ಉ.ಕ ಸುದ್ದಿಜಾಲ ರಾಯಬಾಗ :

ಎಳೆ ವಯಸ್ಸಿನ ಮೊಮ್ಮಗನಿಗೆ ಸಾರಾಯಿ ಕುಡಿಸಿದ ಅಜ್ಜ ಮೂರು ವರ್ಷದ ಮೊಮ್ಮಗನಿಗೆ ರಾಮರಸದ ರುಚಿ ತೋರಿಸಿದ ಪಾಪಿ. ಬೆಳಗಾವಿ ಜಿಲ್ಲೆಯ ರಾಯಭಾಗ ಪಟ್ಟಣದ ಪ್ರೀತಮ್ ಬಾರನಲ್ಲಿ ನಡೆದ ಘಟ‌ನೆ.

ಸ್ಥಳೀಯರು ಕುಡಿಸೋದು ಬೇಡ ಬೇಡ ಎಂದರೂ ತಾನೇ ಹಾಕಿಕೊಟ್ಟ ಪಾಪಿ ಅಜ್ಜ. ಬಾರ್ ನಲ್ಲಿ ಅಜ್ಜನ ಜೊತೆ ಕುಳಿತು ಸಾರಾಯಿ ಹೀರಿದ ಮಗು. ಘಟನೆ ಬೆಳಕಿಗೆ ಬರುತ್ತಿದ್ದಂತೆ ಸಾರ್ವಜನಿಕರ ಆಕ್ರೋಶ.

ಬಾರ್ ವಿರುದ್ಧ ಹಾಗೂ ಪಾಪಿ ಅಜ್ಜನ ವಿರುದ್ಧ ಕ್ರಮಕ್ಕೆ ಆಗ್ರಹ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರ ಸ್ವಂತ ಜಿಲ್ಲೆಯಲ್ಲಿಯೇ ಮಕ್ಕಳ ಸ್ಥಿತಿ ಹೀನ ಘಟನೆ ಬೆಳಕಿಗೆ ಬಂದರೂ ಸಹ ಕ್ಯಾರೆ ಎನ್ನದ ಅಬಕಾರಿ ಅಧಿಕಾರಿಗಳು.