ಉ.ಕ ಸುದ್ದಿಜಾಲ ಕಾಗವಾಡ :

ಅಥಣಿ ತಾಲೂಕಿನ ಕೇಂದ್ರೀಯ ವಿದ್ಯಾಲಯ ಮಂಜೂರಾತಿ ಕುರಿತು‌ ಮತ್ತೆ ಮನ್ನಲ್ಲೆಗೆ ಬಂದಿದೆ. ಕಾಗವಾಡ ತಾಲೂಕಿನ ಐನಾಪುರ ಪಟ್ಟಣದ ಪದ್ಮಾವತಿ ಸೆಂಟ್ರಲ್ ಸ್ಕೂಲ(ಸಿಬಿಎಸ್‌ಇ) ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಅಥಣಿ ಶಾಸಕ ಲಕ್ಷ್ಮಣ ಸವದಿ ಹಿರಿಯ ಪುತ್ರ ಚಿದಾನಂದ ಸವದಿ ಅಥಣಿ ಕೇಂದ್ರಿಯ ವಿದ್ಯಾಲಯ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ.

ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿ ಭಾಗವಾದ ಅಥಣಿ ತಾಲೂಕಿನ ಶಿನ್ನಾಳ ಗ್ರಾಮದಲ್ಲಿ ಮಾಜಿ ಉಪ ಮುಖ್ಯಮಂತ್ರಿ,ಅಥಣಿ ಶಾಸಕರಾದ ಲಕ್ಷ್ಮಣ ಸವದಿಯವರ ಸತತ ಪ್ರಯತ್ನದ ಫಲವಾಗಿ ಕೇಂದ್ರೀಯ ವಿದ್ಯಾಲಯ ಮಂಜೂರಾಗಿದ್ದು, ವಿದ್ಯಾರ್ಥಿಗಳು ಅದರ ಸದುಪಯೋಗ ಪಡೆದುಕೊಳ್ಳಬೇಕು. ಉನ್ನತ ಶಿಕ್ಷಣ ಕೇವಲ ನಗರ ಪ್ರದೇಶದ ಮಕ್ಕಳಿಗೆ ಮಾತ್ರ ಸೀಮಿತವಾಗಿತ್ತು.

ಅದನ್ನು ಮನಗಂಡ ಮಾಜಿ ಉಪಮುಖ್ಯಮಂತ್ರಿ, ಅಥಣಿ ಶಾಸಕರಾದ ಲಕ್ಷ್ಮಣ ಸವದಿಯವರು ಗ್ರಾಮೀಣ ಭಾಗದ ಪ್ರತಿಭಾವಂತ ಮಕ್ಕಳಿಗೂ ಉನ್ನತ ಶಿಕ್ಷಣ ಸಿಗಬೇಕೆಂಬ ಉದ್ದೇಶದಿಂದ ವಿಶೇಷ ಪ್ರಯತ್ನ ಮಾಡಿ ಶಾಲೆಯನ್ನು ಮಂಜೂರು ಮಾಡಿಸಿದರು ಎಂದರು.

2022ರಲ್ಲಿ ಅಥಣಿ ತಾಲೂಕಿನ ಯಲಡಗಿ ಗ್ರಾಮದಲ್ಲಿ ಕೇಂದ್ರೀಯ ವಿದ್ಯಾಲಯ ನಿರ್ಮಾಣ ಮಾಡಲು ಕೇಂದ್ರದ ತಂಡ ಆಗಿನ ಶಿಕ್ಷಣಾಧಿಕಾರಿ ತಳವಾರ ಅವರಿಗೆ ಹಿಂದಿನ ಶಾಸಕರಾಗಿದ್ದ ಮಹಾನುಭಾವ ಮಹೇಶ ಕುಮಠಳ್ಳಿ ಕೇಂದ್ರೀಯ ವಿದ್ಯಾಲಯ ಮಾಡಲು ಸ್ಥಳ ಯೋಗ್ಯವಿಲ್ಲ ಎಂದು ಶಿಕ್ಷಣಾಧಿಕಾರಿಯ ಮುಖಾಂತರ ರಿಪೋರ್ಟ ಹಾಕಿಸಿ ಕ್ಯಾನ್ಸಲ್ ಮಾಡಿಸಿದರು.

2023 ರಲ್ಲಿ ಮತ್ತೆ ಹೊಸ ಪ್ರಪೊಜಲ್ ತಯಾರ ಮಾಡಿ ಕೇಂದ್ರ ಸರಕಾರಕ್ಕೆ ಮನವಿ ಕೊಟ್ಟು ಧರ್ಮೇಂದ್ರ ಪ್ರಧಾನ ಅವರ ಕಡೆ ಹೋಗಿ ಕೇಂದ್ರೀಯ ವಿದ್ಯಾಲಯವನ್ನು ನಮ್ಮ ತಂದೆ ಅಥಣಿ ಶಾಸಕ ಲಕ್ಷ್ಮಣ ಸವದಿಯವರಿಗೆ ಈ ಶ್ರೇಯಸ್ಸು ಸಲ್ಲುತ್ತದೆ ಎಂದು ಯುವ ನಾಯಕ ಚಿದಾನಂದ ಸವದಿ ಹೇಳಿದರು.

ಆದರೆ ಈಗ ಕೆಲವರು ಸಾಮಾಜಿಕ ಜಾಲತಾನಗಳಲ್ಲಿ ಕೇಂದ್ರೀಯ ವಿದ್ಯಾಲಯವನ್ನು ನಾವು ಮಾಡಿದ್ದೇವೆ ಎಂದು ಬಿಟ್ಟಿ ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ.ಈ ಭಾಗದ ಜನರ ಗಮನದಲ್ಲಿರಲಿ ಲಕ್ಷ್ಮಣ ಸವದಿಯವರ ಪ್ರಯತ್ನದಿಂದ ಕೇಂದ್ರೀಯ ವಿದ್ಯಾಲಯ ಮಂಜೂರಾಗಿದೆ ಎಂದು ಹೆಸರು ಹೇಳದೆ ಚಿಕ್ಕೋಡಿ ಸಂಸದೆ ಪ್ರಿಯಂಕಾ ಜಾರಕಿಹೋಳಿ ಹಾಗೂ ಸಚಿವ ಸತೀಶ ಜಾರಕಿಹೋಳಿಗೆ ತಿರುಗೇಟು ನೀಡಿದ್ದಾರೆ.