https://www.facebook.com/share/v/1APk2Apuqf

ಉ.ಕ‌ ಸುದ್ದಿಜಾಲ ಕಾಗವಾಡ :

ರಾಜ್ಯದ ಗಡಿಭಾಗದಲ್ಲಿ ಕನ್ನಡ ಉಳಿಸಿ, ಬೆಳೆಸಲು ಕರಿಯೋಗಸಿದ್ದ ಮಠದ ಅಮರೇಶ್ವರ ಮಹಾರಾಜರು ಮಾಡುತ್ತಿರುವ ಪ್ರಯತ್ನ ವಿಶೇಷವಾಗಿದೆ. ಈ ಪ್ರಯತ್ನಕ್ಕೆ ಕೈಜೋಡಿಸಲು, ಸಂಸ್ಥೆಗೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಒಂದು ಕೋಟಿ ರೂಪಾಯಿ ಅನುದಾನ ಶೀಘ್ರದಲ್ಲೇ ನೀಡಲಾಗುವುದು ಎಂದು ಎಂ.ಎಲ್.ಸಿ ಯತೀಂದ್ರ ಸಿದ್ದರಾಮಯ್ಯ ಭರವಸೆ ನೀಡಿದರು.

ಗುರುವಾರ ರಂದು ಕವಲಗುಡ್ಡ ಗ್ರಾಮದ ಶ್ರೀ ಕರಿಯೋಗಸಿದ್ದ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶ್ರೀ ಸಿದ್ದರತ್ನ ಪ್ರೌಢಶಾಲೆ 13ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂಸ್ಥೆಯ ಸಂಸ್ಥಾಪಕರು ಹಾಗೂ ಸಿದ್ದಯೋಗಿ ಅಮರೇಶ್ವರ ಮಹಾರಾಜರು ಮಾತನಾಡಿ, ಗಡಿಭಾಗದ ಬಡ ಹಾಗೂ ಅನಾಥ ಮಕ್ಕಳಿಗೆ ವಿದ್ಯಾಭ್ಯಾಸ ದೊರೆಯಲಿ ಎಂಬ ಉದ್ದೇಶದಿಂದ ಈ ಸಂಸ್ಥೆಯನ್ನು ಕಟ್ಟಲಾಗಿದೆ. ಈ ಸಂಸ್ಥೆಗೆ ಅನೇಕ ದಾನಿಗಳು ಮುಂದೆ ಬಂದು ಸಹಕಾರ ನೀಡುತ್ತಿದ್ದಾರೆ.

ಯತೀಂದ್ರ ಸಿದ್ದರಾಮಯ್ಯ ಅವರು ಸಂಸ್ಥೆಗೆ ಭೇಟಿ ನೀಡಿ ಸಹಕಾರದ ಭರವಸೆ ನೀಡಿರುವುದು ಒಂದು ಹಂಡೆ ಹಾಲು ಕುಡಿದಂತಾಗಿದೆ ಎಂದು ಸಂತಸದಿಂದ ಹೇಳಿದರು.

ಸಿಎಂ ಬದಲಾವಣೆ ಇಲ್ಲ :
ಪತ್ರಕರ್ತರು ಮುಖ್ಯಮಂತ್ರಿ ಬದಲಾವಣೆ ಬಗ್ಗೆ ವಿಚಾರಿಸಿದಾಗ, ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾನೇ ಐದು ವರ್ಷ ಅವಧಿಗೆ ಮುಖ್ಯಮಂತ್ರಿ ಎಂದು ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಪದೇಪದೇ ಕೇಳುವುದು ತಪ್ಪು ಎಂದು ಹೇಳಿದರು.

ಕನ್ನಡ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಅಥಣಿ ರೋಟರಿ ಕ್ಲಬ್ ಅಧ್ಯಕ್ಷ ಗಜಾನನ ಮಂಗಸೂಳಿ, ಅಸ್ಲಂ ನಾಲಬಂದ ಇತರರಿದ್ದರು.

https://www.facebook.com/share/r/1835FbcHkh