ಉ.ಕ ಸುದ್ದಿಜಾಲ ಧಾರವಾಡ :

ಹನುಮಾನ ದೇವಸ್ಥಾನದಲ್ಲಿ ಬೆಣ್ಣೆ ಪವಾಡ ಕರಗಲೇ ಇಲ್ಲ ಆಂಜನೇಯನಿಗೆ ಮಾಡಿದ ಬೆಣ್ಣೆ ಲೇಪನ,‌ 17 ದಿನಗಳಿಂದ ಬೆಣ್ಣೆ, ಡ್ರೈಪ್ರೂಟ್ ಲೇಪನದಲ್ಲಿರೋ ಆಂಜನೇಯ ಬೆಣ್ಣೆ, ಡ್ರೈಪೂಟ್ ಲೇಪನ ಕರಗದಕ್ಕೆ ಸ್ಥಳೀಯರು ಆಶ್ಚರ್ಯ ಧಾರವಾಡದ ಸಾಯಿ ನಗರದ ಕೃಷಿ ನಗರದ ವೀರಾಂಜನೇಯ ದೇವಸ್ಥಾನದಲ್ಲಿ ನಡೆದ ಪವಾಡ.

ಅಕ್ಟೋಬರ್ 31 ರಂದು 12 ವರ್ಷದ ಬಾಲಕನ ಹುಟ್ಟು ಹಬ್ಬಕ್ಕೆ‌ ಮಾಡಿದ್ದ ಬೆಣ್ಣೆ ಲೇಪನ್ ಸಾಯಿನಾಥ್ ಶೆಟ್ಟರ್ ಎಂಬ ಬಾಲಕನ ಹುಟ್ಟುಹಬ್ಬದ ನಿಮಿತ್ಯ ಆಂಜನೇಯನಿಗೆ ಬೆಣ್ಣೆ ಲೇಪನ, ಅವತ್ತು ಮಾಡಿದ್ದ ಬೆಣ್ಣೆ ಲೇಪನ 17 ದಿನಗಳಾದ್ರೂ ಕರಗಿಲ್ಲ. ಸಾಮಾನ್ಯವಾಗಿ ಎರಡು ಗಂಟೆಯಲ್ಲಿ ಬೆಣ್ಣೆ ಕರಗೋದು ಸಹಜ. ಆದರೆ, ಆಂಜನೇಯ ಸ್ವಾಮಿಗೆ ಮಾಡಿದ ಲೇಪನ ಕರಗಿಯೇ ಇಲ್ಲ. ಇದರಿಂದ ಆಂಜನೇಯ ಸ್ವಾಮಿ ಪವಾಡವೇ ಎಂದು ನಂಬಿರೋ ಭಕ್ತರು

ಬಾಲಕನ ತಂದೆ ವಿಪಿನ್ ಶೆಟ್ಟಿ ಮತ್ತು ಆಡಳಿತ ಮಂಡಳಿ ಅದ್ಯಕ್ಷ ಚನ್ನಪ್ಪಗೌಡ ಅವರಿಂದ ಮಾಹಿತಿ ಸುಮಾರು ಆರು ಕೆಜಿ ಬೆಣ್ಣೆಯಿಂದ ಆಂಜನೇಯನಿಗೆ ಅಲಂಕಾರ ಮಾಡಿದ್ದ ಅರ್ಚಕರು. 17 ದಿನಗಳಾದರು ಹಾಗೇ ಇರೋ ಬೆಣ್ಣೆ ಲೇಪನ ಮಗನ ಹುಟ್ಡು ಹಬ್ಬಕ್ಕೆ ತಂದೆ ವಿಪಿನ್ ಶೆಟ್ಟಿ ಅವರಿಂದ ಆಂಜನೇಯನ ಸೇವೆಗೆ ಬೆಣ್ಣೆ ಡ್ರೈ ಪ್ರೂಟ್ಸ್ ಕೊಡಸಿದ್ದ ಶೆಟ್ಟಿ ಕುಟುಂಬ ಆಂಜನೇಯನ ಪವಾಡಕ್ಕೆ ನಗರದ ಭಕ್ತರು ಆಶ್ಚರ್ಯ.