ಉ.ಕ ಸುದ್ದಿಜಾಲ ಬೆಳಗಾವಿ :
ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಗೆ ಇಂದೇ ಕ್ಲೈಮ್ಯಾಕ್ಸ್ 16 ನಿರ್ದೇಶಕ ಸ್ಥಾನಗಳ ಪೈಕಿ 9 ನಿರ್ದೇಶಕರ ಅವಿರೋಧ ಆಯ್ಕೆ ಇನ್ನೂ 7 ತಾಲೂಕಿನ ನಿರ್ದೇಶಕ ಸ್ಥಾನಕ್ಕೆ ಇಂದು ಚುನಾವಣೆ. ಇಂದೇ ಮತದಾನ, ಸಂಜೆಯೆ ಮತ ಏಣಿಕೆ ಕಾರ್ಯ ಕ್ಯಾಂಪ್ ಪ್ರದೇದ ಬಿ.ಕೆ.ಮಾಡೆಲ್ ಸ್ಕೂಲ್ ನಲ್ಲಿ ಚುನಾವಣೆ.
ಬೆಳಗಾವಿ ಎಸಿ ಶ್ರವಣಕುಮಾರ್ ನಾಯಕ್ ಚುನಾವಣೆ ಅಧಿಕಾರಿ ಮತದಾನದ ಹಕ್ಕು ಪಡೆದ ಅರ್ಹ ಪಿಕೆಪಿಎಸ್ ಸದಸ್ಯರಿಂದ ಮತದಾನ ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೂ ನಡೆಯಲಿರುವ ಮತದಾನ ಸಂಜೆ 4ಗಂಟೆಯಿಂದ ಮತ ಏಣಿಕೆ ಪ್ರಕ್ರಿಯೆ ಪ್ರಾರಂಭ ಮತ ಏಣಿಕೆ ಕೇಂದ್ರದಲ್ಲಿ ಅಭ್ಯರ್ಥಿಗಳು, ಏಜೆಂಟ್, ಪೊಲೀಸ್, ಚುನಾವಣಾ ಸಿಬ್ಬಂದಿಗಳಿಗೆ ಮೊಬೈಲ್ ನಿಷೇಧ.
ಗೌಪ್ಯ ಮತದಾನ ಇರೋದ್ರಿಂದ ಯಾರೇ ಮತ ಬಹಿರಂಗ ಪಡಿಸಿದ್ರೆ ಮತ ಅನರ್ಹ ಸಿಸಿಟಿವಿ ಕಣ್ಗಾವಲಿನಲ್ಲಿ ನಡೆಯಲಿರೋ ಚುನಾವಣೆ ಬೈಲಹೊಂಗಲ 73, ಕಿತ್ತೂರು 29, ಅಥಣಿ 125, ರಾಯಬಾಗ 205, ಹುಕ್ಕೇರಿ 90, ರಾಮದುರ್ಗ 35, ನಿಪ್ಪಾಣಿ 119 ಮತದಾನ ನಡೆಯಲಿದೆ.
ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣಾ ಅಖಾಡ ಇಂದು ಜಾರಕಿಹೊಳಿ ಬ್ರದರ್ಸ್ ಸವದಿ ಕತ್ತಿ ಬಣಕ್ಕೆ ಮಹತ್ವದ ದಿನ ಪ್ರಭಾವಿ ರಾಜಕೀಯ ಕುಟುಂಬಗಳ ಮಧ್ಯೆ ದ್ವೇಷದ ರಾಜಕೀಯಕ್ಕೆ ಮುನ್ನುಡಿ ಅಥಣಿಯಲ್ಲಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ವರ್ಸಸ್ ಮಾಜಿ ಶಾಸಕ ಮಹೇಶ ಕುಮಟಳ್ಳಿ.
ಹುಕ್ಕೇರಿ ಮಾಜಿ ಸಂಸದ ರಮೇಶ್ ಕತ್ತಿ ವರ್ಸಸ್ ರಾಜೇಂದ್ರ ಪಾಟೀಲ್. ನಿಪ್ಪಾಣಿ ಮಾಜಿ ಸಂಸದ ಅಣ್ಣಸಾಹೇಬ್ ಜೋಲ್ಲೆ ವರ್ಸಸ್ ಉತ್ತಮ ಪಾಟೀಲ್ ಕಿತ್ತೂರಿನಲ್ಲಿ ನಾನಾಸಾಹೇಬ್ ಪಾಟೀಲ್ ವರ್ಸಸ್ ವಿಕ್ರಮ್ ಇನಾಮದಾರ.
ಬೈಲಹೊಂಗಲನಲ್ಲಿ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ವರ್ಸಸ್ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ್ ರಾಮದುರ್ಗ ಮಲ್ಲಣ್ಣ ಯಾದವಾಡ ವರ್ಸಸ್ ಎಸ್.ಎಸ್.ಡವಣ ರಾಯಬಾಗ ಹಾಲಿ ಅಧ್ಯಕ್ಷ ಅಪ್ಪಾಸಾಹೇಬ್ ಕುಲಗೋಡೆ ವರ್ಸಸ್ ಬಸಗೌಡ ಆಸಂಗಿ.
ಈ ಏಳು ಮತಕ್ಷೇತ್ರದಲ್ಲಿ ಜಾರಕಿಹೊಳಿ ಬ್ರದರ್ಸ್ ವರ್ಸಸ್ ಸವದಿ ಕತ್ತಿ ಬಣದ ಮಧ್ಯೆ ಜಿದ್ದಾಜಿದ್ದಿನ ಫೈಟ್‌ಗೆ ಇಂದು ಕ್ಲೈಮೆಕ್ಸ್.
ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಗೆ ಇಂದೇ ಕ್ಲೈಮ್ಯಾಕ್ಸ್
