ಉ.ಕ ಸುದ್ದಿಜಾಲ ಬಾಗಲಕೋಟೆ :

ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ ರಸ್ತೆ ಪಕ್ಕದಲ್ಲಿ ಬಿದ್ದ ಬಾಲಕಿ ಮೇಲೆ ಹರಿದ ಟ್ರ್ಯಾಕ್ಟರ್. ಬೈಕ್‌ನಲ್ಲಿದ್ದ 7 ವರ್ಷದ ಬಾಲಕಿ ಸ್ಥಳದಲ್ಲೇ ಸಾವು.

ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದ ಮಂಡ ಬಸಪ್ಪ ದೇವಸ್ಥಾನದ ಬಳಿ ಘಟನೆ. ಮುಧೋಳದಿಂದ ಬರಗಿ ಗ್ರಾಮಕ್ಕೆ ಹೊರಟಿದ್ದ ತಂದೆ ಉಮೇಶ್, ಪುತ್ರಿ ಅಂಜಲಿ. ಮೃತ ಬಾಲಕಿ ಅಂಜಲಿ ಬರಗಿ ಗ್ರಾಮದ ನಿವಾಸಿ.

ತಲೆಗೆ ಗಂಭೀರ ಪೆಟ್ಟುಬಿದ್ದು ಬಾಲಕಿ ಸ್ಥಳದಲ್ಲಿಯೇ ಸಾವು‌. ಕೆಎ 48- 1475 ನಂಬರಿನ ಟ್ರ್ಯಾಕ್ಟರ್. ಅಪಘಾತದ ನಂತರ ಸ್ಥಳದಲ್ಲೇ ಟ್ರ್ಯಾಕ್ಟರ್ ಬಿಟ್ಟು ಚಾಲಕ ಎಸ್ಕೇಪ್.

ಮುಧೋಳ ಠಾಣೆ ವ್ಯಾಪ್ತಿಯಲ್ಲಿ ತಡರಾತ್ರಿ ನಡೆದ ಘಟನೆ, ಈ ಕುರಿತು ಮುಧೋಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು.