ಕೊಡಗು
ಕುಮಾರಸ್ವಾಮಿ ನಿರಾಧಾರ ಆರೋಪ ಮಾಡುತ್ತಲೇ ಇರುತ್ತಾರೆ. ಅವರ ಯಾವುದೇ ಆರೋಪಕ್ಕೂ ಹುರುಳಿಲ್ಲ. ಕಾಂಗ್ರೆಸ್ 17 ಶಾಸಕರನ್ನು ಕಳೆದುಕೊಳ್ಳಲು ಜೆಡಿಎಸ್ ಕಾರಣ. ಜೆಡಿಎಸ್ ಜತೆ ಮೈತ್ರಿ ಮಾಡಿದ್ದರಿಂದ ಶಾಸಕರನ್ನು ಕಳೆದುಕೊಂಡೆವು ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಸಿದ್ದರಾಮಯ್ಯ ವಿರುದ್ಧ ಎಚ್ಡಿಕೆ ಆರೋಪ ಹಿನ್ನೆಲೆ ಮಡಿಕೇರಿಯಲ್ಲಿ ಯತೀಂದ್ರ ಸಿದ್ದರಾಮಯ್ಯ ಪ್ರತಿಕ್ರಿಯೆ, ಮೈತ್ರಿ ಆಗದಿದ್ರೆ ಶಾಸಕರು ನಮ್ಮ ಜತೆ ಇರುತ್ತಿದ್ದರು. ನಾವು 80 ಸ್ಥಾನ ಗಳಿಸಿದ್ರೂ ಅವರಿಗೆ ಸಿಎಂ ಸ್ಥಾನ ಕೊಟ್ಟಿದ್ವಿ. ನಮ್ಮ ಶಾಸಕರನ್ನು ಅವರು ಸರಿಯಾಗಿ ನೋಡಿಕೊಳ್ಳಲಿಲ್ಲ. ನನ್ನ ಕ್ಷೇತ್ರದಲ್ಲೇ ಕೆಲಸ ಆಗ್ತಿರಲಿಲ್ಲ. ಸಿಎಂ ಸರಿಯಾಗಿ ಸಿಗ್ತಿಲ್ಲ ಅಂತ ಶಾಸಕರು ಕೈಬಿಟ್ಟು ಹೋದ್ರು. ವಿರೋಧ ಪಕ್ಷದ ಸ್ಥಾನ ತಗೊಂಡು ಏನಾಗ್ಬೇಕು ಅದೇನು ಸಿಎಂ ಸ್ಥಾನನಾ? ಎಚ್ಡಿಕೆಗೆ ಯತೀಂದ್ರ ಸಿದ್ದರಾಮಯ್ಯ ಪ್ರಶ್ನೆ
ಎಚ್ಡಿಕೆಯದ್ದು ನಗೆಪಾಟಲಿನ ಆರೋಪ ವಿಚಾರ ಉಪಚುನಾವಣೆಯಲ್ಲಿ ಜೆಡಿಎಸ್‌ಗೆ ಕಾಂಗ್ರೆಸ್ ಪ್ರಬಲ ಎದುರಾಳಿ ಜೆಡಿಎಸ್‌ಗೆ ಬಿಜೆಪಿ ಬಗ್ಗೆ ಒಲವಿದೆ. ಹೀಗಾಗಿ ಕಾಂಗ್ರೆಸ್ ಬಗ್ಗೆ ಬಾಯಿಗೆ ಬಂದ ಆರೋಪ ಮಾಡುತ್ತಿದ್ದಾರೆ. ಅಭ್ಯರ್ಥಿ ಹಾಕೋದಕ್ಕೆ ಅವರು ಯಾವ ದೊಣ್ಣೆ ನಾಯಕನ ಅಪ್ಪಣೆ ಪಡೆಯಬೇಕಿಲ್ಲ. ಅವರು ಬೇರೆ ಪಕ್ಷದ ಜತೆಗಿನ ಒಳ ಒಪ್ಪಂದವನ್ನ ಜನರಿಗೆ ತಿಳಿಸೋಕೆ ನಾವು ಕೂಡಾ ದೊಣ್ಣೆ ನಾಯಕನ ಅಪ್ಪಣೆ ಪಡಿಬೇಕಿಲ್ಲ. ನಮಗನ್ನಿಸಿದ್ದನ್ನ ನಾವು ಹೇಳೇ ಹೇಳ್ತೇವೆ ಎಂದು ಎಚ್ಡಿಕೆಗೆ ಯತೀಂದ್ರ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.