ಉ.ಕ ಸುದ್ದಿಜಾಲ ಕಾಗವಾಡ :

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಸುಮಾರು 200 ಎಕರೆ ಕಬ್ಬು  ಸುಟ್ಟು ಕರಕಲಾದ ಘಟನೆ ಕಾಗವಾಡ ಪಟ್ಟಣದ ಹೊರವಲಯದಲ್ಲಿ ಜರುಗಿದೆ.

ಬೆಳಗಾವಿ ಜಿಲ್ಲೆಯ ಕಾಗವಾಡ ಪಟ್ಟಣದ ಶಿರಗುಪ್ಪಿ ರಸ್ತೆಯ ಬ್ರಹ್ಮನಾಥ ನೀರಾವರಿ ಪಂಪ ಹತ್ತಿರದ ಸುರೇಶ ಪಾಟೀಲ್ ಡುಮ್ಮಗೋಳ ಎಂಬ ರೈತರ ಜಮೀನಿನಲ್ಲಿ ಹೊತ್ತಿಕೊಂಡ ಬೆಂಕಿ ಮಂಗಾವತಿ ರಸ್ತೆಯವರೆಗೂ ಬೆಂಕಿ ಆವರಿಕೊಂಡು ಅನೇಕ ರೈತರ ಕಬ್ಬು ಸುಟ್ಟು ಕರಕಲಾಗಿದೆ.

ಸ್ಥಳಕ್ಕೆ ಉಗಾರ ಸಕ್ಕರೆ ಕಾರ್ಖಾನೆ ಬೆಂಕಿ ನಂದಿಸುವ ವಾಹನ,ದತ್ತ ಸಕ್ಕರೆ ಕಾರ್ಖಾನೆ ಹಾಗೂ ರಾಯಬಾಗದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ಆರಿಸಲು ಎಲ್ಲ ರೀತಿಯಲ್ಲಿ ಪ್ರಯತ್ನಿಸಿದರೂ ಸಹ ಬೆಂಕಿಯ ಕೆನ್ನಾಲೆಗೆ ಸುಮಾರು  200 ಎಕರೆ ಕಬ್ಬು ಸುಟ್ಟಿದೆ.

ಹೆಸ್ಕಾಂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಸುಮಾರು 200 ಎಕರೆ ಕಬ್ಬು ಸುಟ್ಟು ನಾಶವಾಗಿದೆ ಇದಕ್ಕೆ ನೇರ ಹೊಣೆ ಹೆಸ್ಕಾಂ ಇಲಾಖೆಯವರೆ ಕಾರಣ ಹೆಸ್ಕಾಂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಕಳೆದ ಬಾರಿಯೂ ಇದೆ ರೀತಿ ಅವಘಡ ಸಂಭವಿಸಿತ್ತು ಆವಾಗ ಎಚ್ಚೆತ್ತುಕೊಂಡಿದ್ದರೆ.

ಈಗ ಈ ರೀತಿ ಅವಘಡ ಸಂಭವಿಸಿ ರೈತರಿಗೆ ನಷ್ಟವಾಗುತ್ತಿರಲಿಲ್ಲ. ಬೆಂಕಿ ಹತ್ತಿದಾಗ ಪೋಲಿಸ್,ಕಂದಾಯ,ಹೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದರೂ ಯಾರೂ ಸ್ಥಳಕ್ಕೆ ಬಂದಿಲ್ಲ ಎಂದು  ರೈತರು ಆಕ್ರೋಶ ವ್ಯಕ್ತಪಡಿಸಿದರು.

ಬೆಂಕಿ ನಂದಿಸಲು ರೈತರು ಹಾಗೂ ಅಗ್ನಿ ಶಾಮಕ ಸಿಬ್ಬಂದಿಗಳು ಹರಸಾಹಸ ಪಟ್ಟರು ರಾಯಬಾಗ ಅಗ್ನಿಶಾಮಕ ವಾಹನ, ಉಗಾರ ಶುಗರ್ಸ ಎರಡು ಅಗ್ನಿಶಾಮಕ ವಾಹನ, ನೇರಯ ಮಹಾರಾಷ್ಟ್ರದ ದತ್ತ ಶುಗರ್ಸ ಕಾರ್ಖಾನೆ ಅಗ್ನಿಶಾಮಕ ವಾಹನಗಳನ್ನು ಜೊತೆಗೆ ಸಿಬ್ಬಂದಿಗಳು ಬೆಂಕಿ ನಂದಿಸುವ ಕೆಲಸ ಮಾಡಿದರು.

ಹೆಸ್ಕಾಂ ಇಲಾಖೆಗೆ ಹಲವು ಬಾರಿ ಮನವಿ ಮಾಡಿ ಹೇಳಿದರು ನಮ್ಮ ಮನವಿಗೆ ಸ್ಪಂದಿಸುವ ಕೆಲಸ ಮಾಡಲಿಲ್ಲಾ ಕಾರಣ ಇಂದು ಈ ಪರಿಸ್ಥಿತಿ ಬಂದಿದೆ ಕೊಟ್ಯಾಂತರ ರೂ ಗಳ ಬೆಳೆ ಕಣ್ಣ ಮುಂದೆ ಸುಟ್ಟು ಹೋಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ, ಕೂಡಲೇ ಸರಕಾರ ನಮ್ಮಗೆ ನೋವಿಗೆ ಸ್ಪಂದಿಸಿ ಸುಮಾರು 25 ಟ್ರಾಕ್ಟರ್ ಗಳ ಜೊತೆಗೆ ಕಟಾವು ಕಾರ್ಮಿಕರನ್ನು ಕಳುಹಿಸಿ ಸುಟ್ಟ ಕಬ್ಬನ್ನು ದರದಲ್ಲಿ ಯಾವುದೇ ಕಡಿತ ಮಾಡದೆ ಕಬ್ಬು ಕಟಾವು ಮಾಡಿ ಕಾರ್ಖಾನೆಗಳು ಕೊಂಡೊಯ್ಯುವಂತೆ ಸೂಚಿಸಬೇಕು.

ಹೆಸ್ಕಾಂ ಇಲಾಖೆ ಬೆಂಕಿಗೆ ಬೆಳೆಗಳಿಗೆ ಪರಿಹಾರ ನೀಡಬೇಕು ಕಬ್ಬಿನ ಗದ್ದೆಗಳಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗಳು ಸಡಿಲವಾಗಿ ಶಾರ್ಟ ಸರ್ಕಿಟ್ ಆಗದಂತೆ ಕ್ರಮ ಕೈಗೊಳ್ಳಬೇಕು, ತಾಲ್ಲೂಕಿನ ಕೇಂದ್ರಕ್ಕೆ ಇದ್ದ ಅಗ್ನಿಶಾಮಕ ವಾಹನ ಸರಿಯಾಗಿ ನಿರ್ವಹಣೆ ಇಲ್ಲದೆ ಇರುವದರಿಂದ ಇಂದು ಬೇರ ತಾಲ್ಲೂಕಿನ ಮೊರೆ ಹೊಗಬೇಕಾಗಿದೆ ಕೂಡಲೇ ನಮ್ಮ ತಾಲ್ಲೂಕಿನ ಅಗ್ನಿಶಾಮಕ ಠಾಣೆ ಸ್ಥಾಪಿಸಿಬೇಕು ಎಂದು ಆಗ್ರಹಿಸಿದರು. ಸ್ಥಳಕ್ಕೆ ತಹಶಿಲ್ದಾರ ರಾಜೇಶ ಬುರ್ಲಿ,ಪಿಎಸ್ಐ ಜಿ ಜಿ ಬಿರಾದರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಾಗವಾಡ ಪಟ್ಟಣದ ರೈತರು ಬೆಳೆದ ಕಬ್ಬಿಗೆ ಬೆಂಕಿ ಹೊತ್ತಿ ಅಪಾರ ಪ್ರಮಾಣದ ನಷ್ಟವಾಗಿದೆ ಸ್ಥಳಕ್ಕೆ ಕೂಡಲೇ ಭೇಟಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ತಾಲ್ಲೂಕಿನ ಮೂರು ಸಕ್ಕರೆ ಕಾರ್ಖಾನೆಗಳಿಗೆ ಪೋನ್ ಮೂಲಕ ಮಾತನಾಡಿ ಆದಷ್ಟು ಬೇಗ ರೈತರ ಕಬ್ಬು ಕಟಾವು ಮಾಡಿಸಿ ಕೊಂಡೊಯ್ಯುವಂತೆ ಸೂಚನೆ ನೀಡಲಾಗಿದೆ ಎಂದ ಕಾಗವಾಡ ಶಾಸಕ ರಾಜು ಕಾಗೆ.