ಉ.ಕ ಸುದ್ದಿಜಾಲ ಚಿಕ್ಕೋಡಿ :
ಚಿಕ್ಕೋಡಿಯಲ್ಲಿ ಅನೈತಿಕ ಸಂಬಂಧಕ್ಕೆ ಮಹಿಳೆಯ ಬರ್ಬರ ಹತ್ಯೆ. ಮಹಿಳೆಯ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವ ಶಂಕೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಹೊರವಲಯದಲ್ಲಿ ನಡೆದ ಘಟನೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನನದಿವಾಡಿ ಗ್ರಾಮದ ಐರಾವತಿ ಖೋತ (40) ಕೊಲೆಗೀಡಾದ ಮಹಿಳೆ. ಮಹಿಳೆಯ ಪ್ರಿಯಕರ ಸಂಜು ಎಂಬಾತನಿಂದ ಕೊಲೆ ನಡೆದಿರುವ ಮಾಹಿತಿ. ಕಳೆದ ಎರಡು ವರ್ಷಗಳಿಂದ ಸಂಜು ಜೊತೆ ಐರಾವತಿ ಅಕ್ರಮ ಸಂಬಂಧ.
ಒಂದೇ ಹೋಟೆಲ್ ನಲ್ಲಿ ಇಬ್ಬರು ಕೆಲಸ ಮಾಡುತ್ತಿದ್ದ ಮಾಹಿತಿ. ಸಂಜು ಬೇರೆ ಮದುವೆಗೆ ಮುಂದಾದಾಗ ಅಡ್ಡಿ ಪಡಿಸಿದ್ದ ಐರಾವತಿ. ಇದೇ ವಿಚಾರಕ್ಕೆ ಕೊಲೆ ನಡೆದಿರುವ ಆಯಾಮದಲ್ಲಿ ತನಿಖೆ ನಡೆಸಿರುವ ಪೊಲೀಸರು.
ಚಿಕ್ಕೋಡಿ ಠಾಣೆಯ ಪೊಲೀಸರಿಂದ ಸ್ಥಳ ಪರಿಶೀಲನೆ, ಹೆಚ್ಚಿನ ಮಾಹಿತಿ ಸಂಗ್ರಹಣೆ. ಚಿಕ್ಕೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ.
