ಉ.ಕ ಸುದ್ದಿಜಾಲ ಬೆಳಗಾವಿ ‌:

ಪಿಡಿಓಗೆ ದರ್ಪ ತೋರಿದ ಮರಾಠಿ ಪುಂಡನಿಗೆ ಎಂಇಎಸ್‌ನಿಂದ ಸನ್ಮಾನ. ಎಂಇಎಸ್ ನಿಷೇಧಿಸುವಂತೆ ಆಗ್ರಹಿಸಿ ಇಂದು ಕರ್ನಾಟಕ ಬಂದ್ ಕರೆ. ಕನ್ನಡ ಸಂಘಟನೆಗಳ ಒಕ್ಕೂಟದಿಂದ ಕರ್ನಾಟಕ ಬಂದ್ ಕರೆ. ಈ ಮಧ್ಯೆಯೇ ನಾಡದ್ರೋಹಿ ಎಂಇಎಸ್ ಮುಖಂಡರಿಂದ‌ ಪ್ರಚೋದನಾತ್ಮಕ ನಡೆ.

ಕಿಣಯೇ ಗ್ರಾಮದ ತಿಪ್ಪಣ್ಣ ಡೋಕ್ರೆಗೆ ಸನ್ಮಾನಿಸಿದ ಎಂಇಎಸ್ ಮುಖಂಡ ಶುಭಂ ಶಳ್ಕೆ. ಜೈಲಿನಿಂದ ಹೊರಬರುತ್ತಿದ್ದಂತೆ ತಿಪ್ಪಣ್ಣ ಡೋಕ್ರೆಗೆ ಸನ್ಮಾನಿಸಿದ ಎಂಇಎಸ್ ಮುಖಂಡ. ಮರಾಠಿ ಭಾಷೆಯಲ್ಲಿ ದಾಖಲೆ ಕೊಡಬೇಕು, ಮರಾಠಿಯಲ್ಲೇ ಮಾತನಾಡಬೇಕೆಂದು ದರ್ಪ ತೋರಿದ್ದ ತಿಪ್ಪಣ್ಣ.

ಕಿಣಯೇ ಗ್ರಾಪಂ ಪಿಡಿಒ ನಾಗೇಂದ್ರ ಪತ್ತಾರರನ್ನು ನಿಂಧಿಸಿದ್ದ ತಿಪ್ಪಣ್ಣ ‌ಡೋಕ್ರೆ. ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ತಿಪ್ಪಣ್ಣ ‌ಡೋಕ್ರೆ ಬಂಧಿಸಿ ಜೈಲಿಗಟ್ಟಿದ್ದ ಪೊಲೀಸರು. ಹಿಂಡಲಗಾ ಜೈಲಿನಿಂದ ಹೊರಬರುತ್ತಿದ್ದಂತೆ ತಿಪ್ಪಣ್ಣ ಡೋಕ್ರೆಗೆ ಸನ್ಮಾನ.

ತಿಪ್ಪಣ್ಣ ‌ಡೋಕ್ರೆ ಮನೆಗೆ ಹೋಗಿ ಸನ್ಮಾನಿಸಿದ ಎಂಇಎಸ್ ಮುಖಂಡ ‌ಶುಭಂ ಶಳ್ಕೆ. ಈ ಹಿಂದೆ ಕನ್ನಡ ಪರ ಹೋರಾಟಗಾರರಿಗೆ ನಾಲಯಕ್ ಎಂದಿದ್ದ ಶುಭಂ ಶಳ್ಕೆ.