ಉ.ಕ ಸುದ್ದಿಜಾಲ ಚಿತ್ರದುರ್ಗ :

ಗಂಡು ಮಗುವಿಗೆ ಜನ್ಮ ನೀಡಿದ ಅಪ್ರಾಪ್ತ ಬಾಲಕಿ, ಹಾಸ್ಟೆಲ್ನಲ್ಲಿದ್ದು PUC ಓದುತ್ತಿದ್ದ ವಿದ್ಯಾರ್ಥಿನಿಗೆ ಗಂಡು ಮಗು ಜನನ ಪ್ರೀತಿಯ ಬಲೆಯಲ್ಲಿ ಬಿದ್ದು ಗರ್ಭಿಣಿಯಾಗಿದ್ದ ಅಪ್ರಾಪ್ತೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ಸರ್ಕಾರಿ ಆಸ್ಪತ್ರೆಯಲ್ಲಿ ಅಪ್ರಾಪ್ತೆಗೆ ಹೆರಿಗೆ.

ಹಿರಿಯೂರು ತಾಲ್ಲೂಕಿನ ಕರಿಯಣ್ಣ ಎಂಬ ಚಾಲಕನನ್ನ ಪ್ರೀತಿಸಿದ್ದ ಬಾಲಕಿ. ನಿನ್ನೆ ಹಾಸ್ಟೆಲ್ಲಿಂದ ಕರೆದೊಯ್ದು ಹೆರಿಗೆ ಮಾಡಿಸಿದ್ದ ಬಾಲಕಿ ತಾಯಿ. ಅಪ್ರಾಪ್ತೆ ಎಂದು ತಿಳಿದು ಆಸ್ಪತ್ರೆ ಸಿಬ್ಬಂಧಿ ಸಮಾಜ ಕಲ್ಯಾಣ ಇಲಾಖೆ ಪೊಲೀಸರಿಗೆ ಮಾಹಿತಿ. ಮಾಹಿತಿ ತಿಳಿದು ಪರಿಶೀಲಿಸಿ ಫೋಕ್ಸೋ ಕೇಸ್ ದಾಖಲು.

ಬಾಲಕಿಯ ಪ್ರಿಯಕರ ಕರಿಯಣ್ಣನ ವಿರುದ್ದ ಫೋಕ್ಸೋ FIR ದಾಖಲು. ಹಿರಿಯೂರು ನಗರ ಪೋಲೀಸ್ ಠಾಣೆಯಲ್ಲಿ FIR ದಾಖಲು. ಅಪ್ರಾಪ್ತೆ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಸಖಿ ಕೇಂದ್ರಕ್ಕೆ ಶಿಫ್ಟ್. ಪ್ರಕರಣ ದಾಖಲಾಗುತ್ತಿದ್ದಂತೆ ಪ್ರಿಯಕರ ಆರೋಪಿ ಕರಿಯಣ್ಣ ಪರಾರಿ.