ಉ.ಕ ಸುದ್ದಿಜಾಲ ಬೆಳಗಾವಿ :

ಡಿಸಿಸಿ ಬ್ಯಾಂಕ್ ಚುನಾವಣೆ ಹಿನ್ನೆಲೆ. ಅಥಣಿ ಕ್ಷೇತ್ರದಿಂದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ನಾಮಪತ್ರ ಸಲ್ಲಿಕೆ. ನಾಮಪತ್ರ ಸಲ್ಲಿಕೆಯ ಬಳಿಕ ಮಾಧ್ಯಮಗಳಿಗೆ ಸವದಿ ‌ಹೇಳಿಕೆ. 1995 ರಲ್ಲಿ ನನ್ನನ್ನು ಡಿಸಿಸಿ ಬ್ಯಾಂಗ್ ಗೆ ಕಳಿಸಲು ರಾಜು ಕಾಗೆ ಬಹಳ ಮುಖ್ಯ‌.

ರಾಜು ಕಾಗೆ ಹಾಗೂ ನಾನು ಆ ಭಾಗದಲ್ಲಿ ಜೋಡೆತ್ತು ಅಂತ ಕರೀತಾರೆ. ಜೋಡೆತ್ತು ಡಿಸಿಸಿ ಬ್ಯಾಂಕ್ ಗೆ ಹೋಗಬೇಕು ಅಂತ ಆಸೆ ಪಟ್ಟಿದ್ದರು. ನಮ್ಮ ಭಾಗದ ಜನ ಆಸೆ ಪಟ್ಟ ಹಾಗೆ ಇವತ್ತು ನಾವು ನಾಮಿನೇಷನ್ ಮಾಡ್ತಿದ್ದಿವಿ.

ಸೂರ್ಯ ಚಂದ್ರರಿಗೆ ಗ್ರಹಣಗಳು ಪ್ರತಿದಿನ ಹಿಡಿಯಲ್ಲ. ಗ್ರಹಣ ಬಂದ ಸಂದರ್ಭದಲ್ಲಿ ಪೂಜೆ ಪುನಸ್ಕಾರ ಇತ್ಯಾದಿ ಮಾಡಬೇಕಾಗುತ್ತದೆ. ಸೂರ್ಯ ಚಂದ್ರರಿಗೆ ಗ್ರಹಣ ಹಿಡಿದಾಗ ಅವರಿಗೆ ತೊಂದರೆ ಆಗಬಾರದು ಅಂತ ನಾವು ಪೂಜೆ ಪುನಸ್ಕಾರ ಮಾಡ್ತಿವಿ. ರಾಜು ಕಾಗೆ ಹಾಗೂ ನಾನು ಕೂಡಿ ಒಂದು ಬಣ ಮಾಡಿದ್ದೆವೆ. ನಮ್ಮಲ್ಲಿಗೆ ಬರುವವರಿಗೆ ಸ್ವಾಗತ ಮಾಡ್ತಿವಿ ಎಂದರು.

ಸಸಿ ನಾಟುವಾಗ ಸಣ್ಣದಿರುತ್ತೆ ದೊಡ್ಡದಾದ ಮೇಲೆ ಎಲೆಕಾಯಿ ರಂಬೆ ಕೊಂಬೆ ಬರುತ್ತೆ. ಆಟ ಆಡಿಸೋಣು ಮೇಲೊಬ್ಬ ಇದ್ದಾನೆ ನಾವೆಲ್ಲ ಗೊಂಬೆಗಳು ಆಟ ಆಡಬೇಕು. ನಾನು ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ ಇಂದೂ ಅಲ್ಲ ಮುಂದೂ ಅಲ್ಲ‌. ನಾನು ಮಂತ್ರಿಯಾಗಿದ್ದೆನೆ ಉಪಮುಖ್ಯಮಂತ್ರಿಯೂ ಆಗಿ ಅನೇಕ ಇಲಾಖೆಯನ್ನು ನೋಡಿದ್ದೆವೆ.

ಅಥಣಿ ಕಾಗವಾಡಕ್ಕೆ ನಾವು ಅಭ್ಯರ್ಥಿ ಹಾಕಲ್ಲ ಎಂಬ ಬಾಲಚಂದ್ರ ಜಾರಕಿಹೊಳಿ ಹೇಳಿಕೆ ವಿಚಾರ. ಚುನಾವಣೆ ಮುಗಿದ ಮೇಲೆ ಸತ್ಯ ಅಸತ್ಯ ಗೊತ್ತಾಗುತ್ತೆ. ಎರಡೂ ಕ್ಷೇತ್ರದಿಂದ ಈಗಾಗಲೇ ನಾಮಪತ್ರ ಸಲ್ಲಿಕೆ ಆಗಿದೆ ಆದ ಸಂದರ್ಭದಲ್ಲಿ ಪ್ರಶ್ನೆ ಕೇಳೋದು ಅಪ್ರಸ್ತುತ. ಅಥಣಿ ಕ್ಷೇತ್ರದದಲ್ಲಿ 125 ಮತದಾರರಲ್ಲಿ 122 ಜನ ಬೆಂಬಲ ನೀಡಿದ್ದಾರೆ.

ಕಾಗವಾಡ ಕ್ಷೇತ್ರದಲ್ಲಿ 20 ಕ್ಕೂ ಹೆಚ್ಚು ಮತದಾರರು ಬೆಂಬಲ ನೀಡಿದ್ದಾರೆ. ನಾವು ಯಾರಿಗೂ ಹಣ ಕೊಟ್ಟಿಲ್ಲ ಮತ್ತೊಂದು ಕೊಟ್ಟಿಲ್ಲ ಕೇವಲ ಊಟ ಮಾಡಿಸ್ತಿವಿ.

ಬೇರೆ ಕ್ಷೇತ್ರದ ಚುನಾವಣೆಯಲ್ಲಿ ಭಾಗವಹಿಸ್ತಿರಾ ಎಂಬ ಪ್ರಶ್ನೆ. ನಾಮಪತ್ರ ಹಿಂಪಡೆಯುವ ಪ್ರಕ್ರಿಯೇ ಮುಗಿಯಲಿ ಮುಂದೆ ಹೇಳ್ತಿನಿ ಎಂದ ಸವದಿ. ಚುನಾವಣೆ ಆಗಬೇಕು ಸೋಲುದು ಗೊತ್ತಿದ್ದರೂ ಸಹ ಗೆದ್ದೆ ಗೆಲ್ತಿನಿ ಅಂತ ಹೇಳಬೇಕಾಗುತ್ತೆ. ಇದಕ್ಕೆಲ್ಲ ಇತೀಶ್ರೀ ನಾಮಪತ್ರ ವಾಪಸ್ ಪಡೆದ ನಂತರ ಆಗುತ್ತೆ.
ನಾಮಪತ್ರ ವಾಪಸ್ ಪಡೆದ ಮೇಲೆ ಸತ್ಯ ಅಸತ್ಯ ಎಲ್ಲಾ ಗೊತ್ತಾಗುತ್ತೆ.

ಮುರುಗೋಡ ಅಜ್ಜನವರ ಆತ್ಮಕ್ಕೆ ಶಾಂತಿ ಸಿಗಬೇಕು ಅಶಾಂತಿ ಆಗಬಾರದು. ಯಾರೂ ಕೂಡ ಪ್ರತಿಷ್ಠೆಗೆ ಬೀಳಬಾರದು ಎಂದು ಮನವಿ ಮಾಡುವೆ ಎಂದ ಸವದಿ. ರಮೇಶ್ ಕತ್ತಿ ನಾನು ದಿನಾಲೂ ಮಾತಾಡ್ತಿವಿ. ನಾವು ಮಾತು ಕತೆ ನಿಲ್ಲಿಸಿಯೇ ಇಲ್ಲ. ಉಮೇಶ್ ಕತ್ತಿ ಗ್ರಂಥ ಬಿಡುಗಡೆಗೆ ಹೋಗದಿರುವುದು ನನಗೆ ಖೇದವಿದೆ. ರಮೇಶ್ ಅವರು ನನಗೂ ಕೂಡ ಆಹ್ವಾನ ನೀಡಿದ್ದರು ಎಂದ ಸವದಿ..

ನವೆಂಬರ್ ಕ್ರಾಂತಿ ಆಗುತ್ತಾ ಎಂಬ ವಿಚಾರ. ಸಿಎಂ ಡಿಸಿಎಂ ಹಾಗೂ ಹೈಕಮಾಂಡ್ ಗೆ ಈ ಪ್ರಶ್ನೆ ಕೇಳಿ. ನೀವು ರಾಂಗ್ ಅಡ್ರೇಸ್ಸಿಗೆ ಪತ್ರ ಬರೆದರೆ ಆ ಪತ್ರ ತಲುಪೋದಿಲ್ಲ ಎಂದ ಸವದಿ.