ಚಿಕ್ಕೋಡಿ :
ಚಿಕ್ಕೋಡಿಯ ಕೆಎಲ್ಇ ಇಂಜಿನೀಯರಿಂಗ್ ಕಾಲೇಜ ವತಿಯಿಂದ ಡಿಪ್ಲೊಮಾ ಅಂತೀಮ ವರ್ಷದ ವಿದ್ಯಾರ್ಥಿಗಳಿಗೆ ಆನಲೈನ್ ಪ್ರಾಜೆಕ್ಟ ಸ್ಪರ್ಧೆ ಕೌಶಲ್ಯ ೨ ಕೆ ೨೧ ಗುರುವಾರ ನವ್ಹೆಂಬರ್ ೧೧ ರಂದು ಹಮ್ಮಿಕೊಳ್ಳಲಾಗಿದೆ. ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ಪ್ರದರ್ಶಿಸಲೂ ಇದು ಒಂದು ಒಳ್ಳೆಯ ವೇದಿಕೆಯಾಗಿದ್ದು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಪ್ರಾಚಾರ್ಯರಾದ ಡಾ. ಪ್ರಸಾದ ರಾಂಪೂರೆ ತಿಳಿಸಿದ್ದಾರೆ.
ಈ ಸ್ಪರ್ಧೆಯು ಸಿವಿಲ್, ಮೆಕ್ಯಾನೀಕಲ್, ಇಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸಾಯನ್ಸ್ ವಿಭಾಗಗಳಲ್ಲಿದ್ದು, ಪ್ರತಿ ವಿಭಾಗದಲ್ಲಿ ಅತ್ಯುತ್ತಮ ಪ್ರಾಜೆಕ್ಟಗೆ ನಗದು ಬಹುಮಾನ ಪ್ರಥಮ ಸ್ಥಾನಕ್ಕೆ 2,000ರೂ, ದ್ವೀತಿಯ ಸ್ಥಾನಕ್ಕೆ 1,000ರೂ. ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಯಾವುದೇ ನೊಂದಣಿ ಶುಲ್ಕ ಇರುವದಿಲ್ಲ. ಈ ಆನಲೈನ್ ಸ್ಪರ್ಧೆಯನ್ನು ಗೂಗಲ್ ಮಿಟ್ ಮುಖಾಂತರ ಜರುಗಲಿದೆ. ವಿದ್ಯಾರ್ಥಿಗಳು ತಮ್ಮ ಹೆಸರು ನೊಂದಾಯಿಸಲೂ ಕೆಳಗಿನ ಲಿಂಕ್ ಬಳಸಿ https://forms.gle/sEbanTJKPTaUvDcr5
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಮೊಬೈಲ್ ಸಂಖ್ಯೆ –
ಸಿವಿಲ್ ವಿದ್ಯಾರ್ಥಿಗಳು – 9035809669
ಮೆಕ್ಯಾನಿಕಲ್ ವಿದ್ಯಾರ್ಥಿಗಳು – 9632749643
ಇಲೆಕ್ಟ್ರಾನಿಕ್ಸ್ ವಿದ್ಯಾರ್ಥಿಗಳು – 9989190121
ಕಂಪ್ಯೂಟರ್ ಸಾಯನ್ಸ್ ವಿದ್ಯಾರ್ಥಿಗಳು – 9900930414
ಹೆಚ್ಚಿನ ಮಾಹಿತಿಗಾಗಿ ಸಂಯೋಜಕರಾದ ಡಾ. ಮಹಾಂತಯ್ಯ ಮಠಪತಿ 9739866342, ಪ್ರೊ. ಅಭಿನಂದನ ಕಬ್ಬೂರ 9620088488 ಅಥವಾ ಕಾಲೇಜಿನ ವೆಬ್ಸೈಟ್ www.klecet.edu.in ಗೆ ಸಂಪರ್ಕಿಸಿ.