ಉ.ಕ ಸುದ್ದಿಜಾಲ ಬೆಳಗಾವಿ :

ರಾಜ್ಯದಲ್ಲಿ ಮಹಿಳಾ, ಮಕ್ಕಳ ರಕ್ಷಣಾ ಕೇಂದ್ರಗಳಿಗೆ ಇಲ್ಲ ಸುರಕ್ಷತೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತವರು ಜಿಲ್ಲೆಯಲ್ಲಿ ಹೀನ ಕೃತ್ಯ. ಮಕ್ಕಳ ರಕ್ಷಣಾ ಕೇಂದ್ರದಿಂದಲೇ ಸಂತ್ರಸ್ತ ಬಾಲಕಿ ಕಿಡ್ನಾಪ್.

13ನೇ ವಯಸ್ಸಿನಲ್ಲಿಯೇ ಬಾಲ್ಯ ವಿವಾಹ ಆಗಿದ್ದ ಸಂತ್ರಸ್ತೆ. ಸದ್ಯ ನಾಲ್ಕು ತಿಂಗಳು ಗರ್ಭಣಿಯಾಗಿರೋ ಬಾಲಕಿ. ಆಸ್ಪತ್ರೆಗೆ ಹೋಗಿದ್ದ ವೇಳೆಯಲ್ಲಿ ಪ್ರಕರಣ ಬೆಳಕಿಗೆ. ಬಳಿಕ ಸಂತ್ರಸ್ತೆಯನ್ನು ಸೃಷ್ಠಿ ಮಕ್ಕಳ ರಕ್ಷಣಾ ಕೇಂದ್ರಕ್ಕೆ ಶಿಫ್ಟ್.

ಬೆಳಗಾವಿಯ ಮಹಾಂತೇಶ ನಗರದಲ್ಲಿ ಇರೋ ಕೇಂದ್ರ. ರಕ್ಷಣಾ ಕೇಂದ್ರಕ್ಕೆ ಚಿಕ್ಕಪ್ಪ ಎಂದು ಹೇಳಿಕೊಂಡು ಬಂದ ಪತಿ. ಔಷಧಿ ನೀಡುವ ನೇಪದಲ್ಲಿ ರಕ್ಷಣಾ ಕೇಂದ್ರಕ್ಕೆ ಅಕ್ರಮ ಪ್ರವೇಶ. ಪ್ರಶ್ನಿಸಿದ ಸಿಬ್ಬಂದಿಗೆ ಬೆದರಿಕೆ ಹಾಕಿ ರಕ್ಷಣಾ ಕೇಂದ್ರಕ್ಕೆ ಎಂಟ್ರಿ.

ಬಳಿಕ ಸಿಬ್ಬಂದಿಗೆ ಚಾಕು ತೋರಿಸಿ ಯುವತಿಯನ್ನು ಕಿಡ್ನಾಪ್. ರಕ್ಷಣಾ ಕೇಂದ್ರದಲ್ಲಿ ಸಿಸಿಟಿವಿ ಇಲ್ಲ, ಸೆಕ್ಯುರಿಟಿ ಗಾರ್ಡ್ ಇಲ್ಲ. ರಕ್ಷಣಾ ಸಿಬ್ಬಂದಿಯಿಂದ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಕೇಸ್. ನಾಲ್ಕು ತಿಂಗಳ ಗರ್ಭಿಣಿಯಾಗಿರೋ ಸಂತ್ರಸ್ತ ಬಾಲಕಿ.
ಆರೋಪಿ ಪತಿಯನ್ನು ಹುಡುಕಿ ಅರೆಸ್ಟ್ ಮಾಡಿದ ಪೊಲೀಸರು.