ಉ.ಕ ಸುದ್ದಿಜಾಲ ಚಿಕ್ಕೋಡಿ :
ಮಹಾರಾಷ್ಟ್ರದ ಇಚಲಕರಂಜಿಗೆ ಕಲ್ಲೋಳ ಬಳಿಯ ಕೃಷ್ಣಾ ನದಿಯಿಂದ ನೀರು ಪೂರೈಸುವ ರಾಧಾಕೃಷ್ಣ ಯೋಜನೆ ವಿರೋಧಿಸಿ ಕಲ್ಲೋಳ ಬ್ಯಾರೇಜ್ ಹತ್ತಿರ ಸೋಮವಾರ ರೈತರು ಪ್ರತಿಭಟನೆ ನಡೆಸಿದರು.
ಕರ್ನಾಟಕ ಗಡಿ ಭಾಗದ ಕೃಷಿ, ಕುಡಿಯುವ ನೀರು ಹಾಗೂ ಪರಿಸರದ ಮೇಲೆ ಉಂಟಾಗಬಹುದಾದ ಗಂಬಿರ ಪರಿಣಾಮ ಪರಿಗಣಿಸಿ ಯೋಜನೆ ತಡೆಹಿಡಿಯಬೇಕು. ಬೆಳಗಾವಿ ಜಿಲ್ಲೆಯ ಗಡಿ ಭಾಗದ ತಾಲ್ಲೂಕುಗಳಾದ ಚಿಕ್ಕೋಡಿ, ನಿಪ್ಪಾಣಿ, ರಾಯಬಾಗ, ಆಥಣಿ ಮತ್ತು ಕಾಗವಾಡ ತಾಲ್ಲೂಕುಗಳಲ್ಲಿ ರೈತರು ಹಾಗೂ ಕನ್ನಡಿಗರು ಎದುರಿಸುತ್ತಿರುವ ಬೃಹತ್ ಜಲ ಕಂಟಕದ ಕುರಿತು ಸರ್ಕಾರದ ಗಮನಸೆಳೆಯಲು ಹೋರಾಟ ಮಾಡಲಾಗುತ್ತಿದೆ ಎಂದು ರೈತರು ತಿಳಿಸಿದರು.
ಮಹಾರಾಷ್ಟ್ರದ ಇಚಲಕರಂಜಿ ನಗರದ (ರಾಧಾಕೃಷ್ಣ ನೀರು ಸರಬರಾಜು) ಕುಡಿಯುವ ನೀರಿನ ಉದ್ದೇಶಕ್ಕಾಗಿ ಕರ್ನಾಟಕದ ಗಡಿಯೊಳಗಿನ ಕೃಷ್ಣಾ ನದಿಯ ಬ್ಯಾರೇಜ್ ಹಿನ್ನೀರಿನ ಪ್ರದೇಶದಲ್ಲಿ ಅಂದರೆ ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಗ್ರಾಮದ ಸಮೀಪ ಯೋಜನೆ ಆರಂಭಿಸಲು ಮಹಾರಾಷ್ಟ್ರ ಸರ್ಕಾರ ಸದ್ದಿಲ್ಲದೇ ಸಿದ್ಧತೆ ನಡೆಸುತ್ತಿದೆ. ಈ ಯೋಜನೆ ಗಡಿ ಭಾಗದ ಕೃಷಿ, ಅಂತರ್ಜಲ ಕುಡಿಯುವ ನೀರು ಮತ್ತು ಪರಿಸರದ ಮೇಲೆ ಅತ್ಯಂತ
ಚಿಕ್ಕೋಡಿ ಬಳಿಯ ಕಲ್ಲೋಳ ಗ್ರಾಮದ ಕೃಷ್ಣಾ ಬ್ಯಾರೇಜ್ ಬಳಿ ರೈತರು ಮಹಾರಾಷ್ಟ್ರ ಸರ್ಕಾರದ ಉದ್ದೇಶಿತ ರಾಧಾಕೃಷ್ಣ ನೀರು ಸರಬರಾಜು ಯೋಜನೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು.
ಕರ್ನಾಟಕದ ವಿರುದ್ಧ ಮಹಾರಾಷ್ಟ್ರದ ಮತ್ತೊಂದು ಕಿತಾಪತಿ, ಗಡಿ ಭಾಗದ ಕನ್ನಡಿಗರ ಪಾಲಿನ ನೀರಿನ ಮೇಲೂ ಬಿತ್ತು ಮಹಾರಾಷ್ಟ್ರದ ಕಣ್ಣು. ವಿವಾದಾತ್ಮಕ ನೀರಾವರಿ ಯೋಜನೆ ಘೋಷಣೆ ಮಾಡಿದ ಮಹಾರಾಷ್ಟ್ರ ಸಿಎಂ. ದೇವೇಂದ್ರ ಫಡ್ನವಿಸ್ ತೀರ್ಮಾನಕ್ಕೆ ಗಡಿ ಭಾಗದ ಜನರ ತೀವ್ರ ಆಕ್ರೋಶ. ಸಿಎಂ ಡಿಕೆಶಿ ಎಚ್ಚುತ್ತುಕೊಳ್ಳದಿದ್ರೆ ಕೃಷ್ಣಾನದಿ ಪಾತ್ರದ ರೈತರಿಗೆ ಆಗಲಿದೆ ದೊಡ್ಡ ನಷ್ಟ.
ಮಹಾರಾಷ್ಟ್ರ ಸಿಎಂ ಘೋಷಣೆ ಮಾಡಿದ ಆ ಯೋಜನೆ ಯಾವುದಂತಿರಾ?
ರಾಧಾಕೃಷ್ಣ ಏತನೀರಾವರಿ ಯೋಜನೆ ಘೋಷಣೆ ಮಾಡಿ ಕಿಚ್ಚೆಬ್ಬಿಸಿದ ಫಡ್ನವಿಸ್. ಈ ಯೋಜನೆ ಮೂಲಕ ಮಹಾರಾಷ್ಟ್ರದ ಇಚಲಕರಂಜಿಗೆ 4 ಟಿಎಂಸಿ ನೀರು ಒಯ್ಯಲು ಪ್ಲ್ಯಾನ್. ಏತನೀರಾವರಿ ಯೋಜನೆ ಮೂಲಕ ಕೃಷ್ಣಾ ನದಿಯಿಂದ ಇಚಲಕರಂಜಿಗೆ ನೀರು. ಮಹಾರಾಷ್ಟ್ರ ಶಿರೋಳ ತಾಲೂಕಿನ ದಾನವಾಡದಲ್ಲಿ ಯೋಜನೆ ಜಾರಿಗೆಗೆ ಪ್ಲ್ಯಾನ್. ಈ ಯೋಜನೆ ಜಾರಿಯಾದ್ರೆ ಕಲ್ಲೋಳ ಬ್ರಿಡ್ಜ್ ಮೂಲಕ ರಾಜ್ಯಕ್ಕೆ ಬರು ನೀರಿನ ಪ್ರಮಾಣ ಇಳಿಮುಖ. ಆ ಮೂಲಕ ಕೃಷ್ಣಾ ನದಿ ಪಾತ್ರದ ಐದು ಜಿಲ್ಲೆಗಳ ರೈತರಿಗೆ ಆಗಲಿದೆ ದೊಡ್ಡ ನಷ್ಟ. ಬೆಳಗಾವಿ, ಬಾಗಲಕೋಟೆ, ವಿಜಯಪುರ, ಯಾದಗಿರಿ, ರಾಯಚೂರಲ್ಲಿ ಸೃಷ್ಟಿ ಆಗಲಿದೆ ಹಾಹಾಕಾರ.
ಕರ್ನಾಟಕದ ಅನುಮತಿ ಪಡೆಯದೇ ವಿವಾದಾತ್ಮಕ ಯೋಜನೆ ಜಾರಿಗೆಗೆ ಮುಂದಾದ ಮಹಾರಾಷ್ಟ್ರ. ಆ ಮೂಲಕ ಮಹಾರಾಷ್ಟ್ರದಿಂದ ಅಂತಾರಾಜ್ಯ ನದಿ ನೀರು ಹಂಚಿಕೆ ಅಧಿನಿಯಮ ಉಲ್ಲಂಘನೆ . ಅಂತಾರಾಜ್ಯದ ನದಿಗಳ ನೀರು ಬಳಕೆ ಮಾಡುವಾಗ ನದಿ ಹರಿಯುವ ರಾಜ್ಯಗಳ ಅನುಮತಿ ಪಡೆಯಬೇಕೆಂಬ ನಿಯಮ.
ಮಹಾರಾಷ್ಟ್ರದಿಂದ ಉಲ್ಲಂಘನೆ ಆಗ್ತಿದೆ ಅಂತಾರಾಜ್ಯ ನದಿ ನೀರು ಹಂಚಿಕೆ ಅಧಿನಿಯಮ ಕಾನೂನು. ಕೇಂದ್ರ ಜಲ ಆಯೋಗದ ಅನುಮತಿ ಪಡೆಯದೇ ರಾಧಾಕೃಷ್ಣ ಏತನೀರಾವರಿ ಯೋಜನೆ ಜಾರಿಗೆಗೆ ಪ್ಲ್ಯಾನ್. ಮಹಾರಾಷ್ಟ್ರದ ಕಿತಾಪತಿ ವಿರುದ್ಧ ಕೋರ್ಟ್ ಮೊರೆ ಹೋಗಬೇಕಿದೆ ಕರ್ನಾಟಕ.
ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ವಿಸ್ತೀರ್ಣ ಹೊಂದಿರುವ ಕೃಷ್ಣಾ ನದಿ. ಈಗಾಗಲೇ ನಾಲ್ಕು ರಾಜ್ಯಗಳ ಮಧ್ಯೆ ಕೃಷ್ಣಾ ನದಿಯಲ್ಲಿ ನೀರು ಹಂಚಿಕೆ. ಬ್ರಿಜೇಶ್ ಕುಮಾರ್ ನ್ಯಾಯಾಧೀಕರಣ ಮೂಲಕ 2013ರಲ್ಲಿ ನದಿ ನೀರು ಹಂಚಿಕೆ. ಯುಕೆಪಿ ಫೇಸ್-1, ಯುಕೆಪಿ 2 ಫೇಸ್ನಲ್ಲಿ ಕರ್ನಾಟಕಕ್ಕೆ ಹಂಚಿಕೆ ಆಗಿದ್ದು 253 ಟಿಎಂಸಿ ನೀರು.
2050ರೊಳಗೆ 15 ಅಡಿ ಆಲಮಟ್ಟಿ ಜಲಾಶಯದ ಎತ್ತರ ಮಾಡಿಕೊಳ್ಳಲು ಕರ್ನಾಟಕಕ್ಕೆ ಸೂಚನೆ. ಆಲಮಟ್ಟಿ ಜಲಾಶಯ 15 ಅಡಿ ಎತ್ತರಕ್ಕೆ ಬೇಕಿದೆ ಒಂದು ಲಕ್ಷ ಕೋಟಿ ಅನುದಾನ. ನ್ಯಾಯಾಧೀಕರಣ ತೀರ್ಪು ಬಂದು 13 ವರ್ಷ ಕಳೆದರೂ ಯುಕೆಪಿ ಎರಡನೇ ಹಂತದ ಯೋಜನೆ ಆಗ್ತಿಲ್ಲ ಜಾರಿ.
