ಉ.ಕ ಸುದ್ದಿಜಾಲ ಅಥಣಿ :

ಟಿಕೆಟ್ ದರ ಏರಿಕೆ ಸಮರ್ಥಿಸಿಕೊಂಡ ಮಾಜಿ ಸಾರಿಗೆ ಸಚಿವ ಸಾರಿಗೆ ಬಸ್ ಟಿಕೆಟ್ ದರ ಹೆಚ್ಚಳ ವಿಚಾರ ಅಥಣಿ ಪಟ್ಟಣದಲ್ಲಿ ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿಕೆ.

ದರ ಏರಿಕೆ ಸಮರ್ಥಿಸಿಕೊಂಡ ಮಾಜಿ ಸಾರಿಗೆ ಸಚಿವ ಲಕ್ಷ್ಮಣ ಸವದಿ

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಮಾಜಿ ಸಾರಿಗೆ ಸಚಿವ ಹಾಗೂ ಹಾಲಿ ಶಾಸಕ ಲಕ್ಷ್ಮಣ ಸವದಿ ಹೇಳಿಕೆ ನೀಡಿದ್ದು, ಕಳೆದ ಹದಿನೈದು ವರ್ಷಗಳ ಹಿಂದೆ ಡಿಸೇಲ್ ದರ ಎಷ್ಟಿತ್ತು ಈಗ ಎಷ್ಟಿದೆ? ಒಂದು ಬಸ್ ಖರೀದಿ ದರ ಎಷ್ಟಿತ್ತು ಈಗ ಎಷ್ಟಿದೆ? ಟೈರ್ ಖರೀದಿಯ ದರ ಎಷ್ಟಿದೆ ಎಂದು ಬಿಜೆಪಿಯವರು ವಿಮರ್ಶೆ ಮಾಡಿಕೊಳ್ಳಲಿ. ದರ ಹೆಚ್ಚಳಕ್ಕೆ ಕೇಂದ್ರ ಸರ್ಕಾರದ ತೆರಿಗೆ ಕಾರಣವಾಗಿದೆ ಅವರು ಡಿಸೇಲ್ ದರ ಇಳಿಸಲಿ.

ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ನಾನು ಸಾರಿಗೆ ಸಚೀವನಾಗಿದ್ದೆ ಆಗಲು ಸ್ವಲ್ಪ ಮಟ್ಟಿಗೆ ಟಿಕೆಟ್ ದರ ಹೆಚ್ಚಿಸಿದ್ದೇವೆ. ಅದು ಅವರಿಗೆ ನೆನಪಿಲ್ಲ ಅನ್ನಿಸುತ್ತದೆ. ಒಂದು ಕೆಲಸ ಮಾಡಿ ಅವರಿಗೆ ಡೀಸೆಲ್ ದರ ಇಳಿಸಲು ಹೇಳಿ. ಬಸ್ ನ ಬಿಡಿಭಾಗಗಳ ಮೇಲಿನ ತೆರಿಗೆ ಮತ್ತು ಡೀಸೆಲ್ ತೆರಿಗೆ ತೆರವುಗೊಳಿಸಿದರೆ ಇರುವ ಟಿಕೆಟ್ ದರ ಕಡಿಮೆ ಮಾಡಲು ನಮ್ಮ ಸಚಿವರಿಗೆ ಸಲಹೆ ನೀಡುತ್ತೇನೆ.

ನಕ್ಸಲರ ಶರಣಾಗತಿ ಬಗ್ಗೆ ಲಕ್ಷ್ಮಣ ಸವದಿ ಪ್ರತಿಕ್ರಿಯೆ

ನಕ್ಸಲರು ಶರಣಾಗುತ್ತಿರುವದು ಹೊಸ ಬೆಳವಣಿಗೆ. ನಕ್ಲೈಟ್ಸ ಇರಬಾರದು ಅದನ್ನು ಶೂನ್ಯ ಮಾಡುವ ಪ್ರಯತ್ನವನ್ನು ನಮ್ಮ ಸರ್ಕಾರ ಮಾಡಿದೆ. ಅವರು ತಮ್ಮ ವೃತ್ತಿಯನ್ನ ಬಿಟ್ಟು ನಮಗೆ ಸಾಮಾಜಿಕವಾಗಿ ಜನರ ಮದ್ಯದಲ್ಲಿ ಇದ್ದುಕೊಂಡು ಬದುಕಲು ಅವಕಾಶ ಮಾಡಿಕೊಡಬೇಕು ನಮ್ಮ ಬೇಡಿಕೆಗಳನ್ನು ಸಹಾನೂಬೂತಿಯಿಂದ ಪರಿಶೀಲನೆ ಮಾಡಬೇಕು ಎಂದು ವಿಚಾರ ಇಟ್ಟುಕೊಂಡು ಶರಣಾಗತಿ ಆಗಿದ್ದಾರೆ.

ಕಾನುನು ಪ್ರಕಾರ ಶರಣಾಗತಿ ಮಾಡಿಕೊಂಡು ಅವರಿಗೆ ರಾಜ್ಯ ಸರ್ಕಾರ ಭರವಸೆ ಈಡೇರಿಸುವದನ್ನು ಗಮನದಲ್ಲಿ ಇಟ್ಟುಕೊಂಡು ಪರಿಶೀಲನೆ ನಡೆಸುವ ಭರವಸೆ ನೀಡಿದೆ. ರಾಜ್ಯದಲ್ಲಿ ಬಯೊತ್ಪಾನೆ ಮತ್ತು ನಕ್ಸಲಿಯರು ಇರಬಾರದು ಅನ್ನುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ ಎಂದರು.

ಶಾಸಕ ಅಭಯ ಪಾಟಿಲ್ ಸಮ್ಮುಖದಲ್ಲಿ ಜೈ ಮಹಾರಾಷ್ಟ್ರ ಘೋಷಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸವದಿ

ಕನ್ನಡಪರ ಸಂಘಟನೆಗಳು ಕನ್ನಡ ವಿರೋಧ ಹೇಳಿಕೆಯನ್ನು ಮಾಡಿದ್ದಾರೆ ಅಂತ ಆರೋಪಿಸಿದ್ದಾರೆ. ಅದು ಅಭಯ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ನಡೆದಿದೆ. ನಿನ್ನೆ ನಾನು ವಿಮಾನ ನಿಲ್ದಾಣದಲ್ಲಿ ಅಭಯ ಪಾಟಿಲ್ ಅವರಿಗೆ ಭೆಟಿಯಾಗಿದ್ದೆ ಈ ಬಗ್ಗೆ ಕೇಳಿದ್ದೇನೆ. ಇದೊಂದು ಅಚಾತುರ್ಯದಿಂದ ನಡೆದಿರುವ ಒಂದು ಕಾರ್ಯ.

ವೇದಿಕೆಯಲ್ಲಿ ಇರತಕ್ಕಂತಹ ಅಭಯ ಪಾಟೀಲ ಜೈ ಮಹಾರಾಷ್ಟ್ರ ಅಂತ ಹೇಳಿಲ್ಲ. ಅಲ್ಲಿ ಬಂದವರು ಮಹಾರಾಷ್ಟ್ರದವರು ಜೈ ಮಹಾರಾಷ್ಟ್ರ ಅಂತ ಹೇಳಿರಬಹುದು. ಅದು ಇವರಿಗೆ ಸರಿಯಾಗಿ ಗಮನಕೊಡಲು ಆಗಲಿಲ್ಲ ಗಮನಕ್ಕೆ ಬಂದಿದ್ದರೆ ಅದರ ಜೊತೆಗೆ ಅವರ ಬಾಯಲ್ಲೆ ಜೈ ಕರ್ನಾಟಕ ಅಂತ ಹೇಳಿಸುತ್ತಿದ್ದೇ. ಅದು ಬೈ ಮಿಸ್ಟೇಕ್ ಆಗಿದೆ ಎಂದಿದ್ದಾರೆ ಎಂದು ಹೇಳಿದರು.