ಉ.ಕ ಸುದ್ದಿಜಾಲ ಬಾಗಲಕೋಟೆ :
ಮ್ಯೂಸಿಕ್ ಮೈಲಾರಿ ಪೊಕ್ಸೋ ಪ್ರಕರಣ ಆರೋಪಿ ಮೈಲಾರಪ್ಪ ಉರ್ಫ್ ಮ್ಯೂಸಿಕ್ ಮೈಲಾರಿ ಸಣ್ಣಕಲಕಪ್ಪ ಮಡಿವಾಳರ (29) ಪರೀಕ್ಷೆಗೆ ಹಾಜರು ಆರೋಪಿ ಮೈಲಾರಿಯನ್ನು ಜಿಲ್ಲಾಸ್ಪತ್ರೆಗೆ ಕರೆತಂದಿರುವ ಪೊಲೀಸರು ರಕ್ತದ ಮಾದರಿ, ಕೂದಲಿನ ಮಾದರಿ ಪಡೆಯಲಿರುವ ವೈದ್ಯರು
ಜೊತೆಗೆ ಆರೋಪಿ ಮೈ ಮೇಲಿನ ಬಟ್ಟೆಯನ್ನೂ ವಶಕ್ಕೆ ಪಡೆಯಲಿರುವ ವೈದ್ಯರು ತಪಾಸಣೆ ಬಳಿಕ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಿರುವ ಪೊಲೀಸರು. ಬಾಗಲಕೋಟೆಯಲ್ಲಿರುವ ವಿಶೇಷ ಪೋಕ್ಸೋ ನ್ಯಾಯಾಲಯ. ಮೆಡಿಕಲ್ ಮುಗಿಸಿ ಕೋರ್ಟ್ ಕರೆದೊಯ್ದ ಪೊಲೀಸರು.
ಮೆಡಿಕಲ್ ನಂತರ ಘಟನೆ ಬಗ್ಗೆ ಮಾಧ್ಯಗಳಿಗೆ ಮ್ಯೂಸಿಕ್ ಮೈಲಾರಿ ಸ್ಪಷ್ಟನೆ. ಟ್ರೆಂಡಿಂಗ್ ಸ್ಟಾರ್,ಮ್ಯೂಸಿಕ್ ಮೈಲಾರಿ ಅಂತ ಹೆಸರು ಮಾಡೋಕೆ, ಎಷ್ಟು ಕಷ್ಟ ಪಟ್ಟಿದ್ದಿನಿ ಅಂತ ನನಗೆ ಗೊತ್ತು. ಸ್ಟ್ರಗಲ್ ಮಾಡಿ ಬಡತನದಿಂದ ಬಂದಿದ್ದೇನೆ. ಕೇಸ್ ಮಾಡ್ಯಾರ, ಕಾನೂನಾತ್ಮಕ ಹೋರಾಟ ಮಾಡ್ತೇನೆ. ನನ್ನ ಏಳಿಗೆ ಸಹಿಸಲಾರದೇ ಹಲವು ಬಾರಿ ಈ ರೀತಿ ಮಾಡಿದ್ದಾರೆ.
ಕಾನೂನು ಇದೆ ,ಬಾಬಾ ಸಾಹೇಬರು ಬರೆದ ಸಂವಿಧಾನ ಇದೆ. ಎಲ್ಲರಿಗೂ ಅಲ್ಲಿ ನ್ಯಾಯ ಸಿಗುತ್ತೆ, ನನಗೂ ಸಿಗುತ್ತೆ, ನನ್ನದು ಯಾವುದೇ ತಪ್ಪಿಲ್ಲ ಎಂದು ಸ್ಪಷ್ಟನೆ ನೀಡಿದ ಮೈಲಾರಿ.
ಪೋಕ್ಸೋ ವಿಶೇಷ ನ್ಯಾಯಾಲಯಕ್ಕೆ ಆರೋಪಿ ಮೈಲಾರಿ ಹಾಜರು ಮ್ಯೂಸಿಕ್ ಮೈಲಾರಿ ಪರ ಹಿರಿಯ ವಕೀಲ ಎಸ್.ಸಿ.ಹಿರೇಮಠ ವಾದ ಮೈಲಾರಿ ಪರ ವಕೀಲ
ಅನಿಲ್ ದೊಡಮನಿ ಹೇಳಿಕೆ ಮೈಲಾರಿ ಅವರನ್ನ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
14 ದಿನಗಳ ಕಾಲ ನ್ಯಾಯಾಂಗ ಕಸ್ಟಡಿಗೆ ನೀಡಿದ ಕೋರ್ಟ್. ಕೇಸ್ ನೋಡಿದ್ರೆ ಷಡ್ಯಂತ್ರ ಇದೆ ಎಂದು ಗೊತ್ತಾಗುತ್ತಿದೆ ಪೋಕ್ಸೋ ನ್ಯಾಯಾಲಯದಿಂದ ಆದೇಶವಾಗಿದೆ 30-12-25 ರ ವರೆಗೆ ಕಾನೂನು ಕಸ್ಟಡಿಗೆ ನೀಡಲಾಗಿದೆ ಮುಂದಿನ ಕಾನೂನು ಪ್ರಕ್ರಿಯೆಯನ್ನು ಮುಂದುವರೆಸುತ್ತೇವೆ. ನಾಳೆ ಬೇಲ್ ಗೆ ಮನವಿ ಮಾಡಲಾಗುವುದು ಎಂದ ಆರೋಪಿ ಪರ ವಕೀಲ ಅನೀಲ.
VIDIO – ಮ್ಯೂಸಿಕ್ ಮೈಲಾರಿ ಪೊಕ್ಸೋ ಪ್ರಕರಣ ಬಗ್ಗೆ ಮೈಲಾರಿ ಹೇಳಿದ್ದೇನು? ಬಾಗಲಕೋಟೆ ಎಸ್ಪಿ ಎನಂತಾರೆ?

