ಉ.ಕ ಸುದ್ದಿಜಾಲ ಉಡುಪಿ :

ರಾಷ್ಟ್ರ ಪಕ್ಷಿಯ ಮಯೂರ ನರ್ತನ

ದೇಶಾಧ್ಯಂತ 78ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ. ರಾಷ್ಟ್ರ ಭಕ್ತರು ಧ್ವಜಾರೋಹಣ ಮಾಡಿ, ತಮ್ಮ ಮನೆ ಮನಗಳಲ್ಲಿ ರಾಷ್ಟ್ರ ಧ್ಚಜ ಹಾರಿಸಿ ಸಂತಸ ಪಟ್ರೆ ಉಡುಪಿಯಲ್ಲಿ ನವಿಲು ಗರಿಬಿಚ್ಚಿ ಸಂಭ್ರಮಿಸಿದೆ.

ನವಿಲು ಕೂಡ ರಾಷ್ಟ್ರ ಧ್ವಜದ ಪಕ್ಕದಲ್ಲೇ. ಈ ಅದ್ಬುತ ದೃಶ್ಯ ಕಂಡುಬಂದಿರೋದು ಉಡುಪಿ ಹೊರ ವಲಯದಲ್ಲಿರುವ ಪರ್ಕಳದ ಮಾರುತಿ ನಗರದಲ್ಲಿ. ಸ್ಥಳೀಯ ನಿವಾಸಿಯೊಬ್ಬರು ಈ ದೃಶ್ಯವನ್ನ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ.

ಮನೆಯೊಂದರ ಮೇಲೆ ಹಾರಿಸಿರುವ ರಾಷ್ಟ್ರ ಧ್ವಜದ ಪಕ್ಕದಲ್ಲೇ ನವಿಲು ಗರಿಬಿಚ್ಚಿ ಮಯೂರ ನರ್ತನ ಮಾಡಿ ಸ್ವಾತಂತ್ರ್ಯ ದಿನವನ್ನ ಸಂಭ್ರಮಿಸಿದೆ. ರಾಷ್ಟ್ರ ಧ್ವಜದ ಪಕ್ಕದಲ್ಲೇ ರಾಷ್ಟ್ರ ಪಕ್ಷಿಯ ನೃತ್ಯ ಕಾಕತಾಳಿಯ ಆದ್ರೂ ಈ ಸುಸಂಧರ್ಬದಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿರೋದಂತು ಸತ್ಯ.