ಮೋಳೆ :

ಕಳೆದ ಎರಡು ದಿನಗಳಲ್ಲಿ 20 ಕ್ಕೂ ಹೆಚ್ಚು ಮನೆ ಕಳ್ಳತನ ಮಾಡಿರುವ ದುಷ್ಕರ್ಮಿಗಳು. ಮಹಾರಾಷ್ಟ್ರದ ಗಡಿಯಲ್ಲಿರುವ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಹಾಗೂ ಐನಾಪೂರ ಗ್ರಾಮದಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಕಳ್ಳತನ.

ಕಳ್ಳತನ ನಡೆದ ಸ್ಥಳಕ್ಕೆ ಅಥಣಿ ಡಿವೈಎಸ್‌ಪಿ ಗಿರೀಶ, ಸಿಪಿಐ ಶಂಕರಗೌಡ ಪಾಟೀಲ ಹಾಗೂ ಅಥಣಿ ಪಿಐ ಬಿ ಎಂ ರಬಕವಿ ಬೇಟಿ ನೀಡಿ ಪರಶೀಲನೆ ನಡೆಸಿದ್ದಾರೆ.‌ ಕಳೆದ ಎರಡು ದಿನದ ಹಿಂದೆ ಐನಾಪೂರ ಗ್ರಾಮದಲ್ಲಿ 13 ಮನೆಗಳ ಬೀಗ ಮುರಿದು ಎಕ ಕಾಲಕ್ಕೆ ಕಳ್ಳತನ ಮನೆಯಲ್ಲಿಯ ಚಿನ್ನಾಭರಣ, ಬೆಳ್ಳಿ, ನಗದು ಹಣ ಹೀಗೆ ಲಕ್ಷಾಂತರ ರೂ ಮೌಲ್ಯದ ಬೆಲೆ ಬಾಳುವ ಆಭರಣ ಹಾಗೂ ನಗದು ಕಳ್ಳತನ ಮಾಡಿದ್ದಾರೆ.

ಸೇವಂತ ರೂಪನವರ ಮನೆ ಕಳ್ಳತನವಾದವರು

ಮೋಳೆ ಗ್ರಾಮದಲ್ಲಿ ಸುಮಾರು ಐದಕ್ಕಿಂತ ಹೆಚ್ಚು ಕಳ್ಳತನ ಮಾಡಿರುವ ಮನೆಗಳ್ಳರು. ಮೋಳೆ ಗ್ರಾಮದ ಸೇವಂತ ರೂಪನವರ ಮನೆಯಲ್ಲಿರುವ 12 ತೊಲಿ ಬಂಗಾರ, ಅರ್ಧ ಕೆಜಿ ಬೆಳ್ಳಿ ಹಾಗೂ 5,000 ನಗದು ಹಣ ಕಳ್ಳತನವಾಗಿದೆ‌. ಶಂಕರ ಬಡಿಗೇರ, ಅಮರ ಹರಳೆ, ಹೈದರ ನದಾಫ ಹಾಗೂ ಸಿದ್ದಯ್ಯ ಹಿರೇಮಠ ಅವರ ಮನೆ ಕಳ್ಳತನಕ್ಕೆ ಯತ್ನಿಸಿದ್ದು ಕಳ್ಳರು ಸಣ್ಣ ಪುಟ್ಟ ಸಾಮಗ್ರಿಗಳನ್ನ ಕಳ್ಳತನ ಮಾಡಿದ್ದಾರೆ. ಏಕ ಕಾಲಕ್ಕೆ ನಡೆದಿರುವ ಈ ಸರಣಿ ಕಳ್ಳತನದಿಂದ ಐನಾಪೂರ, ಮೋಳೆ ಹಾಗೂ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ‌.

ಕಳ್ಳರನ್ನು ನೋಡಿದ ಪ್ರತ್ಯೇಕದರ್ಶಿ ರಾಹುಲ ಕಾಂಬಳೆ