ಉ.ಕ ಸುದ್ದಿಜಾಲ ಬಾಗಲಕೋಟೆ :
ಕೂಡಲಸಂಗಮ ಪಂಚಮಸಾಲಿ ಪೀಠಕ್ಕೆ ಬರುತ್ತಾ ಸಂಚಕಾರ. ಬಸವಜಯಮೃತ್ಯುಂಜಯ ಸ್ವಾಮೀಜಿ ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಸ್ವಾಮೀಜಿ ಬದಲಾವಣೆ ಸುಳಿವು ನೀಡಿದ ವಿಜಯಾನಂದ ಕಾಶಪ್ಪನವರ.
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಕೂಡಲಸಂಗಮದಲ್ಲಿ ಕಾಶಪ್ಪನವರ ಹುನಗುಂದ ಶಾಸಕ. ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದು ನೋಡ್ರಿ ಸಮಾಜ ಅನ್ನೋದು ಬಹಳ ದೊಡ್ಡದು. ಸಮಾಜ ಇವರನ್ನು ಗುರುಗಳನ್ನಾಗಿ ಮಾಡಿದೆ. ಗುರುಗಳು ಸ್ವಯಂಘೋಷಿತ ಆಗಿ ಇವರೇ ಬಂದಿಲ್ಲ.
ಸಮಯ ಕಾಲ ಕಾಲಕ್ಕೆ ಏನೇನು ಆಗಬೇಕೊ ಅದು ನಿರ್ಣಯ ಮಾಡುತ್ತದೆ. ಅದು ಬಂದರೆ ಅದು ಕೂಡ ಆಗೇ ಆಗುತ್ತದೆ ಕಾದು ನೋಡಿ. ಆಗುತ್ತೆ ಕಾದು ನೋಡಿ ಇದೆ ಆಗೋದು ಈಗ ಎಂದು ರಿಪೀಟ್ ಮಾಡಿದ ಕಾಶಪ್ಪನವರ. ಬದಲಾವಣೆ ಕಾಲ ಬಂದಾಗ ಯಾರು ತಡೆಯೋದಿಲ್ಲ.
ಇಡೀ ಭೂಮಂಡಲದಲ್ಲೇ ಯಾರನ್ನು ಉಳಿಸೋಕೆ ಆಗೋದಿಲ್ಲ. ಸುನಾಮಿ ಆಗುತ್ತದೆ ಹಾಗೆ ಆಗುತ್ತಾ? ಹೇಳಿ ಕೇಳಿ ಬರುತ್ತಾ ಅದು ಇವರದ್ದು ಕಾಲ ಮುಗಿದಿದೆ. ಬದಲಾವಣೆ ಆಗೇ ಆಗುತ್ತದೆ ಎಂದ ಕಾಶಪ್ಪನವರ.
ನಾನು ಮಠ ಕಟ್ಟಿಲ್ಲ ಸಮಾಜ ಕಟ್ಟುತ್ತಿದ್ದೇನೆ ಎಂಬ ಸ್ವಾಮೀಜಿ ಹೇಳಿಕೆಗೆ ತಿರುಗೇಟು. ಯಾರ್ರಿ ಮಠ ಕಟ್ಟಿದವರು. ಎಲ್ಲಿದ್ರು ಇವರೆಲ್ಲ ಎಷ್ಟು ದಿವಸದ ಹಿಂದೆ ಬಂದಿದಾರೆ ಇವರು ಸಮಾಜ ಕಟ್ಟೋಕೆ.
ಒರಿಜಿನಲ್ ಆಗಿ ಸಮಾಜ ಕಟ್ಟಿದ ಮನೆತನದಲ್ಲಿ ಹುಟ್ಟಿದವ ನಾನು. ಅಣವಿಹಾಳ ಗುರುಗಳನ್ನು ನೆನೆಸಬೇಕು. ನಮ್ಮ ತಂದೆ ಎಸ್ ಆರ್ ಕಾಶಪ್ಪನವರ ಅವರನ್ನು ನೆನೆಸಬೇಕು.
ಪಂಚಮಸಾಲಿ ಸಮಾಜವನ್ನು ರಾಜ್ಯಕ್ಕೆ ಗುರುತಿಸಿಕೊಟ್ಟಂತಹ ತಂದೆಗೆ ಹುಟ್ಟಿದವ ನಾನು. ಇವರೆಲ್ಲ ಸುಮ್ನೆ ಮಾತಾಡ್ತಾರೆ. ಸಮಾಜವನ್ನು ಬಳಕೆ ಮಾಡಿಕೊಳ್ತಿದಾರೆ ಅಷ್ಟೆ ಎಂದರು.
2028ಕ್ಕೆ ನಾನೇ ಸಿಎಂ ಎಂದ ಯತ್ನಾಳಗೆ ಕೌಂಟರ್ ಕೊಟ್ಟ ಶಾಸಕ ಕಾಶಪ್ಪನವರ ಯತ್ನಾಳ ಮತ್ತೇ ಗೆಲ್ತೀನಿ ಅನ್ನೋದು ತಿರುಕನ ಕನಸು. 2028 ಕ್ಕೆ ಗೆದ್ದು ವಿಧಾನಸೌಧಕ್ಕಾದ್ರೂ ಬರಲಿ ಇಂವಾ ನೋಡೋಣ.
ಯತ್ನಾಳದ್ದು ತಿರುಕನ ಕನಸು, ಹಗಲು ಗನಸು ಅಂತಾರಲ್ಲಾ ಹಾಗೆ ಹಗಲು ಗನಸು ಕಾಣುವವರೆಲ್ಲಾ ಇವರೆಲ್ಲಾ. ಯತ್ನಾಳ ಮತ್ತೇ ಗೆದ್ದು ಬರಲಿ ನೋಡೋಣ. ಯತ್ನಾಳ ಸಿಎಂ ಆಗೋದಿರಲಿ, ಶಾಸಕನಾಗಿಯಾದ್ರೂ ಗೆದ್ದು ಬರಲಿ ಎಂದು ಪರೋಕ್ಷವಾಗಿ ಸವಾಲ್ ಹಾಕಿದ ಕಾಶಪ್ಪನವರ.
ಬಸವಜಯಮೃತ್ಯುಂಜಯ ಸ್ವಾಮೀಜಿ ಪೀಠಕ್ಕೆ ಬರುತ್ತಾ ಕುತ್ತು? – ಕಾಶಪ್ಪನವರ ಹೇಳಿದ್ದೇನು? 👇👇👇👇👇