ಉ.ಕ ಸುದ್ದಿಜಾಲ ಬೆಳಗಾವಿ :
ಹೆರಿಗೆ ಆಸ್ಪತ್ರೆ ಒಳಗಡೆ ಗಾಂಜಾ ಹಾಗೂ ಚೆರಸ ಪನ್ನಿ ಎನ್ನುವ ಮಾದಕ ವಸ್ತು ಇಟ್ಟುಕ್ಕೊಂಡ ಆರೋಪದ ಮೇರೆಗೆ ವ್ಯಕ್ತಿ ಅರೆಸ್ಟ್. ಬೆಳಗಾವಿ ಬಿಮ್ಸ್ ಆಸ್ಪತ್ರೆ ಆವರಣದಲ್ಲಿ ನಡೆದ ಘಟನೆ. ಗೃಹ ರಕ್ಷಕ ಸಿಬ್ಬಂದಿಗಳಿಂದ ತಪಾಸಣೆ ವೇಳೆ ಸಿಕ್ಕಿಬಿದ್ದ ವ್ಯಕ್ತಿ.
ಗೃಹ ರಕ್ಷಕ ಸಿಬ್ಬಂದಿ ಕಲ್ಮೇಶ ಹುಕಳಿ ಅವರು ಚಾಣಾಕ್ಷತನದಿಂದ ಆರೋಪಿ ಬಂಧನ. ಜೇಬಿನಲ್ಲಿ ಗಾಂಜಾ, ಚೆರಸ ಪನ್ನಿ ಇಟ್ಟುಕ್ಕೊಂಡಿದ್ದ ಎನ್ನುವ ಆರೋಪ. ಅಬ್ದುಲ್ ಬೇಪಾರಿ ಎನ್ನುವ ವ್ಯಕ್ತಿ ಬಂಧಿಸಿ ವಿಚಾರಣೆ ನಡೆಸುತ್ತಿರುವ ಪೋಲಿಸರು. ತಪಾಸಣೆ ವೇಳೆ ಪತ್ನಿ ಹೆರಿಗೆ ಆಗಿದೆ ನೋಡಲಿಕೆ ಬಂದಿದ್ದೇನೆ ಎಂದು ಹೇಳಿಕೆ ನೀಡಿದ್ದ ಅಬ್ದುಲ್.
ಆರೋಪಿ ಅಬ್ದುಲ್ ಬೆಳಗಾವಿ ಉಜ್ವಲ್ ನಗರದವ ಎನ್ನುವ ಮಾಹಿತಿ. ಗಾಂಜಾ, ಚೆರಸ ಪನ್ನಿ ಎನ್ನುವ ಮಾದಕ ವಸ್ತು ಇಟ್ಟುಕ್ಕೊಂಡು ಹೆರಿಗೆ ಆಸ್ಪತ್ರೆ ಒಳಗಡೆ ಬಂದಿದ್ದ ವ್ಯಕ್ತಿ. ಐದು ಪ್ಯಾಂಟ ಧರಿಸಿಕ್ಕೊಂಡು ಬಂದಿದ್ದ ಆರೋಪಿ. ಒಂದು ಗಾಂಜಾ ಪಾಕೇಟ್ ಹಾಗೂ ಮೂವತ್ತಕ್ಕೂ ಹೆಚ್ಚು ಚೆರಸ್ ಪನ್ನಿ ಎನ್ನುವ ಮಾದಕ ವಸ್ತುಗಳ ಪಾಕೆಟ್ ಪತ್ತೆ.
ಗೃಹ ರಕ್ಷಕ ಸಿಬ್ಬಂದಿಗಳಿಂದ ಅನುಮಾನಾಸ್ಪದವಾಗಿ ತಪಾಸಣೆ ಮಾಡಿದಾಗ ಮಾದಕ ವಸ್ತುಗಳು ಪತ್ತೆ. ತಕ್ಷಣ ಎಪಿಎಂಸಿ ಪೊಲೀಸರಿಗೆ ಮಾಹಿತಿ ನೀಡಿದ ಗೃಹ ರಕ್ಷಕ ಸಿಬ್ಬಂದಿ. ಅಬ್ದುಲ್ ಬೇಪಾರಿ ಎನ್ನುವ ಆರೋಪಿಯನ್ನ ಕರೆದೊಯ್ದ ಎಪಿಎಂಸಿ ಪೊಲೀಸರು.
ದೂರು ದಾಖಲಿಸಿಕ್ಕೊಂಡು ತಪಾಸಣೆ ನಡೆಸುತ್ತಿರುವ ಪೊಲೀಸರು. ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
