ಉ.ಕ ಸುದ್ದಿಜಾಲ ವಿಜಯಪುರ :
ವಿಜಯಪುರ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿ ತೀರಾ ಕಡಿಮೆ. ಒಂದೆಡೆ ಬರಗಾಲ ಇನ್ನೊಂದೆಡೆ ಉದ್ಯೋಗದ ಸಮಸ್ಯೆ ಕಾರಣ ಅನಿವಾರ್ಯವಾಗಿ ಇಲ್ಲಿಯ ಜನರು ಉದ್ಯೋಗ ಅರಸಿ ಅನ್ಯ ರಾಜ್ಯಗಳಿಗೆ ಗುಳೇ ಹೋಗುವದು ಕಾಮನ್. ಆದ್ರೀಗ ವಿಜಯಪುರ ಜಿಲ್ಲೆಯ ಮುಳವಾಡ ಕೈಗಾರಿಕಾ ಪ್ರದೇಶದಲ್ಲಿ ರಿಲಾಯನ್ಸ್ ಕಂಪನಿ ಕ್ಯಾಂಪ್ ಕೋಲಾ ಆರಂಭಕ್ಕೆ ಭೂಮಿ ಪೂಜೆ ನೆರವೇರಿಸಿದ್ದು ಸ್ಥಳೀಯವಾಗಿ ಭೂಮಿ ಕಳೆದುಕೊಂಡ ರೈತರ ಮಕ್ಕಳಿಗೆ ಉದ್ಯೋಗ ಆದ್ಯತೆ ಹೆಚ್ಚಾಗಿದೆ..
ಗುಮ್ಮಟ ನಗರಿ ವಿಜಯಪುರ ಜಿಲ್ಲೆಯ ಜನರಿಗೆ ಒಂದೆಡೆ ಈಗ ಉದ್ಯೋಗದ ಭರವಸೆ ಬಂದಂತಾಗಿದೆ. ಈ ಜಿಲ್ಲೆಯ ಜನರು ಭೀಕರ ಬರಗಾಲಕ್ಕೆ ತುತ್ತಾಗಿ ಗುಳೇ ಹೋಗುವದು ಸಾಮಾನ್ಯ, ಇದರ ಮದ್ಯ ವಿದ್ಯಾರ್ಥಿಗಳಿಗೆ ಸಹಿತ ಉದ್ಯೋಗ ಇರದ ಕಾರಣ ಬೆಂಗಳೂರಿನಂತಹ ನಗರಗಳಿಗೆ ಉದ್ಯೋಗ ಅರಸಿ ಹೋಗುತ್ತಾರೆ.
ಆದೃ ಈಗ ಇಲ್ಲೇ ಒಂದು ಕಾರ್ಖಾನೆ ಆರಂಭವಾಗುತ್ತಿದೆ. ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಮುಳುವಾಡ ಕೈಗಾರಿಕಾ ಪ್ರದೇಶದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ ಎಫ್ಎಂಸಿಜಿ ವಿಭಾಗವಾದ ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ ವತಿಯಿಂದ ಕ್ಯಾಂಪಾ ಕೋಲಾ ಪಾನೀಯ ಉತ್ಪಾದನಾ ಘಟಕಕ್ಕೆ ಇಂದು ಭೂಮಿ ಪೂಜೆ ಕಾರ್ಯ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್ ಹಾಗೂ ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ್ ಹಾಗೂ ಕೆಐಡಿಬಿ ಅಧಿಕಾರಿಗಳು ಹಾಗೂ ಆರ್ಸಿಪಿಎಲ್ ಅಧಿಕಾರಿಗಳು ಭಾಗಿಯಾಗಿ ಭೂಮಿಪೂಜೆ ನೆರವೇರಿಸದರು.
1,622 ಕೋಟಿ ರೂ. ವೆಚ್ಚದ ಉತ್ಪಾದನಾ ಘಟಕದಲ್ಲಿ 5,200 ಉದ್ಯೋಗಗಳ ಸೃಷ್ಟಿಯಾಗಲಿದ್ದು, ಸುಮಾರು 100 ಎಕರೆ ಜಾಗದಲ್ಲಿ ಘಟಕವನ್ನು ಎರಡು ಹಂತಗಳಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಪ್ಯಾಕೇಜಿಂಗ್, ಕಚ್ಚಾ ವಸ್ತು ಪೂರೈಕೆ, ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಸೇರಿದಂತೆ ಇತರ ಪೂರಕ ಕೈಗಾರಿಕೆಗಳಿಗೂ ಇದರಿಂದ ಉತ್ತೇಜನ ದೊರೆಯಲಿದೆ. ಈ ವಿಚಾರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ ಹಾಗೂ ಶಾಸಕ ಶಿವಾನಂದ ಪಾಟೀಲ ಸಹಿತ ಒತ್ತಾಯ ಮಾಡಿದ್ದಾರೆ.. ಇನ್ನು ನೂತನ ಘಟಕ ಸ್ಥಾಪನೆಗೆ ರೈತ ಸಂಘಟನೆಯವರು ಒಂದೆಡೆ ಸ್ವಾಗತ ಮಾಡಿದರೆ ಇನ್ನೊಂದೆಡೆ ವಿರೋಧ ಕೂಡಾ ವ್ಯಕ್ತ ಪಡಿಸುತ್ತಿದ್ದಾರೆ.
2008-2009 ಸಾಲಿನಲ್ಲಿ ಭೂಮಿ ವಶಪಡಿಸಿಕೊಂಡರು ಕೆಲ ರೈತರಿಗೆ ಇನ್ನೂ ಪರಿಹಾರ ಬಂದಿಲ್ಲ, ಇನ್ನೂ ರೈತರ ಜಮಿನಿಲ್ಲಿದ್ದ ಗಿಡಗಳ ಪರಿಹಾರ ಕೂಡಾ ಬಂದಿಲ್ಲ, ಮೊದಲು ಅವುಗಳನ್ನು ಕೊಡಬೇಕು, ಹಾಗೆ ಇಲ್ಲಿ ಉದ್ಯೋಗ ಸೃಷ್ಟಿಯಾದರೆ ಮೊದಲು ಇಲ್ಲಿ ಭೂಮಿ ಕಳೆದುಕೊಂಡ ರೈತರ ಮಕ್ಕಳಿಗೆ ಪ್ರಾಶಸ್ತ್ಯ ನೀಡಿ ಅವರಿಗೆ ಉದ್ಯೋಗ ಕೊಡುವ ಕೆಲಸವಾಗಬೇಕು. ಸಿ ಹಾಗೂ ಡಿ ಗ್ರೇಡ್ ಕೆಲಸಕ್ಕೆ ಅವರನ್ನೇ ನೇಮಿಸಿ ಕೊಳ್ಳಬೇಕು ಎಂದು ಒತ್ತಾಯ ಮಾಡಿದ್ದಾರೆ..
ಇನ್ನು ಈ ಘಟಕದಲ್ಲಿ ಕಾರ್ಬೊನೇಟೆಡ್ ಸಾಫ್ಟ್ ಡ್ರಿಂಕ್ಸ್, ಜ್ಯೂಸ್, ರೆಡಿ-ಟು-ಸರ್ವ್ ಪಾನೀಯಗಳು, ಎನರ್ಜಿ ಡ್ರಿಂಕ್ಸ್ ಮತ್ತು ಪ್ಯಾಕೇಜ್ಡ್ ಕುಡಿಯುವ ನೀರು ತಯಾರಿಸಲಾಗುತ್ತದೆ. ಇದರಿಂದ ಈ ಭಾಗದಲ್ಲಿ ಉದ್ಯೋಗ ಸೃಷ್ಟಿ ಆಗುವ ಸಾಧ್ಯತೆ ಕೂಡಾ ಇದ್ದು ಇದು ಜಿಲ್ಲೆಯ ಜನರಲ್ಲಿ ಸಂತಸ ಮನೆ ಮಾಡಿದೆ…
