ಉ.ಕ ಸುದ್ದಿಜಾಲ ಅಥಣಿ :
ಕೇಂದ್ರ ಸರ್ಕಾರದಿಂದ ಜಿಎಸ್‌ಟಿ ಕಡಿತ ವಿಚಾರವಾಗಿ ಮಾಜಿ ಡಿಸಿಎಂ, ಅಥಣಿ ಶಾಸಕ ಲಕ್ಷ್ಮಣ ಸವದಿ ಪ್ರತಿಕ್ರಿಯೆ ನೀಡಿದ್ದು ಉತ್ತರ ಕರ್ನಾಟಕ ಶೈಲಿಯ ಎಮ್ಮೆ ಮಾರಾಟಕ್ಕೆ ಹೋಲಿಸಿದ್ದಾರೆ.
ಬೆಳಗಾವಿಯ ಅಥಣಿಯಲ್ಲಿ ಶಾಸಕ ಲಕ್ಷ್ಮಣ ಸವದಿ ಹೇಳಿಕೆ ನೀಡಿದ್ದು, ಜಿಎಸ್‌ಟಿ ಕಡಿತ ಮಾಡಿರುವುದನ್ನು ಕೆಲವೊಂದಿಷ್ಟು ಜನ ತಮ್ಮ ಬೆನ್ನನ್ನು ತಾವೇ ಚಪ್ಪರಿಸಿಕೊಳ್ತಿದ್ದಾರೆ. ಬಿಜೆಪಿಯವರು ಮಾಡಿರುವ ತಪ್ಪನ್ನು ಸರಿಪಡಿಸಿಕೊಳ್ಳಲು ಮಾಡಿರುವ ಸಣ್ಣ ಪ್ರಯತ್ನ ಅಷ್ಟೇ.
ಜಿಎಸ್‌ಟಿ ಕಡಿಮೆ ಮಾಡಿರುವುದು ಬಹಳ ದೊಡ್ಡ ಸಾಧನೆ ಅಲ್ಲ. ಜನರ ಮೇಲೆ ಹೊರಿಸಿದ್ದ ಭಾರ ಕಡಿಮೆ ಮಾಡಿದ್ದಾರೆ. ಬಿಜೆಪಿಯವರಿಗೆ ತಾವು ಮಾಡಿದ್ದ ತಪ್ಪು ಅರಿವಿಗೆ ಬಂದು ಕಡಿಮೆ ಮಾಡಿದ್ದಾರೆ, ಇದೇನು ಹೆಮ್ಮೆ ಪಡುವಂತದಲ್ಲ.
ಈ ಮೊದಲು ಜಿಎಸ್‌ಟಿ ದರ ನಿಗದಿ ಪಡಿಸಿದ್ದು ಅವೈಜ್ಞಾನಿಕ. ಜಿಎಸ್‌ಟಿ ದರ ಅತಿ ಹೆಚ್ಚು ಮಾಡಿ ಈಗ ಕಡಿಮೆ ಮಾಡಿದ್ದಾರೆ. ಇದೇ ಮಾದರಿಯಲ್ಲಿ ನಮ್ಮ ಕಡೆ ಎಮ್ಮೆಗಳ ವ್ಯಾಪಾರ ಮಾಡ್ತಾರೆಂದು ವ್ಯಂಗ್ಯವಾಡಿದ ಶಾಸಕ ಲಕ್ಷ್ನಣ ಸವದಿ.
Vidio – ಕೇಂದ್ರ ಸರ್ಕಾರದಿಂದ ಜಿಎಸ್‌ಟಿ ಕಡಿತ : ಉತ್ತರ ಕರ್ನಾಟಕ ಶೈಲಿಯ ಎಮ್ಮೆ ಮಾರಾಟಕ್ಕೆ ಹೋಲಿಸಿದ ಶಾಸಕ ಲಕ್ಷ್ಮಣ ಸವದಿ
