ಉ.ಕ ಸುದ್ದಿಜಾಲ ಬೆಳಗಾವಿ :
ಒಟ್ಟು 5 ಪ್ರಕರಣಗಳಲ್ಲಿ ಒಟ್ಟು 9 ಆರೋಪಿಗಳನ್ನು ಬಂಧಿಸಿ ಒಟ್ಟು 1 ಲಕ್ಷ 1 ಸಾವಿರ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಸಿಕೊಳ್ಳುವಲ್ಲಿ ಬೆಳಗಾವಿಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಳಗಾವಿ ತಾಲೂಕಿನ ಮುತಗಾ ಗ್ರಾಮದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ, ವಿನುತ್ ಕೊಣ್ಣೂರ ಮತ್ತು ಸೂರಜ್ ಹಿಂಡಲಗೇಕರನನ್ನು ಮಾರಿಹಾಳ ಪಿಐ ಮಂಜುನಾಥ ನಾಯಿಕ ನೇತೃತ್ವದಲ್ಲಿ ದಾಳಿ ನಡೆಸಿ ಬಂಧಿಸಿ ಒಟ್ಟು 55 ಸಾವಿರ ಮೌಲ್ಯದ 1 ಕೆಜಿ 335 ಗ್ರಾಂ ಗಾಂಜಾ ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆದು ಕಾರ್ಯಾಚರಣೆಯನ್ನು ಮುಂದುವರೆಸಿದ್ದಾರೆ.
ಇನ್ನು ಬೆಳಗಾವಿಯ ಸರ್ದಾರ್ ಮೈದಾನದ ಹತ್ತಿರ ಮಾದಕ ವಸ್ತು ಮಾರಾಟ ಮಾಡುತ್ತಿದ್ದಾಗ ಹರ್ಷ ವರ್ಮಾ, ಪ್ರಜ್ವಲ್ ನಾವಗೇಕರ ಮತ್ತು ಉತ್ಕರ್ಷ ವರ್ಮಾನನ್ನು ಖಡೇಬಝಾರ್ ಪಿ ಎಸ್ ಐ ಉದ್ದಪ್ಪ ಕಟ್ಟಿಕರ ನೇತೃತ್ವದಲ್ಲಿ ದಾಳಿ ನಡೆಸಿ ಬಂಧಿಸಿ 24 ಸಾವಿರ ಮೌಲ್ಯದ 1 ಕೆಜಿ 103 ಗ್ರಾಂ ಗಾಂಜಾ ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆದು ತನಿಖೆಯನ್ನು ಕೈಗೊಂಡಿದ್ದಾರೆ.
ಅದೇ ರೀತಿ ಹಳೇ ಭಾಜಿ ಮಾರ್ಕೇಟ್ ಹತ್ತಿರ ಗಾಂಜಾ ಮಾರಾಟ ಮಾಡುತ್ತಿದ್ದ ಹರ್ಷಲ್ ಗುರವನನ್ನು ಮಾರ್ಕೇಟ್ ಠಾಣೆ ಪಿ ಎಸ್ ಐ ವಿಠ್ಠಲ ಹಾವನ್ನವರ ನೇತೃತ್ವದಲ್ಲಿ ದಾಳಿ ನಡೆಸಿ ಬಂಧಿಸಿ ಒಟ್ಟು 3000 ಮೌಲ್ಯದ 302 ಗ್ರಾಂ. ಗಾಂಜಾ ವಶಕ್ಕೆ ಪಡೆಯಲಾಗಿದೆ.
ಇನ್ನು ಕೇಂದ್ರ ಬಸ್ ನಿಲ್ದಾಣದ ಬಳಿ ಅಸಹಜವಾಗಿ ವರ್ತಿಸುತ್ತಿದ್ದ ದರ್ಶನ ಗಾವಡೆಯನ್ನು ಮಾರ್ಕೇಟ್ ಪಿ ಎಸ್ ಐ ವಿಠ್ಠಲ ಹಾವನ್ನವರ ನೇತೃತ್ವದಲ್ಲಿ ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆಗೊಳಪಡಿಸಿದಾಗ ಮಾದಕ ವಸ್ತು ಸೇವಿಸಿದ್ದು ಬೆಳಕಿಗೆ ಬಂದಿದ್ದು, ಇತನ ವಿರುದ್ಧ ಪ್ರಕರಣ ದಾಖಲಾಗಿದೆ.
ಇನ್ನು ಬೆಳಗಾವಿಯ ಆರ್.ಪಿ.ಡಿ ಕ್ರಾಸ್’ನಲ್ಲಿ ಸಾರಾಯಿ ಕುಡಿದ ನಶೆಯಲ್ಲಿ ಕಲ್ಲಿನಿಂದ ಹೊಡೆದು ದಿಲೀಪ್ ಠಾಕೂರ್ ಅವರನ್ನು ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಲೀಪ್ ಪತ್ನಿ ಕಾಜಲ್ ದಿಲೀಪ್ ಠಾಕೂರ್ ನೀಡಿದ ದೂರಿನ್ವಯ ಮನೋಜ್ ಊರ್ಫ್ ಪ್ರಮೋದ್ ಜಾಧವ್ ಮತ್ತು ಲಖನ್ ಭಾಟಿಯಾ ಎಂಬಾತರನ್ನು ಬಂಧಿಸಿ ತಿಲಕವಾಡಿ ಪಿಐ ಪರಶುರಾಮ್ ಮತ್ತು ತಂಡ 24 ಗಂಟೆಯಲ್ಲಿ ಬಂಧಿಸಿ ಕಾನೂನು ಕ್ರಮಕೈಗೊಂಡಿದೆ.
ಬೆಳಗಾವಿ ಪೊಲೀಸರ ಈ ಕಾರ್ಯಕ್ಕೆ ನಗರ ಪೊಲೀಸ್ ಆಯುಕ್ತರು ಮತ್ತು ಉಪಾಯುಕ್ತರು ಶ್ಲಾಘನೆಯನ್ನು ವ್ಯಕ್ತಪಡಿಸಿದ್ದಾರೆ.
