ಉ.ಕ ಸುದ್ದಿಜಾಲ ಬಾಗಲಕೋಟೆ :
ಸಕ್ಕರೆ ಕಾರ್ಖಾನೆ ಆರಂಭಕ್ಕೆ ಆಗ್ರಹ. ಜಮಖಂಡಿ ತಹಸೀಲ್ದಾರ್ಗೆ ರೈತರಿಂದ ಮನವಿ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ರೈತರ ಪ್ರತಿಭಟನೆ, ಮನವಿ. 2026-27ನೇ ಸಾಲಿನ ಕಬ್ಬು ಹಂಗಾಮು ಆರಂಭಿಸಲು ರೈತರ ಒತ್ತಾಯ..
ಟನ್ ಕಬ್ಬಿಗೆ ರೂ. 3,600 ದರ ನೀಡಲು ರೈತರ ಸಂಪೂರ್ಣ ಸಮ್ಮತಿ, ಮೊದಲ ಕಂತು ₹3,500 ಹಂಗಾಮು ಮುಗಿದ ಬಳಿಕ.. 2ನೇ ಕಂತು ₹100 ನೀಡಲು ಕಾರ್ಖಾನೆಗಳು ಒಪ್ಪಿಗೆ. ಕೂಡಲೇ ಕಬ್ಬು ಕಟಾವು ಮಾಡಿ ಕಾರ್ಖಾನೆಗೆ ಸಾಗಿಸುತ್ತೇವೆ. ಕಬ್ಬು ಸಾಗಿಸುವ ವಾಹನಗಳಿಗೆ ಸೂಕ್ತ ಭದ್ರತೆ ನೀಡುವಂತೆ ಮನವಿ..
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ರೈತರು ಮಳೆ ಅಭಾವದಿಂದ ಒಣಗಿ ಹಾಳಾಗುತ್ತಿರುವ ಕಬ್ಬು ತಕ್ಷಣ ಕಾರ್ಖಾನೆ ಆರಂಭಿಸಲು ಆಗ್ರಹಿಸುತ್ತಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಮಧೋಳ ತಾಲೂಕಿನಲ್ಲಿ ಹಬ್ಬದ ನಡುವೆ ಹೆಚ್ಚಿದ ಮುಧೋಳ ರೈತರ ಕಬ್ಬಿನ ಕಿಚ್ಚು ಮುಧೋಳ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರೈತರ ಪ್ರತಿಭಟನೆ.. ಕಬ್ಬಿಗೆ 4250 ದರಕ್ಕಾಗಿ ಆಗ್ರಹಿಸಿ ನಡೆಯುತ್ತಿರೋ ಹೋರಾಟ. ದೀಪಾವಳಿ ಹಬ್ಬ ಮುಗಿಯುವದ್ರಲ್ಲಿ ದರ ಘೋಷಿಸುವಂತೆ ರೈತರ ಪಟ್ಟು. ಹಬ್ಬದ ಬಳಿಕ ಹೋರಾಟ ಉಗ್ರಗೊಳಿಸುವ ಎಚ್ಚರಿಕೆ ನೀಡಿದ ರೈತರು…
ಜಿಲ್ಲೆಯ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ರೈತರ ಎಚ್ಚರಿಕೆ. ಕನಿಷ್ಠ 4200 ದರ ಘೋಷಣೆ ಮಾಡಿ ಕಾರ್ಖಾನೆ ಆರಂಭಿಸುವಂತೆ ಎಚ್ಚರಿಕೆ… ಪೊಲೀಸ್ ಭದ್ರತೆ ಪಡೆದು ಕಾರ್ಖಾನೆ ಆರಂಭಿಸಿದ್ರೆ, ಆಗುವ ಅಚಾತುರ್ಯಗಳಿಗೆ ಸಕ್ಕರೆ ಕಾರ್ಖಾನೆ ಮಾಲೀಕರೆ ಹೊಣೆ. ಜಿಲ್ಲಾಡಳಿತ,ಸರ್ಕಾರ ರೈತರ ನ್ಯಾಯಯುತ ಬೇಡಿಕೆ ಈಡೇರಿಸುವಂತೆ ರೈತರ ಆಗ್ರಹ…
