ಉ.ಕ ಸುದ್ದಿಜಾಲ ಮಹಾರಾಷ್ಟ್ರ :

ಯಾರಾದರೂ ರಾಜ್ಯ ಸರ್ಕಾರಕ್ಕೆ ಅಥವಾ ಸಿಎಂ ಗೆ ಏನಾದರೂ ಮನವಿ ಮಾಡುವುದಿದ್ದರೆ ಅದು ಆ ರಾಜ್ಯದ ಮೊದಲ ಭಾಷೆಗೆ ಸೀಮಿತವಾಗಿರುತ್ತದೆ ಅಥವಾ ಹಿಂದಿ, ಇಂಗ್ಲಿಷ್ ಭಾಷೆಯಲ್ಲಿ ಮನವಿ ಸಲ್ಲಿಸಿರುವುದನ್ನ ನಾವು ನೋಡಿರ್ತಿವಿ.

ಆದರೆ, ಮಹಾರಾಷ್ಟ್ರದ ಯುವಕನೊಬ್ಬ ತನ್ನ ಸ್ನೇಹಿತನಿಗೆ ಎಂಎಲ್ಎ ಟಿಕೆಟ್ ನೀಡುವಂತೆ ತನ್ನ ರಕ್ತದಿಂದ ಕನ್ನಡದಲ್ಲಿ ಪತ್ರ ಬರೆದು ಮಹಾರಾಷ್ಟ್ರ ಸಿಎಂ ಎಕನಾಥ ಸಿಂದೆಗೆ ಮನವಿ ಮಾಡಿ ಮಹಾರಾಷ್ಟ್ರ ದಲ್ಲೂ ತನ್ನ ಕನ್ನಡ ಪ್ರೇಮ ತೋರಿದ್ದಾನೆ.

ಅದು ಮಹಾರಾಷ್ಟ್ರವಾದರೂ ಕನ್ನಡಕ್ಕೆ ಇನ್ನಿಲ್ಲದ ಗೌರವ, ಮಹಾರಾಷ್ಟ್ರದ ಸಾಂಗಲಿ‌ ಜಿಲ್ಲೆಯ ಜತ್ತ ತಾಲೂಕಿನ ಪ್ರತಿ ಮನೆ ಮನಗಳಲ್ಲಿ ಕನ್ನಡ ಭಾಷೆ ಅವರ ಮಾತೃ ಭಾಷೆಯಾಗಿದೆ.

ಜತ್ತ ತಾಲೂಕಿನ ಬಿಳ್ಳೂರ ಗ್ರಾಮದ ಯುವಕನೊಬ್ಬ ತನ್ನ ಆಪ್ತನಿಗೆ ಎಮ್ ಎಲ್ ಎ ಟಿಕೆಟ್ ನೀಡುವಂತೆ ಮಹಾರಾಷ್ಟ್ರ ಸಿಎಂ ಎಕನಾಥ ಶಿಂದೆಗೆ ತನ್ನ ರಕ್ತದಿಂದ ಕನ್ನಡದಲ್ಲಿ ಪತ್ರ ಬರೆದು ಕನ್ನಡಿಗರ ಮನ ಗೆದ್ದಿದ್ದಾನೆ.

ಬಿಜೆಪಿ ಪ್ರಚಾರ ಸಮಿತಿ ಅಧ್ಯಕ್ಷ ತಮ್ಮನಗೌಡ ಪಾಟೀಲ್ ಗೆ ಬರುವ ವಿಧಾನಸಭೆ ಚುನಾವಣೆಯಲ್ಲಿ ಜತ್ತ ತಾಲೂಕಿನಿಂದ ಬಿಜೆಪಿ ಪಕ್ಷದಿಂದ ಆ ಟಿಕೆಟ್ ನೀಡಬೇಕೆಂದು ತನ್ನ ಆಪ್ತ ಪಿರು ಕೋಳಿ ರಕ್ತದಿಂದ ಪತ್ರ ಬರೆದು ಎಲ್ಲರ ಗಮನ ಸೆಳೆದಿದ್ದಾನೆ. ಪೀರು ಕೋಳಿ ಇತನೂ ಕೂಡ ತನ್ನ ಕೃಷಿ ಕಾಯಕದೊಂದಿಗೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿ ರಾಜಕೀಯದಲ್ಲು ಗುರುತಿಸಿಕೊಂಡಿದ್ದಾನೆ.

ಹಲವು ಬಾರಿ ಗಡಿ ಭಾಗದ ಸಮಸ್ಯೆ ಕುರಿತು ಹೊರಟಗಳ ಮೂಲಕ ಸರ್ಕಾರ ನ್ಯಾಯ ಪಡೆಯುವ ಕಾರ್ಯಕ್ಕೆ ಇತನ ಪಾತ್ರ ಮುಂಚೂಣಿಯಲ್ಲಿದೆ. ಮಹಾರಾಷ್ಟ್ರ ದ ಜತ್ ತಾಲೂಕಿನಲ್ಲಿ ಜತ್ ಕನ್ನಡಿಗರು ಎಂಬ ಸಂಘಟನೆ ಸದಸ್ಯನಾಗಿ ಕನ್ನಡಪರ ಹೋರಾಟಗಾರನಾಗಿ ಗುರುತಿಸಿಕೊಂಡು. ಕನ್ನಡದ ಬಗ್ಗೆ ಅಪಾರ ಕಾಳಜಿ ವಹಿಸಿದ್ದಾನೆ.