ಉ.ಕ ಸುದ್ದಿಜಾಲ ಬೆಳಗಾವಿ :

ಕತ್ತಿ ಒಡೆತನದ ವಿಶ್ವರಾಜ್ ಶುಗರ್ಸ್ ನಲ್ಲಿ ಲಾಂಗು ಮಚ್ಚು ಹಿಡಿದು ಓಡಾಡಿದ ಪ್ರಕರಣ. ಕಡೆಗೂ ಲಾಂಗು ಹಿಡಿದು ಓಡಾಡಿದವರ ವಿರುದ್ಧ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಬೆಳಗಾವಿ ಎಸ್ಪಿ ಭೀಮಾಶಂಕರ್ ಗುಳೇದ್ ಸ್ಪಷ್ಟನೆ ನೀಡಿದ್ದಾರೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿದಾಡುತ್ತಿತ್ತು. ವಿಶ್ವರಾಜ್ ಸಕ್ಕರೆ ಕಾರ್ಖಾನೆ ಮುಂದೆ ಇಬ್ಬರು ಮಾರಕಾಸ್ತ್ರ ಹಿಡಿದುಕೊಂಡು ಓಡಾಡ್ತಿದ್ದ ವಿಡಿಯೋ. ನನ್ನ ಗಮನಕ್ಕೆ ಬರುತ್ತಿದ್ದಂತೆ ವಿಚಾರಣೆ ಮಾಡಿ ಪ್ರಕರಣ ದಾಖಲಿಸಲು ಸೂಚನೆ ನೀಡದ್ದೇನೆ.

ಆ ಪ್ರಕಾರ ಎಫ್ಐಆರ್ ದಾಖಲಾಗಿ ತನಿಖೆ ಮಾಡುತ್ತಿದ್ದೇವೆ. ಈಗಾಗಲೇ ಓರ್ವನ ವಶಕ್ಕೆ ಪಡೆದು ತನಿಖೆ ನಡೆಯುತ್ತಿದೆ. ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಗಲಾಟೆಗಳ ವಿಚಾರ. ಈ ವರೆಗೂ ಪರ ಅಥವಾ ವಿರುದ್ದವಾಗಿ ಯಾರು ದೂರು ನೀಡಿಲ್ಲ. ಹೀಗಾಗಿ ಯಾವ ದೂರು ದಾಖಲು ಆಗಿರುವುದಿಲ್ಲ.ಆದ್ರೇ ಪಿಕೆಪಿಎಸ್ ಚುನಾವಣೆ ನಡೆಯುವ ಸ್ಥಳಗಳಲ್ಲಿ ಎನೂ ಕ್ರಮ ಕೈಗೊಳ್ಳಬೇಕು ತಗೊಂಡಿದ್ದೇವೆ ಎಂದಿದ್ದಾರೆ.