ಉ.ಕ ಸುದ್ದಿಜಾಲ ಬೆಳಗಾವಿ :
ಬೆಳಗಾವಿಯಲ್ಲಿ ಜೋಜಾಟದ ಮೇಲೆ ಪೊಲೀಸರ ದಾಳಿ 15 ಜನ ವಶಕ್ಕೆ ಬೆಳಗಾವಿ ತಾಲೂಕಿನ ವಾಘವಾಡೆ ಗ್ರಾಮದ ಮಾರ್ಖಂಡೆಯ ನಗರದ ಬಳಿ ನಡೆದ ಘಟನೆ. ತಮ್ಮ ಸ್ವಂತ ಲಾಭಕೊಸ್ಕರ ಜೂಜಾಟ ನಡೆಸಿದ್ದ ಆರೋಪಿಗಳು.
ಖಚಿತ ಮಾಹಿತಿ ಮೇರೆಗೆ ಗ್ರಾಮೀಣ ಪೊಲೀಸರ ದಾಳಿ ನಡೆಸಿದ್ದಾರೆ. ದಾಳಿ ವೇಳೆ 15 ಜನ ಆರೋಪಿಗಳು, 69,150/ ರೂ ಹಣ ಹಾಗೂ ಇಸ್ಪೀಟ ಎಲೆಗಳನ್ನು ಜಪ್ತಿಪಡಿಸಿಕೊಂಡ ಪೊಲೀಸರು.
ಆರೋಪಿಗಳಾದ ಅಭಿಷೇಕ ರಘುನಾಥ ಬೋಸಲೆ (25),ಪರುಶರಾದಮ ದತ್ತಾರಾಮ ಸಿಂಧೆ (45), ರಾಹುಲ ಸದಾಶಿವ ಅಗಸಗೇಕರ (32), ರೋಹಿತ ಪ್ರಹ್ಲಾದ ಕಾಂಬಳೆ (32),ಸಾಗರ ಪಾಟೀಲ (41),ಸುನೀಲ ಪಾಟ್ರೋಟ (53) ಸೇರಿ 15 ಜನ ಅರೆಸ್ಟ್.

ಬೆಳಗಾವಿ ಗ್ರಾಮೀಣ ಠಾಣೆಯ ಪಿಎಸ್‌ಐ ಸಂತೋಷ ದಳವಾಯಿ ಹಾಗೂ ಸಿಬ್ಬಂದಿಗಳಿಂದ ದಾಳಿ. ಕೆಪಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕ್ಕೊಂಡ ಪೊಲೀಸರು. ಬೆಳಗಾವಿ ಗ್ರಾಮಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು. ಸಿಬ್ಬಂದಿಯವರ ಕಾರ್ಯಕ್ಕೆ ಪೊಲೀಸ್ ಆಯುಕ್ತ ಭೂಷನ್ ಬೊರಸೆ ಹಾಗೂ ಡಿಸಿಪಿ ನಾರಾಯಣ ಭರಮನಿ ಶ್ಲಾಘನೀಯ ತಿಳಿಸಿದ್ದಾರೆ.
