ಉ.ಕ ಸುದ್ದಿಜಾಲ ಬೆಳಗಾವಿ :
ಬೆಳಗಾವಿ ಬೀಮ್ಸ್ ಆಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿ ಸಾವು ಬೆಳಗಾವಿ ತಾಲೂಕಿನ ತುಮ್ಮರಗುದ್ದಿ ಗ್ರಾಮದ ಬಾಣಂತಿ ಕೀರ್ತಿ ನೇಸರಗಿ (21) ಸಾವು.
ಮಾರ್ಚ್ 4 ಮಧ್ಯಾಹ್ನ 12ಕ್ಕೆ ಸಿಜೇರಿನ್ ಮೂಲಕ ಹೆಣ್ಣುಮಗುವಿಗೆ ಜನ್ಮನೀಡಿದ್ದ ಕೀರ್ತಿ. ವಿಪರೀತ ಬ್ಲೀಡಿಂಗ್ ಆಗುತ್ತಿದ್ದರೂ ಅಂದೇ ವಾರ್ಡ್‌ಗೆ ಶಿಫ್ಟ್ ಮಾಡಿದ ಆರೋಪ. ತೀವ್ರ ರಕ್ತಸ್ರಾವದಿಂದ ಸಂಜೆ ಹೊತ್ತಿಗೆ ಕೀರ್ತಿ ಆರೋಗ್ಯದಲ್ಲಿ ಏರುಪೇರು.
ಐಸಿಯುನಲ್ಲಿರಿಸಿ ಬಾಣಂತಿ ಕೀರ್ತಿಗೆ ಚಿಕಿತ್ಸೆ ನೀಡ್ತಿದ್ದ ಬೀಮ್ಸ್ ವೈದ್ಯರು. ಚಿಕಿತ್ಸೆ ಫಲಕಾರಿ ಆಗದೇ ಬಾಣಂತಿ ಕೀರ್ತಿ ಇಂದು ರಾತ್ರಿ ಸಾವು. ವೈದ್ಯರ ನಿರ್ಲಕ್ಷ್ಯವೇ ಬಾಣಂತಿ ಕೀರ್ತಿ ಸಾವಿಗೆ ಕಾರಣವೆಂದು ಪೋಷಕರ ಆರೋಪ.
ಬಿಮ್ಸ್ ವೈದ್ಯರ ವಿರುದ್ಧ ಆಕ್ರೋಶ ಹೊರಹಾಕ್ತಿರುವ ಪೋಷಕರು. ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ.
ಬೆಳಗಾವಿ ಬೀಮ್ಸ್ ಆಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿ ಸಾವು
