ಉ.ಕ ಸುದ್ದಿಜಾಲ ಹುಕ್ಕೇರಿ :
ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘ ಚುನಾವಣೆ ಹಿನ್ನಲೆ ಯಮಕನಮರಡಿ ಮತಕ್ಷೇತ್ರದಲ್ಲಿ ಎ ಬಿ ಪಾಟೀಲ ಹಾಗೂ ಕತ್ತಿ ಕುಟುಂಬದಿಂದ ಬೃಹತ್ ಸಮಾವೇಶ ದಿನದಿಂದ ದಿನಕ್ಕೆ ರಂಗೇರುತ್ತಿರುವ ವಿದ್ಯುತ್ ಸಹಕಾರಿ ಚುನಾವಣೆ.
ಸೆ.28 ರಂದು ನಡೆಯಲ್ಲಿರು ವಿದ್ಯುತ್ ಸಹಕಾರಿ ಸಂಘದ ಚುನಾವಣೆ ಹಿನ್ನಲೆ ನಾಳೆ ಸೆ.17 ರಂದು ಹೆಬ್ಬಾಳದಲ್ಲಿ ಸಾಯಂಕಾಲ 4 ಗಂಟೆಗೆ ಸಮಾವೇಶ ಹಾಗೂ ಪೂರ್ವಭಾವಿ ಸಭೆಗೆ ಕರೆ ದಡ್ಡಿ ಗ್ರಾಮದಿಂದ ಪಾಚಾಪೂರ ಗ್ರಾಮದ ಎಲ್ಲ ಸಾರ್ವಜನಿಕರು ಈ ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಹಾಲಿ ಹುಕ್ಕೇರಿ ಶಾಸಕ ನಿಖೀಲ ಕತ್ತಿ, ಮಾಜಿ ಸಚಿವ ಎ ಬಿ ಪಾಟೀಲ ಹಾಗೂ ಮಾಜಿ ಸಂಸದ ರಮೇಶ ಕತ್ತಿ ನೇತೃತ್ವದಲ್ಲಿ ಸಭೆ ಆಯೋಜನೆ. ಹೆಬ್ಬಾಳ ಗ್ರಾಮದಲ್ಲಿ ಆಯೋಜನೆ ಮಾಡಲಾಗಿದ್ದು ಸಭೆಗೆ ಆಗಮಿಸಬೇಕೆಂದು ಕರೆ ನೀಡಿದ ಎ ಬಿ ಪಾಟೀಲ ಹಾಗೂ ನಿಖೀಲ ಕತ್ತಿ.
ನಾಳೆ ಹುಕ್ಕೇರಿಯ ಹೆಬ್ಬಾಳದಲ್ಲಿ ಕತ್ತಿ ಹಾಗೂ ಪಾಟೀಲ ಬೆಂಬಲಿಗರಿಂದ ಬೃಹತ್ ಸಮಾವೇಶ – ಇಲ್ಲಿದೆ ಸಂಪೂರ್ಣ ಮಾಹಿತಿ
