ಉ.ಕ‌ ಸುದ್ದಿಜಾಲ ವಿಜಯಪೂರ :

ಭೀಮಾತೀರದ ಚಡಚಣ ಪಟ್ಟಣದಲ್ಲಿ ಎಸ್‌ಬಿಐ ಬ್ಯಾಂಕ್ ದರೋಡೆ ಪ್ರಕರಣ. ಬ್ಯಾಂಕ್ ದರೋಡೆ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್. ಬ್ಯಾಂಕ್‌ನಲ್ಲಿ ದರೋಡೆ ಚಿನ್ನ ತುಂಬಿಕೊಂಡಿದ್ದ ಬ್ಯಾಗ್ ಪತ್ತೆ…

ಮಹಾರಾಷ್ಟ್ರದ ಹುಲಜಂತಿ ಗ್ರಾಮದ ಮನೆಯ ಮೇಲೆ ಚಿನ್ನದ ಬ್ಯಾಗ್ ಪತ್ತೆ. ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದಲ್ಲಿನ ಎಸ್‌ಬಿಐ ಬ್ಯಾಂಕ್‌ನಲ್ಲಿ ಮೂವರು ಮಾಸ್ಕ್ ಧರಿಸಿ, ಗನ್ ತೋರಿಸಿ ದರೋಡೆ ಮಾಡಿದ್ದರು. ಬ್ಯಾಗ್‌ನಲ್ಲಿ ಎಷ್ಟು ಚಿನ್ನ, ನಗದು ಇದೆ ಎಂದು ತನಿಖೆ ಕೈಗೊಂಡ ಚಡಚಣ ಪೊಲೀಸರು…

ಸೆಪ್ಟೆಂಬರ್ 16ರ ಸಂಜೆ 6-20ಕ್ಕೆ ನಡೆದಿದ್ದ ದರೋಡೆ. ಎರಡು ದಿನದ ಬಳಿಕ ದರೋಡೆ ಬ್ಯಾಗ್ ಪತ್ತೆ. ಬ್ಯಾಂಕ್ ದರೋಡೆ ಮಾಡಿ ನಗದು ಚಿನ್ನಾಭರಣ ಸಾಗಿಸುತ್ತಿದ್ದ ಕಾರು ಹುಲಜಂತಿ ಬಳಿ ಅಪಘಾತ. ಅಪಘಾತ ಬಳಿಕ ಕಾರು ಬಿಟ್ಟು ಚಿನ್ನ ನಗದು ತೆಗೆದುಕೊಂಡು ಹೋಗಿದ್ದ ದರೋಡೆಕೋರರು…

ಚಿನ್ನದ ಬ್ಯಾಗ್ ಹುಲಜಂತಿ ಗ್ರಾಮದ ಮನೆ ಮೇಲೆ ಎಸೆದು ಹೋಗಿರೋ ಶಂಕೆ. 1 ಕೋಟಿ 4ಲಕ್ಷ ನಗದು 20ಕೋಟಿ ಚಿನ್ನಾಭರಣ ಕದ್ದಿದ್ದ ದರೋಡೆಕೋರರು. ಚಡಚಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲು.