ಉ.ಕ ಸುದ್ದಿಜಾಲ ಬೆಳಗಾವಿ :
ಬೆಳಗಾವಿಯಲ್ಲಿ ಇಬ್ಬರ ವ್ಯಕ್ತಿಗಳ ನಡುವೆ ಮಾರಾಮಾರಿ ನಡೆದಿದೆ. ಬೆಳಗಾವಿ ರೈಲ್ವೆ ನಿಲ್ದಾಣದ ರೈಲಿನಲ್ಲಿ ಈ ಘಟನೆ ನಡೆದಿದ್ದು ಬೆಳಗಾವಿಯಿಂದ ಬೆಂಗಳೂರಿಗೆ ಹೋಗುವಾಗ ರೈಲಿನ ಬೋಗಿಯಲ್ಲಿ ನಡೆದ ಘಟನೆ ಇದಾಗಿದೆ.
ಬೆಳಗಾವಿ ಟು ಕೆಎಸ್ ಆರ್ ಬೆಂಗಳೂರು ಸೂಪರ್ ಫಾಸ್ಟ್ ರೈಲಿನಲ್ಲಿ ನಡೆದ ಜಗಳ ನಡೆದಿದೆ. ಬೆಳಗಾವಿಯಲ್ಲಿ ಅದು ಸೀಟು ನಂದು ಎಂದು ಇಬ್ಬರ ಪ್ರಯಾಣಿಕರ ನಡುವೆ ಶುರುವಾದ ಜಗಳ. ಸೀಟಿಗಾಗಿ ವಾಗ್ವಾದ ಶುರುವಾಗಿ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಯಿತು.
ಅವ್ಯಾಚ್ಛ ಶಬ್ದಗಳ ನಿಂದನೆ ಮೂಲಕ ನೂರಾರು ಸಂಖ್ಯೆ ಪ್ರಯಾಣಿಕರ ಮಧ್ಯೆ ಬಡಿದಾಟ ಶುರು. ಇಬ್ಬರು ಪ್ರಯಾಣಿಕರು ಬೆಂಗಳೂರಿನತ್ತ ಪ್ರಯಾಣ ಬೆಳಸಿದ ಸಂದರ್ಭದಲ್ಲಿ ನಡೆದ ಜಗಳ. ಒಬ್ಬರ ಮೇಲೆ ಒಬ್ಬರು ಬಿದ್ದು ಬಡಿದಾಡಿಕೊಂಡ ಪ್ರಯಾಣಿಕರು.
ರೈಲ್ವೆ ಪೋಲಿಸ್ ಆಗಮಿಸಿ ಇಬ್ಬರಿಗೂ ತರಾಟೆ ತೆಗೆದುಕೊಂಡ ನಂತರ ಮುಗಿದ ಜಗಳ. ಬೆಳಗಾವಿ ರೈಲ್ವೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.