ಉ.ಕ ಸುದ್ದಿಜಾಲ ರಾಯಚೂರು :
ಮೊಹರಂ ಆಚರಣೆ ವೇಳೆ ಬೆಂಕಿಯಲ್ಲಿ ಬಿದ್ದು ವ್ಯಕ್ತಿ ಸಾವು ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಯರಗುಂಟಿ ಗ್ರಾಮದಲ್ಲಿ ಘಟನೆ ನಡೆದಿದೆ.
ಅಲಾಯಿ ಕುಣಿಯಲ್ಲಿ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿ ಸಾವನಪ್ಪಿದ್ದಾನೆ. ಯರಗುಂಟಿ ಗ್ರಾಮದ ಹನುಮಂತ ಮೃತ ವ್ಯಕ್ತಿ. ಸ್ಥಳದಲ್ಲೇ ನೂರಾರು ಜನ ಅಸಹಾಯಕ ಸ್ಥಿತಿಯಲ್ಲಿ.
ಲಿಂಗಸುಗೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
ಮೊಹರಂ ಆಚರಣೆ ವೇಳೆ ಬೆಂಕಿಯಲ್ಲಿ ಬಿದ್ದು ವ್ಯಕ್ತಿ ಸಾವು



