ಉ.ಕ ಸುದ್ದಿಜಾಲ ಹುಕ್ಕೇರಿ :
ಅಡ್ಡಾದಿಡ್ಡಿಯಾಗಿ ಲಾರಿ ಓಡಿಸಿಕೊಂಡು ಹೊರಟಿದ್ದ ಚಾಲಕನ ಬರ್ಬರ ಹತ್ಯೆ. ಚಾಲನೆ ವೇಳೆ ಬೈಕ್, ಕ್ಯಾಂಟರ್‌ಗೆ ಗುದ್ದಿ ಗಾಬರಿಯಿಂದ ಹೊರಟಿದ್ದ ಲಾರಿ ಚಾಲಕ.ಬಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆನಕೋಳಿ ಗ್ರಾಮದ ಬಳಿ ಘಟನೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸೊಲ್ಲಾಪುರ ಗ್ರಾಮದ ಅಜೀಮ್ ಇಪ್ಪೇರಿ (23) ಮೃತ ಲಾರಿ ಚಾಲಕ. ಸಂಕೇಶ್ವರದಿಂದ ಬೆಳಗಾವಿ ಕಡೆಗೆ ಲಾರಿ ಚಲಾಯಿಸಿಕೊಂಡು ಬರುತ್ತಿದ್ದ ಅಜೀಮ್. ಈ ವೇಳೆ ಪರಸಪ್ಪ ನಾಯಿಕ್‌ಗೆ ಸೇರಿದ ಬೈಕ್, ಹಣಮಂತ ಇಡ್ಲಿಗೆ ಸೇರಿದ ಕ್ಯಾಂಟರ್‌ಗೆ ಗುದ್ದಿರುವ ಅಜೀಮ್.
ಎರಡು ಕಡೆ ಅಪಘಾತ ಎಸಗಿದರೂ ಲಾರಿ ನಿಲ್ಲಿಸದೇ ಪಾರಾರಿಯಾಗಲು ಅಜೀಂ ಯತ್ನ. ಈ ವೇಳೆ ಕಟಬಾಳಿ ಗ್ರಾಮದ ಹತ್ತಿರ ಲಾರಿಗೆ ಕಲ್ಲೆಸೆದು ತಡೆದಿರುವ ಪರಸಪ್ಪ, ಹಣಮಂತ. ಈ ವೇಳೆ ಪರಸಪ್ಪ ತನ್ನ ಐವರು ಸ್ನೇಹಿತರ ಜೊತೆಗೂಡಿ ಅಜೀಂ ಜೊತೆಗೆ ವಾಗ್ವಾದ.
ಇದು ವಿಕೋಪಕ್ಕೆ ತಿರುಗಿ ಅಜೀಂ ಮರ್ಮಾಂಗಕ್ಕೆ ಒದ್ದು, ಐವರಿಂದಲೂ ಬಡಿಗೆಯಿಂದ ಮಾರಣಾಂತಿಕ ಹಲ್ಲೆ. ಪರಸಪ್ಪ, ಹಣಮಂತಗೆ ಹಾಳಪ್ಪ ಹಳ್ಯಾಗೋಳ, ಈರಪ್ಪ ನಾಯಿಕ್, ಅಮಿತ್ ಶಿಂಧೆ ಸಾಥ್.
ತೀವ್ರ ಅಸ್ವಸ್ಥಗೊಂಡಿದ್ದ ಅಜೀಂಗೆ ಬೆಳಗಾವಿಯ ಬೀಮ್ಸ್‌ಗೆ ದಾಖಲಿಸಿ ಚಿಕಿತ್ಸೆ. ಚಿಕಿತ್ಸೆ ಫಲಕಾರಿ ಆಗದೇ ಮೃತಪಟ್ಟ ಲಾರಿ ಚಾಲಕ ಅಜೀಂ ಇಪ್ಪೇರಿ.
ಲಾರಿ ಚಾಲಕನ ಹತ್ಯೆಗೆ ಕಾರಣರಾದ ಐವರೂ ಆರೋಪಿಗಳನ್ನು ಬಂಧನ ಮಾಡಲಾಗಿದೆ. ಯಮಕನಮರಡಿ ಪೊಲೀಸರಿಂದ ಆರೋಪಿಗಳ ಬಂಧನ, ಬೆಳಗಾವಿ ಹಿಂಡಲಗಾ ಜೈಲಿಗೆ ರವಾನೆ ಮಾಡಲಾಗಿದೆ.