ಉ.ಕ ಸುದ್ದಿಜಾಲ ಚಿತ್ರದುರ್ಗ :
ಪ್ರೀತಿಸಿ ಮದುವೆಯಾದ ಕಾರಣಕ್ಕೆ ಯುವಕನ ಬರ್ಬರ ಹತ್ಯೆ. ಪ್ರೀತಿಸಿ ಮದುವೆ ಆಗಿದ್ದ ಯುವಕ ಯುವತಿ ಕುಟುಂಬಸ್ಥರಿಂದ ಯುವಕನ ಕುಟುಂಬಸ್ಥರ ಮೇಲೆ ಹಲ್ಲೆ. ಯುವಕನ ಮೇಲೆ ಹಲ್ಲೆ ಮಾಡಿ ಯುವತಿಯ ಪೊಷಕರಿಂದ ಹತ್ಯೆ.
ಚಿತ್ರದುರ್ಗ ತಾಲ್ಲೂಕಿನ ಕೋಣನೂರು ಗ್ರಾಮದಲ್ಲಿ ಘಟನೆ.ಕೋಣನೂರು ಗ್ರಾಮದ ಮಂಜುನಾಥ ಮತ್ತು ರಕ್ಷಿತ ಪ್ರೀತಿಸಿ ಮದುವೆ ಅಗಿದ್ದ ಜೋಡಿ. 3 ತಿಂಗಳ ಗಿಂದೆ ದೇವಸ್ಥಾನದಲ್ಲಿ ಮದುವೆ ಆಗಿದ್ದ ಪ್ರೇಮಿಗಳು.
ಕಳೆದ ಮೂರು ತಿಂಗಳ ಹಿಂದೆ ಓಡಿ ಹೋಗಿದುವೆ ಆಗಿದ್ದ ಮಂಜುನಾಥ-ರಕ್ಷಿತಾ ರಕ್ಷಿತಾಗೆ 19 ವರ್ಷ, ಮಂಜುನಾಥ್ ಗೆ 42 ವರ್ಷ ವಯಸ್ಸು. ವಯಸ್ಸು ಜಾಸ್ತಿ ಅಂತಾ ಮದುವೆಗೆ ಕುಟುಂಬಸ್ಥರ ವಿರೋಧ ಆರೋಪ.
ಕಳೆದ ಒಂದು ತಿಂಗಳ ಹಿಂದೆ ಮದುವೆಯಾಗಿ ವಾಪಸ್ ಬಂದಿದ್ದ ಮಂಜುನಾಥ- ರಕ್ಷಿತಾ. DYSP ನೇತೃತ್ವದಲ್ಲಿ ಎರಡೂ ಕುಟುಂಬಸ್ಥರ ರಾಜಿ ಸಂಧಾನ 15 ದಿನಗಳಲ್ಲಿದುವೆ ಮಾಡೋದಾಗಿ ಯುವತಿ ಕುಟುಂಬಸ್ಥರ ಹೇಳಿಕೆ
ರಕ್ಷಿತಾಳನ್ನು ಮದುವೆಯಾದ ಮೇಲೆ ಮೊದಲ ಬಾರಿ ಗ್ರಾಮಕ್ಕೆ ಬಂದಿದ್ದ ಮಂಜುನಾಥ ಮಂಜುನಾಥ ಗ್ರಾಮಕ್ಕೆ ಬರುತ್ತಿದ್ದಂತೆ ರಕ್ಷಿತಾ ಕುಟುಂಬಸ್ಥರಿಂದ ಹಲ್ಲೆ, ಕೊಲೆ ಮಾಡಲಾಗಿದೆ.
ಮಂಜುನಾಥ, ರಕ್ಷಿತಾ ಮದುವೆಗೆ ಯುವತಿ ಪೊಷಕರ ವಿರೋಧ. ಬುಧವಾರ ಮದ್ಯಾಹ್ನ ಊರಿಗೆ ಬಂದಿದ್ದ ಮಂಜುನಾಥ, ಮತ್ತು ತಂದೆ ತಾಯಿ ಮೇಲೆ ಹಲ್ಲೆ. ಹಲ್ಲೆಯಲ್ಲಿ ಮಂಜುನಾಥನ ಹತ್ಯೆ ಮಾಡಿರುವ 20 ಕ್ಕೂ ಹೆಚ್ಚು ಜನರು. ಹತ್ಯೆ ಬಳಿಕ ತಲೆ ಮರೆಸಿಕೊಂಡಿರುವ ಆರೋಪಿಗಳು.
ರಕ್ಷಿತಾ ತಂದೆ ಜಗದೀಶ್, ಸಂಬಂಧಿಗಳಾದ ಕಲ್ಲೇಶ್, ಈಶ್ವರಪ್ಪ, ನಿಂಗಪ್ಪ, ವಿಶ್ವನಾಥ್, ಹರೀಶ್ ಸೇರಿ ಹತ್ಯೆ. ಘಟನೆಯಲ್ಲಿ ಮಂಜುನಾತ್ ತಂದೆ ಚಂದ್ರಪ್ಪ, ತಾಯಿ ಅನುಸೂಯಮ್ಮ ಗಂಬೀರ ಗಾಯ.
ಗಾಯಾಳುಗಳು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲು. ಆಸ್ಪತ್ರೆಗೆ ಚಿತ್ರದುರ್ಗ ಎಸ್ಪಿ ರಂಜಿತ್ ಕುಮಾರ್ ಬಂಡಾರು ಬೇಟಿ ಪರಿಶೀಲನೆ. ಭರಮಸಾಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ.