ಉ.ಕ ಸುದ್ದಿಜಾಲ ಅಥಣಿ :
ಮತ್ತೆ ಮುನ್ನೆಲೆಗೆ ಬಂದ ಬೆಳಗಾವಿ ಜಿಲ್ಲಾ ವಿಭಜನೆ ಕೂಗು. ಬೆಳಗಾವಿಯಲ್ಲಿ ತೀವ್ರ ಸಂಚಲನ ಮೂಡಿಸಿದ ಸವದಿ ಮಾತು. ಅಧಿವೇಶನದ ಹೊತ್ತಲ್ಲೆ ಜಿಲ್ಲಾ ವಿಭಜನೆಯ ಬಗ್ಗೆ ಮಾತನಾಡಿದ ಸಚಿವ ಲಕ್ಷ್ಮಣ ಸವದಿ. ಅಧಿವೇಶನ ಮುಗಿದ ಬಳಿಕ ಅಥಣಿಯನ್ನ ಜಿಲ್ಲೆಯಾಗಿ ಮಾಡೋಣ ಎಂದ ಸಹಕಾರ ಸಚಿವ ಲಕ್ಷ್ಮಣ ಸವದಿ.
ಅಥಣಿ ಪಟ್ಟಣದಲ್ಲಿ ಮಾತನಾಡಿದ ಸವದಿ ಚಿಕ್ಕೋಡಿ, ಗೋಕಾಕ ಬೈಲಹೊಂಗಲದವರು ಜಿಲ್ಲೆಗೆ ಬೇಡಿಕೆ ಇಡುತ್ತಿದ್ದಾರೆ. ಹೀಗಾಗಿ ಆರಕ್ಕೆ ಏರತಾ ಇಲ್ಲ ಮೂರಕ್ಕೆ ಇಳಿತಾ ಇಲ್ಲ. ಈಗಾಗಲೇ ಅಥಣಿಗೆ ಕೆಲವು ಕಚೇರಿಗಳನ್ನು ತಂದಿದ್ದೇವೆ. ಇನ್ನೂ ಉಳಿದ ಕಚೇರಿಗಳನ್ನ ತರತಿವಿ. ನಮ್ಮನ್ನ ಮುಕ್ತವಾಗಿ ಬಿಡಿ ಎಂದು ಮನವಿ ಮಾಡಿದ ಸವದಿ.
ಈಗಾಗಲೇ ಅಥಣಿ , ಕಾಗವಾಡ,ಕುಡಚಿ ಕ್ಷೇತ್ರದವರು ಒಂದಾಗಿದ್ದೇವೆ. ಇನ್ನೆರಡು ಕ್ಷೇತ್ರಗಳನ್ನ ತಗೊಂಡು ನೂತನ ಜಿಲ್ಲೆಯನ್ನು ಮಾಡೋಣ ಎಂದ ಲಕ್ಷ್ಮಣ ಸವದಿ.
