ಉ.ಕ ಸುದ್ದಿಜಾಲ ರಾಮದುರ್ಗ :

ಅಶೋಕ್ ಪಟ್ಟಣ್ ಆಪ್ತ ಹನುಮಂತಗೌಡ(40) ಹೃದಯಾಘಾತದಿಂದ ಸಾವು ರಾಮದುರ್ಗ ತಾಲೂಕಿನ ಕಮಕೇರಿ ನಿವಾಸಿ ಹನುಮಂತಗೌಡ ಕಳೆದ ಒಂದು ವಾರದಿಂದ ಅಶೋಕ ಪಟ್ಟಣ್ ಜೊತೆ ಓಡಾಡಿದ್ದ ಹನುಮಂತಗೌಡ

ರಾಮದುರ್ಗ ಡಿಸಿಸಿ ಬ್ಯಾಂಕ್ ನಿರ್ದೇಶಕ ಮಲ್ಲಣ್ಣ ಯಾದವಾಡ ಪರ ಪ್ರಚಾರ ಮಾಡಿದ್ದರು ನಿನ್ನೆ ಫಲಿತಾಂಶ ಬಳಿಕ ವಿಜಯೋತ್ಸವದಲ್ಲಿ ಭಾಗಿಯಾಗಿದ್ದ ಹನುಮಂತಗೌಡ ಡಿಸಿಸಿ ಬ್ಯಾಂಕ್ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಪಿಕೆಪಿಎಸ್ ಸದಸ್ಯ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ನಡೆದಿದೆ.

ಡಿಸಿಸಿ ಬ್ಯಾಂಕ್ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ರಾಮದುರ್ಗ ತಾಲೂಕಿನ ಕಮಕೇರಿ ನಿವಾಸಿ, ಪಿಕೆಪಿಎಸ್ ಸದಸ್ಯ ಹಾಗೂ ಶಾಸಕ ಅಶೋಕ್ ಪಟ್ಟಣ್ ಅವರ ಆಪ್ತ ಹನುಮಂತಗೌಡ (40) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಕಳೆದ ಒಂದು ವಾರದಿಂದಲೂ ರಾಮದುರ್ಗ ಡಿಸಿಸಿ ಬ್ಯಾಂಕ್ ನಿರ್ದೇಶಕ ಮಲ್ಲಣ್ಣ ಯಾದವಾಡ ಪರವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಹನುಮಂತಗೌಡ ಅವರು, ನಿನ್ನೆ ಫಲಿತಾಂಶದ ನಂತರ ನಡೆದ ವಿಜಯೋತ್ಸವದಲ್ಲಿ ಭಾಗಿಯಾಗಿದ್ದರು. ಈ ಘಟನೆಗೆ ತೀವ್ರ ದುಃಖ ವ್ಯಕ್ತವಾಗಿದೆ.