ಉ.ಕ ಸುದ್ದಿಜಾಲ ಹುಕ್ಕೇರಿ :

ಗೃಹ ಲಕ್ಷ್ಮೀ ಹಣಕ್ಕಾಗಿ ಅಜ್ಜಿ ಕೊಲೆ ಮಾಡಿದ ಮೊಮ್ಮಗ.‌ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಅರಳಿಕಟ್ಟಿ ಗ್ರಾಮದಲ್ಲಿ ಘಟನೆ. ನವೆಂಬರ್10 ರಂದು ನಡೆದಿದ್ದ ಭೀಕರ ಕೊಲೆ ತಡವಾಗಿ ಬೆಳಕಿಗೆ. ಹಮ್ಮವ್ವಾ ಸನದಿ(78) ಕೊಲೆಯಾದ ವೃದ್ಧೆ.

ಅರಳಿಕಟ್ಟಿಯಿಂದ ಪಾಶ್ಚಾಪುರ ಸಂತೆಗೆ ಹೋಗಿದ್ದ ವೃದ್ಧೆ ಮಿಸ್ಸಿಂಗ್. ನವೆಂಬರ್ 15ರಂದು ಹಿಡಕಲ್ ಡ್ಯಾಂ ಹಿನ್ನೀರಿನಲ್ಲಿ ವೃದ್ಧೆ ಶವ ಪತ್ತೆ. ವೃದ್ಧೆ ಶವನ್ನು ಗೋಣಿಚೀಲದಲ್ಲಿ ತುಂಬಿ ಕಲ್ಲು ಕಟ್ಟಿ ಬಿಸಾಕಿದ್ದ ಮೊಮ್ಮಗ. ಸಾಕ್ಷಿ ನಾಶ ಮಾಡಲು ಯತ್ನಿಸಿದ್ದ ವೃದ್ಧೆಯ ಮೊಮ್ಮಗ.

ಮೊಮ್ಮಗ ಕೊಲೆ ಆರೋಪಿ ಭೀಮಪ್ಪ ಸನದಿ ಬಂಧನ. ಯಮಕನಮರಡಿ ಪೊಲೀಸರಿಂದ ಕೊಲೆ ರಹಸ್ಯ ಬಯಲು.‌ ಅಜ್ಜಿಯ ಗೃಹ ಲಕ್ಷ್ಮೀ ಹಣಕ್ಕಾಗಿ ಮೊಮ್ಮಗನ ಕಿರಿಕ್. ಪಾಶ್ಚಾಪುರಕ್ಕರೆ ಕರೆದುಕೊಂಡು ಹೋಗುವ ನೆಪ ಮಾಡಿದ್ದ ಮೊಮ್ಮಗ ಭಿಮಪ್ಪ. ಗವಿ ಸಿದ್ದೇಶ್ವರ ಗುಡ್ಡಕ್ಕೆ ಕರೆದೊಯ್ದು ಉಸಿರುಗಟ್ಟಿಸಿ ಮರ್ಡರ್.

ಬಳಿಕ ಗೋಣಿಚೀಲದಲ್ಲಿ ಶವವನ್ನು ಡ್ಯಾಂ ಹಿನ್ನೀರಿನಲ್ಲಿ ಬಿಸಾಡಿದ್ದ ಮೊಮ್ಮಗ. ಬಳಿಕ ಅಜ್ಜಿ ಹುಡುಕಾಟದಲ್ಲಿ ತೊಡಗಿದ್ದ ಭೀಮಪ್ಪ. ಭೀಮಪ್ಪ ಕೃತ್ಯ ಗೊತ್ತಿದ್ದರು ಸುಮ್ಮನಿದ್ದ ತಂದೆ. ಭೀಮಪ್ಪ ತಂದೆ ರಾಮಪ್ಪನೂ ಕೊಲೆ ಪ್ರಕರಣದಲ್ಲಿ ಆರೋಪಿ. ಯಮಕನಮರಡಿ ಪೊಲೀಸರಿಂದ ತಂದೆ, ಮಗನ ಬಂಧನ.