ಉ.ಕ ಸುದ್ದಿಜಾಲ ಬೆಳಗಾವಿ :

ಕೃಷಿ ಹೊಂಡದಲ್ಲಿ ನೀರು ತುಂಬಲು ಹೋಗಿ ತಂದೆ, ಮಗ ಸಾವನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮಳಗಲಿ ಗ್ರಾಮದ ಹೊರ ವಲಯದಲ್ಲಿ ನಡೆದಿದೆ.

ಬಸವರಾಜ ಕೆಂಗೇರಿ(40), ಧರೆಪ್ಪ ಕೆಂಗೇರಿ(13) ಸಾವು. ಕೃಷಿ ಕೆಲಸಕ್ಕೆ ಎಂದು ತಮ್ಮ ಜಮೀನಿಗೆ ಹೋಗಿದ್ದ ತಂದೆ, ಮಗ. ಬಳಿಕ ದೇಸಾಯಿ ಎಂಬುವರ ಜಮೀನಿನಲ್ಲಿ ನೀರು ತುಂಬಲು ಹೋದಾಗ ಘಟನೆ.

ಮರುಗೋಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ ಮುರಗೋಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.