ಉ.ಕ ಸುದ್ದಿಜಾಲ ಹುಕ್ಕೇರಿ :
ಸಿಎಂ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ ಸಚಿವ ದಿನೇಶ ಗುಂಡೂರಾವ ದಿ. ದೇವರಾಜು ಅರಸು ಅವರ ದಾಖಲೆ ಮುರಿಯುವಂತಾಗಲಿ. ಇನ್ನು ಹೆಚ್ಚಿನ ವರ್ಷಗಳ ಕಾಲ ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿಯಲಿ. ಬೆಳಗಾವಿ ಜಿಲ್ಲೆಯ ಹುಕ್ಕೇರಿಯಲ್ಲಿ ಸಚಿವ ದಿನೇಶ್ ಗುಂಡೂರಾವ ಹೇಳಿಕೆ.
ಹುಕ್ಕೇರಿ ತಾಲೂಕಾಸ್ಪತ್ರೆ ಆವರಣದಲ್ಲಿ ನಿರ್ಮಿಸಿರುವ ವಸತಿ ಗೃಹಗಳ ಕಟ್ಟಡಗಳ ಉದ್ಘಾಟನೆ ಬಳಿಕ ಮಾಧ್ಯಮಗಳಿಗೆ ಹೇಳಿಕೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಏಳು ವರ್ಷಗಳಾಗಿವೆ. ಇನ್ನಷ್ಟು ವರ್ಷಗಳ ಕಾಲ ಸಿಎಂ ಆಗಿ ಮುಂದುವರಿಯಲಿ. ಅರಸುರವರ ದಾಖಲೆಯಷ್ಟೇ ಅಲ್ಲ, ಇನ್ನುಳಿದ ದಾಖಲೆಗಳನ್ನು ಮುರಿಯುವಂತಾಗಲಿ ಎಂದ ಗುಂಡೂರಾವ್.
ರಾಹುಲ್ ಗಾಂಧಿ ಮತಗಳ್ಳತನ ಅರೋಪ ಸತ್ಯವಿಲ್ಲ ಎಂದು ಬಿಜೆಪಿಗರ ಹೇಳಿಕೆ ವಿಚಾರ. ಬಿಜೆಪಿಯವರ‌್ಯಾಕೆ ಪ್ಯಾಕ್ಟ್ ಚೆಕ್ ಮಾಡಬೇಕು. ಎಲೆಕ್ಷನ್ ಕಮೀಷನ್‌ಗೆ ಈಗಾಗಲೇ ಸ್ಪಷ್ಟ ಮಾಹಿತಿ ನೀಡಿದ್ದೇವೆ. ನಾವೆಲ್ಲ ಪ್ಯಾಕ್ಟ್ ಚೆಕ್ ಮಾಡಿಯೇ ಎಲ್ಲ ಮಾಹಿತಿ ಒದಗಿಸಿದ್ದೇವೆ.
ಬಿಜೆಪಿಯವರು ಏನು ಪ್ಯಾಕ್ಟ್ ಚೆಕ್ ಮಾಡ್ತಿದ್ದಾರೆ ಅದರ ಬಗ್ಗೆ ನನಗೆ ಗೊತ್ತಿಲ್ಲ, ಅದರ ಬಗ್ಗೆಯೂ ಮಾಹಿತಿ ಇಲ್ಲ. ಇದು ಚುನಾವಣೆ ಆಯೋಗದ ವೈಫಲ್ಯ ಎದ್ದು ಕಾಣ್ತಿದೆ.
ಬಿಹಾರದಲ್ಲಿ ಮತದಾರರ ಪಟ್ಟಿ ಚೆಕ್ ಮಾಡಿ ಯಾವುದೇ ಗೊಂದಲವಾಗಿಲ್ಲ ಎಂದು ಚುನಾವಣಾ ಆಯೋಗ ಪ್ರತಿಕ್ರಿಯೆ ನೀಡಿರೋ ವಿಚಾರ. ಬಿಹಾರನಲ್ಲಿ ಚುನಾವಣೆ ಹತ್ತಿರದ್ದಾಗ 50 ರಿಂದ 60 ಲಕ್ಷ ಮತದಾರರನ್ನ ಪಟ್ಟಿಯಿಂದ ಹೆಸರನ್ನು ತೆಗೆದುಹಾಕ್ತಿದ್ದಾರೆ.
ಈ ರೀತಿಯಾಗಿ ಚುನಾವಣೆ ಸಮೀಪದಲ್ಲಿದ್ದಾಗ ಹೆಸರನ್ನು ಕೈ ಬಿಟ್ಟರೆ ಅವರ ಹಕ್ಕನ್ನು ಕಸಿದುಕೊಂಡಂತಾಗುತ್ತದೆ. ಚುನಾವಣಾ ಆಯೋಗದ ಬಗ್ಗೆ ಸಂಶಯ ಮೂಡಲು ಕಾರಣ ಆಯೋಗದ ನಡೆ, ವರ್ತನೆಯಿಂದಾಗಿ. ಚುನಾವಣಾ ಆಯೋಗ ಸ್ವಾಯತ್ತತೆ ಸಂಸ್ಥೆಯಾಗಿ ಸ್ವತಂತ್ರವಾಗಿ ನಡೆಸ್ತಾ ಇಲ್ಲ.
ಎಲ್ಲ ವಿಚಾರದಲ್ಲಿಯೂ ಪಾರದರ್ಶಕತೆ ಯಿಂದ ನಡೆದುಕೊಳ್ತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಗೆ ದಕ್ಕೆ ತರುವಂತಹದು. ರಾಹುಲ್ ಗಾಂಧಿ ಹೇಳಿರುವ ವಿಚಾರ ಯಾವುದೇ ರಾಜಕೀಯ ಪಕ್ಷಕ್ಕೆ ಸೀಮಿತವಲ್ಲ. ಚುನಾವಣಾ ಆಯೋಗ ಇದರ ಬಗ್ಗೆ ಗಂಭೀರವಾಗಿ ಪರಿಶೀಲನೆ ಮಾಡಿ ಪ್ರತಿಕ್ರಿಯೆ ನೀಡಬೇಕು.
ರಾಹುಲ್ ಗಾಂಧಿ ಮಾಡಿರೋ ಆರೋಪದ ಬಗ್ಗೆ ಚುನಾವಣಾ ಆಯೋಗ ಸರಿಯಾದ ಸ್ಪಷ್ಟನೆ ನೀಡಲಿ. ಹಾರಿಕೆಯ ಉತ್ತರಗಳು ದೇಶದ ಜನತೆಗೆ ಬೇಕಾಗಿಲ್ಲ. ರಾಹುಲ್ ಗಾಂಧಿ ಸ್ಪಷ್ಟ ಮಾಹಿತಿ ತೆಗೆದುಕೊಂಡು ಇದರ ಬಗ್ಗೆ ಮಾತನಾಡುತ್ತಿದ್ದಾರೆ. ಕಳೆದ ಆರು ತಿಂಗಳಿನಿಂದ ಮಾಹಿತಿ ಕಲೆ ಹಾಕಿದ್ದಾರೆ.
ಸಿಎಂ ಇಬ್ರಾಹಿಂ ಅರೋಪದ ಕುರಿತು ಇಬ್ರಾಹಿಂ ಒಂದಿಂದು ದಿನ ಒಂದೊಂತರ ಹೇಳಿಕೆ ನೀಡ್ತಾರೆ. ಅದಕ್ಕೆಲ್ಲ ಮಾನ್ಯತೆ ನೀಡಲು ಆಗಲ್ಲ. ಬೆಳಗಾವಿಯ ಹುಕ್ಕೇರಿಯಲ್ಲಿ ಸಚಿವ ದಿನೇಶ ಗುಂಡೂರಾವ್ ಹೇಳಿಕೆ.
ವಿಡಿಯೋ – ಸಿಎಂ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ ಸಚಿವ ದಿನೇಶ ಗುಂಡೂರಾವ
