ಉ.ಕ ಸುದ್ದಿಜಾಲ ಬೆಳಗಾವಿ :

ಗಡಿ ಜಿಲ್ಲೆ ಬೆಳಗಾವಿಯಲ್ಲಿ ಬರದ ಎಫೆಕ್ಟ್. ಕೃಷ್ಣಾ, ಘಟಪ್ರಭಾ, ಮಲಪ್ರಭಾ ನದಿ ನೀರಿನ ಮೇಲೆ ನಿಗಾ. ಬೆಳಗಾವಿ ಜಿಲ್ಲಾಡಳಿತದಿಂದ ಕುಡಿಯುವ ಮಾತ್ರ ನೀರು ಬಿಡುಗಡೆ. ಮುಂದಿನ ಜೂನ್ ತಿಂಗಳು ವರೆಗೂ ಇರೋ ನೀರು ಕುಡಿಯಲು ಮಾತ್ರ ಬಳಕೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಮಹಮ್ಮದ ರೋಷನ ತಿಳಸಿದ್ದಾರೆ.

ಬೆಳಗಾವಿಯಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡೊದ ಅವರು, ನದಿ ಪಾತ್ರದ ಕಾಲುವೆಗಳಿಗೆ ಕುಡಿಯಲು ಮಾತ್ರ ನೀರು ಬಿಡುಗಡೆ, ವಾರದಲ್ಲಿ ನದಿ ಪಾತ್ರದಲ್ಲಿ ಎರಡು ದಿನ ಕರೆಂಟ್ ಕಟ್ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಮೂರು‌ ದಿನಗಳ ಕಾಲ್ ಕರೆಂಟ್ ಕಟ್ ಗೆ ನಿರ್ಧಾರ ಎಂದ ಜಿಲ್ಲಾಧಿಕಾರಿ.

ನದಿ ಮತ್ತು ಕಾಲುವೆ ನೀರು ಬೆಳೆಗೆ ಬಳಸದಂತೆ ತಡೆಯಲು ಕರೆಂಟ್ ಕಟ್. ಈಗಿಂದಲೇ ಕುಡಿಯುವ ನೀರಿಗಾಗಿ ನದಿ ನೀರು ಬಳಕೆ. ಇನ್ನೂ ಬೇಸಿಗೆ ಮುನ್ನವೇ ಬರಿದಾಗ್ತಿರೋ ನದಿಗಳು.