ಉ.ಕ ಸುದ್ದಿಜಾಲ ವಿಜಯಪುರ :
ಬೆಂಕಿ ಬಬಲಾದಿ ಮಠದ 2026ನೇ ವರ್ಷದ ಕಾಲಜ್ಞಾನ. ಈ ವರ್ಷ ಶುಭ ಅಶುಭ ಸಮನಾಗಿರಲಿದೆ. ಚಿಕ್ಕ ಮಕ್ಕಳಿಗೆ ರೋಗಬಾಧೆ. ಬಬಲಾದಿ ಸದಾಶಿವ ಮುತ್ಯಾನ ಶಿವರಾತ್ರಿ ಜಾತ್ರೆಯಲ್ಲಿ ನುಡಿಯಲಾದ ಭವಿಷ್ಯವಾಣಿ..
ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಬಬಲಾದಿ ಗ್ರಾಮದ ಮಠದ ಪೀಠಾಧಿಪತಿ ಸಿದ್ದರಾಮಯ್ಯ ಹೊಳಿಮಠ ಮುತ್ಯಾರಿಂದ ಭವಿಷ್ಯವಾಣಿ. 400 ವರ್ಷ ಇತಿಹಾಸದ ಚಿಕ್ಕಪ್ಪ ಮುತ್ಯಾ ಬರದಿರೋ ಕಾಲಜ್ಞಾನ .ಮಳೆ ಬೆಳೆ ರಾಜಕೀಯ, ಆರ್ಥಿಕತೆ, ಆರೋಗ್ಯ ಕುರಿತಾಗಿ ಕಾಲಜ್ಞಾನ.ರಾಜ್ಯ ರಾಜಕೀಯದ ಬಗ್ಗೆ ಹೊರಬಿತ್ತು ಭವಿಷ್ಯ ವಾಣಿ..
ರಾಜ್ಯದಲ್ಲಿ ಕುರ್ಚಿ ಕದನದ ಪ್ರಸ್ತಾಪ. ರಾಜ ಪ್ರಭುಗಳ ಮಧ್ಯೆ ಕಲಹ ಆಗುತ್ತೆ ಅಂತ ಭವಿಷ್ಯವಾಣಿ.. ರಾಜ್ಯ ರಾಜಕೀಯದಲ್ಲಿ ಹೊಸ ತಿರುವು ಆಗುತ್ತದೆ. ಬೆಂಕಿ ಬಬಲಾದಿ ಮಠದ ಕಾಲಜ್ಞಾನದಲ್ಲಿ ಸಿಎಂ ಬದಲಾವಣೆ ಬಗ್ಗೆ ಪರೋಕ್ಷವಾಗಿ ಚರ್ಚೆ. ಅಲ್ಲಲ್ಲಿ ಬರಗಾಲ ಆಗುತ್ತದೆ, ಅಗ್ನಿ ಅನಾಹುತ ಆಗುತ್ತವೆ..
ಅತೀ ದೊಡ್ಡ ದು:ಖದ ಸುದ್ದಿ ಬಂದಿತ್ತಣ್ಣಾ. ಪಾಪದ ಕೆಲಸ ಹೆಚ್ಚಾದಿತು ಕಾಡು ಪ್ರಾಣಿಗೆ ತೊಂದರೆ ಆದಿತು. ಅಲ್ಲಲ್ಲಿ ರಾಜ ಪ್ರಜೆಗಳಿಗೆ ಕಲಹ. ಉತ್ತರ ಭಾರತದಲ್ಲಿ ಅಧಿಕ ಮಳೆ ಆಗಿ ಅತಿವೃಷ್ಟಿ ಆಗುವ ಸಾಧ್ಯತೆಯಿದೆ.
ವಿಶ್ವದ ಕೆಲವು ಕಡೆ ಭೂಕುಸಿತ ಆಗುತ್ತೆ ರೈತರಿಗೆ ಈ ವರ್ಷ ಹೆಚ್ಚಿನ ಒಳ್ಳೆಯದು ಆಗುತ್ತೆ ದೇಶದ ಗಡಿಗಳಲ್ಲಿ ಆತಂಕದ ವಾತಾವರಣ ಯುದ್ಧ ಕಾರ್ಮೋಡ,ವಿಕೋಪದ ಹಾವಳಿ ಹೆಚ್ಚಾದೀತು ತಿಳಿಯಿರಣ್ಣ. ಬಡವ ಶ್ರೀಮಂತರ ಮಧ್ಯೆ ಅಂತರ ಕಡಿಮೆ ಆಗುತ್ತದೆ
ಈ ವರ್ಷ ಉತ್ತಮ ಮಳೆ ಆಗುವ ಸಾಧ್ಯತೆಯಿದೆ ಆದ್ರೆ ಭೂಕುಸಿತ ವಿಪತ್ತು ಎದುರಾಗಬಹುದು ಮಳೆ ಆಗಿ ಪ್ರವಾಹವಾದರೂ ಯಾವುದೇ ಆತಂಕವಿರಲ್ಲ. ಮುಂಗಾರು ಮಳೆ ಏಳಾಣಿ, ಹಿಂಗಾರು ಮಳೆ ಒಂಬತ್ತಾಣಿ ಎಂದು ಮಳೆ ಬಗ್ಗೆ ಭವಿಷ್ಯವಾಣಿ..
ವಿಡಿಯೋ – ಬೆಂಕಿ ಬಬಲಾದಿ ಮಠದ 2026ನೇ ವರ್ಷದ ಕಾಲಜ್ಞಾನ – ಚಿಕ್ಕ ಮಕ್ಕಳಿಗೆ ರೋಗಬಾಧೆ
