ಉ.ಕ ಸುದ್ದಿಜಾಲ ಬೆಳಗಾವಿ :
ಬೆಳಗಾವಿಯಲ್ಲಿ ಮುಂದುವರೆದ ಚಾಕು ಇರಿತ ಪ್ರಕರಣ. ಜಾಮೀನಿನ ಮೇಲೆ ಹೊರ ಬಂದಿದ್ದ ಯುವಕನಿಂದ ಕೊಲೆಗೆ ಯತ್ನ. ಬರೀ ಕಣ್ಣೆತ್ತಿ ನೋಡಿದ್ದಕ್ಕೆ ಚೂರಿಯಿಂದ ಚುಚ್ಚಿ ಕೊಲೆಗೆ ಯತ್ನ. ಬೆಳಗಾವಿಯ ನ್ಯೂ ಗಾಂಧಿ ನಗರದಲ್ಲಿ ಘಟನೆ.
ಶುಕ್ರವಾರದ ನಮಾಜ್ ಮುಗಿಸಿ ಹೊರಗೆ ಬಂದಾಗ ಗಲಾಟೆ. ಜುಶಾನ್ ಚಾವುಸ್ (18) ಗಾಯಗೊಂಡ ಯುವಕ. ಆರೋಪಿ ಮುಜಮ್ಮಿಲ್ ಸತ್ತಿಗೇರಿ (24) ಎಂಬಾತನಿಂದ ಚೂರಿ ಇರಿತ. ಒಂದು ತಿಂಗಳು ಹಿಂದೆಯೇ ಹೈಕೋರ್ಟ್ ಜಾಮೀನು ಮೇಲೆ ಹೊರಗೆ ಬಂದಿದ್ದ ಮುಜಮ್ಮಿಲ್.
ಚೂರಿ ಇರಿದ ಆರೋಪಿ ಕೂಡಲೇ ವಶಕ್ಕೆ ಪಡೆದ ಮಾಳಮಾರುತಿ ಪೊಲೀಸರು. ಗಾಯಗೊಂಡ ಯುವಕ ಜುಶಾನ್ ಗೆ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ. ಆಸ್ಪತ್ರೆಗೆ ಮಾಳಮಾರುತಿ ಪೊಲೀಸರ ಭೇಟಿ ಪರಿಶೀಲನೆ. ಬೆಳಗಾವಿ ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.
ಬೆಳಗಾವಿಯಲ್ಲಿ ಮುಂದುವರೆದ ಚಾಕು ಇರಿತ ಪ್ರಕರಣ – ಬರೀ ಕಣ್ಣೆತ್ತಿ ನೋಡಿದ್ದಕ್ಕೆ ಚೂರಿಯಿಂದ ಚುಚ್ಚಿ ಕೊಲೆಗೆ ಯತ್ನ


