ಉ.ಕ ಸುದ್ದಿಜಾಲ ಮೋಳೆ :
ಒಂದು ಶಿಕ್ಷಣ ಸಂಸ್ಥೆ ನಡೆಯ ಬೇಕಾದರೆ ಪ್ರಮುಖವಾಗಿ ಆಡಳಿತ ಮಂಡಳಿ ಹೇಗಿರುತ್ತೆ ಅನ್ನುವುದು ಮುಖ್ಯವಾಗಿರುತ್ತದೆ. ಆದರೆ, ಮೋಳೆ ಗ್ರಾಮದ ಸಿದ್ದೇಶ್ವರ ಪ್ರೌಢ ಶಾಲಾ ಆಡಳಿತ ಮಂಡಳಿಯವರು ದೇವರ ಮೇಲೆ ಆಣೆ ಮಾಡಿ ಶಾಲೆ ನಡೆಸುತ್ತಿರುವುದು ಈ ವರೆಗೂ ಒಂದು ಕಪ್ಪು ಚುಕ್ಕೆ ಬರದ ಹಾಗೆ ಸಂಸ್ಥೆ ನಡೆಸಿರುವುದು ಶ್ಲಾಘನೀಯ ಶ್ರೀ ಸಿದ್ದೇಶ್ವರ ಪ್ರೌಢ ಶಾಲಾ ಆಡಳಿತ ಮಂಡಳಿಯ ಆಡಳಿತ ವೈಖರಿಯ ಬಗ್ಗೆ ಸಾಹಿತಿ ವಿ ಎಸ್ ಮಾಳಿ ಅಭಿಮತ ವ್ಯಕ್ತಪಡಿಸಿದರು.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದ ಶ್ರೀ ಸಿದ್ದೇಶ್ವರ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಶಿವಾನಂದ ಹವಳೆ ಗುರುಗಳ ನಿವೃತ್ತಿ ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ಅಲಂಕರಿಸಿ ಮಾತನಾಡಿದ ಅವರು, ಒಂದು ಸಂಸ್ಥೆ ಬೆಳೆಯಬೇಕಾದರೆ ಅದಕ್ಕೆ ಒಗ್ಗಟ್ಟು ಬಹಳ ಮುಖ್ಯವಾಗಿದ್ದು ಈಗಾಗಲೇ ಸಿದ್ದೇಶ್ವರ ಸಂಸ್ಥೆ ವಜ್ರಮಹೋತ್ಸವ ತಯಾರಿ ನಡೆಸಿದ್ದು ಈ ಸಮಯದಲ್ಲಿ ಮೋಳೆ ಗ್ರಾಮದ ಜನರ ನೆನಪಿಗಾಗಿ ಇಂಗ್ಲೀಷ ಮಾಧ್ಯಮ ಸಂಸ್ಥೆ ಪ್ರಾರಂಭ ಮಾಡಿ ಎಂದು ಶ್ರೀ ಸಿದ್ದೇಶ್ವರ ಪ್ರೌಢ ಶಾಲೆ ಆಡಳಿತ ಮಂಡಳಿಗೆ ಸಲಹೆ ನೀಡಿದ್ದರು.
ಶ್ರೀ ಸಿದ್ದೇಶ್ವರ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಶಿವಾನಂದ ಹವಳೆ ನಿವೃತ್ತಿ ಹೊಂದಿದಕ್ಕೆ ಸಂಸ್ಥೆ ಹಾಗೂ ಗ್ರಾಮಸ್ಥರ ಪರವಾಗಿ ಸತ್ಕಾರ ಮಾಡಲಾಯಿತು. ಸತ್ಕಾರ ಬಳಿಕ ಶಿವಾನಂದ ಹವಳೆ ಮಾತನಾಡಿದ ಅವರು, ಈ ಸಂಸ್ಥೆಯಲ್ಲಿ ಕಳೆದ 30 ವರ್ಷದಿಂದ ಶಿಕ್ಷಕನಾಗಿ ಕಾರ್ಯ ನಿರ್ವಹಿಸಿ ಇಂದು ನಾನು ನಿವೃತ್ತಿ ಹೊಂದಿದ್ದು ನನಗೆ ಎಲ್ಲೊ ಒಂದ ಕಡೆ ಬೇಜರ ಆಗಿದೆ. ನಾನೂ ಈ ಸಂಸ್ಥೆಗೆ ಬರಲು ನನಗೆ ಸಹಾಯ ಮಾಡಿದವರನ್ನ ಈ ಸಂದರ್ಭದಲ್ಲಿ ನೆಗೆದು ಸಹಾಯ ಮಾಡಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದ್ದಾರೆ. ತಾವು ಕಾರ್ಯ ನಿರ್ವಹಿಸಿದ ಸಂಸ್ಥೆಗೆ 1 ಲಕ್ಷ ರೂ. ಅನುದಾನ ನೀಡಿ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.
ಸಿದ್ದೇಶ್ವರ ಪ್ರೌಢ ಶಾಲೆಗೆ ಸುಮಾರು 75 ವರ್ಷ ಕಳೆದ ಹಿನ್ನಲೆ ಮೋಳೆ ಗ್ರಾಮದ ಹಿರಿಯರು, ಗ್ರಾಮಸ್ಥರು ಶಿಕ್ಷಣ ಪ್ರೇಮಿಗಳು ಸೇರಿ ವಜ್ರ ಮಹೋತ್ಸವ ಮಾಡಲು ನಿರ್ಧರಿಸಿದ್ದು, ಈ ಕಾರ್ಯಕ್ರಮಕ್ಕೆ ಸಂಸ್ಥೆಯಾ ಮಾಜಿ ಮುಖ್ಯೋಪಾಧ್ಯಾಯರಾದ ಎಚ್ ಎಂ ತೇಲಸಂಗ ಗುರುಗಳು 50,000 ಧನ ಸಹಾಯ ಹಾಗೂ ಶಿವಾನಂದ ಹವಳೆ ಗುರುಗಳು 35,000 ಧನ ಸಹಾಯ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಹನಮಂತ ಹುಗ್ಗಿ, ಬಿ, ಎಸ್ ಚಾಳೇಕರ, ಸಂಸ್ಥೆಯ ಕಾರ್ಯಾಧ್ಯಕ್ಷ ಶಿವಾನಂದ ಹೊಸಮನಿ, ಸಂಸ್ಥೆಯ ಸದಸ್ಯರಾದ ಬಾಹುಬಲಿ ಟೋಪಗಿ, ಮಾಯಪ್ಪ ಮುಂಜೆ, ಅಪ್ಪಾಸಾಬ ಪಾಟೀಲ, ಗಜಾನನ ಯರಂಡೋಲಿ, ಗೋರಖನಾಥ ಕೋಳೆಕರ, ಈಶ್ವರ ವಾಂಡಿಮಾಳಿ, ವಿರೂಪಾಕ್ಷ ಆರಿ, ಸಿದರಾಯ ಹುಂಡೇಕರ, ಸಂಸ್ಥೆಯ ಮುಖ್ಯಾಧ್ಯಾಪಕ ಎಸ್ ಆರ್ ಕೋಳಿ, ವಿವಿಧ ಶಾಲೆಯ ಮುಖ್ಯಾಧ್ಯಾಪಕರು, ಶಿಕ್ಷಕರು ಹಾಗೂ ನಿವೃತ ಶಿಕ್ಷಕರು ಭಾಗಿಯಾಗಿದ್ದರು, ನಿರೂಪಣೆ ಎಲ್ ಟಿ ಬಬಲಿ ಹಾಗೂ ವಂದನಾರ್ಪಣೆಯನ್ನ ಪೂರ್ಣಿಮಾ ಅನನ್ನವರ ನೆರವೇರಿಸಿದರು
ಶಿವಾನಂದ ಹವಳೆ ಗುರಗಳ ನಿವೃತ್ತಿ : ಗ್ರಾಮಸ್ಥರಿಂದ ಸತ್ಕಾರ
