ಉ.ಕ ಸುದ್ದಿಜಾಲ‌ ರಾಯಬಾಗ :

‘ನಾ ಡ್ರೈವರ್, ನೀ ನನ್ನ ಲವ್ವರ್’ ಹಾಡಿನ ಖ್ಯಾತಿಯ ಗಾಯಕನಿಂದ ಹಲ್ಲೆ ಅರೋಪ. ಜಾನಪದ ಹಿನ್ನೆಲೆ‌ ಗಾಯಕ ಮಾಳು ನಿಪನಾಳನಿಂದ ಹಲ್ಲೆ. ಶೇಖರ್ ಹಕ್ಯಾಗೋಳ ಎಂಬಾತನ ಮೇಲೆ ಹಾಗೂ ಆತನ ಸಹೋದರಿ ಮೇಲೆ ಹಲ್ಲೆ ಮಾಡಿರುವ ಆರೋಪ.

‘ನಾ ಡ್ರೈವರ್, ನೀ ನನ್ನ ಲವ್ವರ್’ ಹಾಡಿನ ಖ್ಯಾತಿಯ ಗಾಯಕನಿಂದ ಹಲ್ಲೆ ಅರೋಪ

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಿಪನಾಳ ಗ್ರಾಮದ ಹೊರವಲಯದಲ್ಲಿ ಈ ಘಟನೆ ನಡರದಿದ್ದು ಮಾಳು ನಿಪನಾಳ ಮೇಲೆ ಹಲ್ಲೆ ಆರೋಪ ಮಾಡ್ತಿರುವ ಶೇಖರ್ ಹಕ್ಯಾಗೋಳ. ಮಾಳು ನಿಪನಾಳ ಹಾಗೂ ಆತನ ಸಂಗಡಿಗರು ನಮ್ಮ‌ ಮೈಮೇಲೆ ಕಾರ್ ಹಾಕಿದ ಹಾಗೆ ಮಾಡಿದ್ರು.

ಆವಾಗ ನಮ್ಮ ಅಕ್ಕ ಸಾವಧಾನವಾಗಿ ಕಾರ್ ಚಲಾಯಿಸು ಅಂತ ಹೇಳಿದ್ರು. ಅಷ್ಟರೊಳಗೆ ನಮ್ಮ ಬೈಕ್ ಮುಂದುಗಡೆ ಕಾರ್ ಅಡ್ಡಗಟ್ಟಿ ನಿಲ್ಸಿದ್ರು. ಬಳಿಕ ನಾನು ಕಾರ್ ಹೀಗೆ ಚಲಾಸ್ತಿನಿ ಅದನ್ನೆಲ್ಲಾ ಕೇಳೋಕೆ ನಿವ್ಯಾರು ಅಂತ ಮಾತಿಗೆ ಮಾತು ಬೆಳೆದು ಜಗಳ ಶುರುವಾಯ್ತು.

ನನ್ಮ ಮೇಲೆ ಹಾಗೂ ನಮ್ಮ ಅಕ್ಕನ ಮೇಲೆ ಮಾಳು ನಿಪನಾಳ ಹಾಗೂ ಸಂಗಂಡಿಗರು ಹಲ್ಲೆ ಮಾಡಿದ್ರು ಎಂದು ಹಲ್ಲೆ ಆರೋಪ ಮಾಡುತ್ತಿರುವ ಶೇಖರ್ ಹಕ್ಯಾಗೋಳ. ನನ್ನ ತಲೆ ಹಾಗೂ ಎದೆ ಭಾಗಕ್ಕೂ ಹಲ್ಲೆ ಮಾಡಿದ್ದಾರೆ.

ನಮ್ಮ ಅಕ್ಕನ ಮೈಮೇಲೆ‌ ಇದ್ದ ಒಡವೆಗಳನ್ನು ಹರಿದು ಹಾಕ್ಕಿದ್ದಾರೆಂದು ಆರೋಪ. ಹಲ್ಲೆಗೊಳಗಾದವರು ಚಿಕ್ಕೋಡಿಯ ಖಾಸಗಿ ಆಸ್ಪತ್ರೆಗೆ ದಾಖಲು. ರಾಯಬಾಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.