ಉ.ಕ ಸುದ್ದಿಜಾಲ ಕಾಗವಾಡ :
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದಲ್ಲಿ ಒಂದಿಲ್ಲ ಒಂದು ಅಚ್ಚರಿ ಜೊತೆಗೆ ಸಾಧನೆ ಕೂಡಾ ನೋಡುತ್ತಲ್ಲೆ ಬಂದಿವೆ ಈಗ ಮತ್ತೊಂದು ಗರಿಯನ್ನ ತನ್ನದಾಗಿಸಿಕೊಂಡಿದೆ. ಹೌದು ಕಾಗವಾಡ ತಾಲ್ಲೂಕಿನ ಕಾರ್ಯನಿರತ ಪತ್ರಕರ್ತರ ಸಂಘದ ಹಿರಿಯ ಪತ್ರಕರ್ತ ಸಿದ್ದಯ್ಯ ಹಿರೇಮಠ,ಪ್ರಧಾನ ಕಾರ್ಯದರ್ಶಿಯಾಗಿ ವಿಜಯಮಹಾಂತೇಶ ಅರಕೇರಿ ಅವಿರೋಧವಾಗಿ ಆಯ್ಕೆಯಾದರು.
ಬುಧವಾರ ಅಥಣಿ ಪ್ರವಾಸಿ ಮಂದಿರದಲ್ಲಿ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಪುಂಡಲೀಕ ಬಾಳೋಜಿ ಹಾಗೂ ಜಿಲ್ಲಾ ಸಮೀತಿ ಸದಸ್ಯರ ಸಮ್ಮುಖದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಸಿದ್ದಯ್ಯ ಹಿರೇಮಠ, ಉಪಾಧ್ಯಕ್ಷರಾಗಿ ಪ್ರಭಾಕರ ಗೊಂದಳಿ ಪ್ರಧಾನ ಕಾರ್ಯದರ್ಶಿಯಾಗಿ ವಿಜಯಮಹಾಂತೇಶ ಅರಕೇರಿ. ಖಜಾಂಚಿಯಾಗಿ ಹಿರಿಯ ಪತ್ರಕರ್ತ ಸುರೇಶ ಕಾಗಲೆ ಅವರು ಅವಿರೋಧ ಆಯ್ಕೆ ಆದರು ಎಂದು ಪುಂಡಲೀಕ ಬಾಳೋಜಿ ಘೋಷಣೆ ಮಾಡಿದರು.
ಮೋಳೆ ಗ್ರಾಮದ ಒಲಿದ ಎರಡು ಗರಿಮೆ ಹಿರಿಯ ಪತ್ರಕರ್ತ ಸಿದ್ದಯ್ಯ ಹಿರೇಮಠ ಹಲವು ವರ್ಷಗಳ ಕಾಲ ಸಂಯುಕ್ತ ಕರ್ನಾಟಕ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸ ಮಾಡುತ್ತಿದ್ದು ಅದರಂತೆ ರಾಜ್ಯದ ಹೆಸರಾಂತ ಪತ್ರಿಕೆ ಪ್ರಜಾವಾಣಿಯ ಕಾಗವಾಡ ತಾಲ್ಲೂಕು ವರದಿಗಾರರಾಗಿ ಕೆಲಸ ಮಾಡುತ್ತಿರುವ ವಿಜಯಮಹಾಂತೇಶ ಅರಕೇರಿ ಅವರಿಗೆ ಪ್ರಧಾನ ಕಾರ್ಯದರ್ಶಿ ಆಗಿ ಎರಡನೇ ಬಾರಿ ಅವಕಾಶ ಸಿಕ್ಕಿದೆ ಈ ಇಬ್ಬರೂ ಪತ್ರಕರ್ತರಿಗೆ ಉನ್ನತ ಹುದ್ದೆ ದಕ್ಕಿರುವುದು ಮೋಳೆ ಗ್ರಾಮದ ಗತಿಮೆ ಹೆಚ್ಚಿಸಿದೆ.
ಅಧಿಕಾರ ಪದಗ್ರಹಣ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ಜಲ್ಲಾ ಸಂಚಾಲಕ ಸುಕುಮಾರ ಬನ್ನೂರೆ,ಮುರಗೇಶ ಗಸ್ತಿ, ಗುರುನಾಥ ದೇಶಿಂಕರ, ಸಚಿನ ಕಾಂಬಳೆ, ಬಸವರಾಜ ತಾರದಾಳೆ, ಅಮರ ಕಾಂಬಳೆ, ಸಂಜಯ ಕಾಟಕರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು



