡುವಂತೆ ಮನವಿ. ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಮನವಿ ಮಾಡಿದ್ದಾರೆ.

ಸರ್ಕಾರದಿಂದ ಬೆಂಬಲ ಬೆಲೆಗೆ ರೈತರು ಪಟ್ಟು ಹಿಡಿದಿದ್ದಾರೆ. ಈಗ ಸಕ್ಕರೆ ಕಾರ್ಖಾನೆಗಳು ಆರಂಭಿಸಲು ಅನುಕೂಲ ಮಾಡಿಕೊಡಲಿ. ರಾಜ್ಯ ಸರ್ಕಾರದಿಂದ ಬೆಂಬಲ ಬೆಲೆಗೆ ಮತ್ತೆ ಹೋರಾಟ ಮಾಡಲಿ. ಎಂಎಸಪಿ ಘೋಷಣೆ ಬಳಿಕ ಅದರ ಹಣವು ರೈತರಿಗೆ ಸಿಗಲಿದೆ. ರೈತರು ಕಬ್ಬು ಒಣಗುತ್ತಿರುವುದರಿಂದ ಕಾರ್ಖಾನೆಗಳು ಆರಂಭವಾಗಲಿ ಎಂದ ಸತೀಶ ಜಾರಕಿಹೋಳಿ.

ಈ ದರಕ್ಕೆ ಚೂನಪ್ಪ ಪೂಜಾರಿ, ಶಶಿಕಾಂತ ಗುರೂಜಿ ಒಪ್ಪಿಕೊಂಡಿದ್ದಾರೆ. ಎಲ್ಲಾ ರೈತ ಸಂಘಟನೆಗಳೂ ಹೋರಾಟ ಕೈಬಿಡಲು ಸತೀಶ್ ಜಾರಕಿಹೊಳಿ ಮನವಿ ಮಾಡಿರುವ ಬೆಳಗಾವಿ ಉಸ್ತುವಾರಿ ಸಚಿವ ಸತೀಶ ಜಾರಕಿಹೋಳಿ.

ಪ್ರತಿ ಟನ್ ಕಬ್ಬಿಗೆ 3600 ದರ ಘೋಷಣೆ ಬೆನ್ನಲ್ಲೇ. 3600 ದರಕ್ಕೆ ಒಪ್ಪಿಗೆ ಸೂಚಿಸಿದ್ರು ರೈತರಿಂದ ಮತ್ತೆರಡು ಡಿಮಾಂಡ್. ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ಆಗ್ರಹ 3600 ಅಲ್ಲಾ 3650 ದರ ಘೋಷಣೆ ಮಾಡಿ. ಇನ್ನೂ ಹೆಚ್ಚುವರಿಯಾಗಿ 50 ದರ ಘೋಷಣೆ ಮಾಡಲಿ.

ನಮ್ಮ ಹೋರಾಟದ ವೇದಿಕೆಯಲ್ಲೇ ಬಂದು ಘೋಷಣೆ ಮಾಡಬೇಕು. ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೋರಾಟ ಸ್ಥಳಕ್ಕೆ ಬಂದು ಘೋಷಿಸಲು ಪಟ್ಟು ಹಿಡಿದ ಚೂನಪ್ಪ ಪೂಜಾರಿ.

ಲಾಭಾಂಶ ಸೇರಿಸಿದ್ರೆ 3800 ದರ ಸಿಗುತ್ತೇ ಬೆಳಗಾವಿ ಪ್ರಭಾರಿ ಡಿಸಿ ರಾಹುಲ್ ಸಿಂಧೆ ಹೇಳಿಕೆ ನೀಡಿದ್ದಾರೆ. ಪ್ರತಿ ಟನ್ ಕಬ್ಬಿಗೆ 3600 ರೂಪಾಯಿ ಘೋಷಣೆ ವಿಚಾರ. ನಿನ್ನೆ ಯಿಂದ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಡಳಿತ ಸಭೆ ಮಾಡಿದೆ. ಕಾರ್ಖಾನೆ ಮಾಲೀಕರು, ರೈತ ಮುಖಂಡರು ಜೊತೆಗೆ ಸಭೆ ಮಾಡಿದ್ದೇವೆ. ಪ್ರತಿ ಟನ್ ಕಬ್ಬಿಗೆ 3600 ರೂಪಾಯಿ ಘೋಷಣೆ.

ಲಾಭ ಹಂಚಿಕೆಗೆ ತೀರ್ಮಾನ ಮಾಡಲಾಗಿದೆ. ಸಕ್ಕರೆ ಬೆಲೆ 50 ರೂಪಾಯಿ ಇದ್ರೆ, ಶೇಕಡಾ 75ರಷ್ಟು ಲಾಭ ರೈತರಿಗೆ ಇನ್ನೂಳಿದ 25ರಷ್ಟು ಲಾಭ ಕಾರ್ಖಾನೆಯವರಿಗೆ. ಕಾರ್ಖಾನೆ ಶೀಘ್ರದಲ್ಲೇ ಆರಂಭವಾಗಬೇಕು. ಇದರ ಪ್ರಕಾರ ಇನ್ನೂ 250 ರೂಪಾಯಿ ಹೆಚ್ಚುವರಿಯಾಗಿ ಬರಲಿದೆ.

ಆಗ ರೈತರಿಗೆ ಹೆಚ್ಚುವರಿ 190 ಮತ್ತೆ ಲಾಭಾಂಶದ ದೊರೆಯಲಿದೆ. ಲಾಭಾಂಶ ಸೇರಿಸಿದ್ರೆ 3800 ವರೆಗೂ ರೈತರಿಗೆ ಸಿಗಲಿದೆ. ಇದು ಬೆಳಗಾವಿ ಜಿಲ್ಲೆ ಸಕ್ಕರೆ ಕಾರ್ಖಾನೆಯವರು ಒಪ್ಪಿಕೊಂಡಿದ್ದಾರೆ. ಆಯಾ ಜಿಲ್ಲೆಯಲ್ಲಿ ಸ್ಥಳೀಯ ಜಿಲ್ಲಾಡಳಿತ ಸಭೆ ಮಾಡ್ತಿವಿ‌.
ಅವರೇ ನಿರ್ಧಾರ ಮಾಡ್ತಾರೆ.

ಅವರೆಲ್ಲರೂ ಬೆಳಗಾವಿಯಲ್ಲಿ ಏನು ದರ ನಿಗದಿ ಆಗುತ್ತೇ ಅಂತಾ ಕಾಯ್ತಾಯಿದ್ದರೂ. ಲಾಭದ ಹಂಚಿಕೆ ಬೆಳಗಾವಿ ಜಿಲ್ಲೆಗೆ ಮಾತ್ರ ಸೀಮಿತ. ಕಾರ್ಖಾನೆ ಆರಂಭವಾಗಬೇಕು ಎಂಬುದು ನಮ್ಮ ಬಯಕೆ. ತೀವ್ರ ಬರಗಾಲ ಇದೆ. ಬೇಗ ಕಾರ್ಖಾನೆ ಆರಂಭಿಸಬೇಕು ಎನ್ನುವುದು ನಿಲುವು.ವಇದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದ ರಾಹುಲ್ ಸಿಂದೆ.