ಉ.ಕ ಸುದ್ದಿಜಾಲ ಅಥಣಿ :
ಗಡಿಯಲ್ಲಿ ಕೊಲೆಯಾದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದ್ದು. ಗ್ರಾಮದಲ್ಲಿ ಆತಂಕ ಹುಟ್ಟಿಸಿದೆ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಶಿರೂರ ಗ್ರಾಮದಲ್ಲಿ ಮಹಾರಾಷ್ಟ್ರ ಮೂಲದ ವ್ಯಕ್ತಿಯ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಮಹಾರಾಷ್ಟ್ರದ ಲಾಥುರ ಜಿಲ್ಲೆಯ ಸಾಖರಾ ಮೂಲದ ಬಳಿರಾಮ ಬಾಪು ಕಾಂಬಳೆ (32) ಕೊಲೆಯಾದ ವ್ಯಕ್ತಿಯಾಗಿದ್ದಾನೆ. ಶಿರೂರ ಗ್ರಾಮದ ಬಾಳು ಮಾಮಾ ದೇವಸ್ಥಾನದ ಹಿಂಭಾಗದಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಮೃತ ದೇಹ ಪತ್ತೆಯಾಗಿದೆ. ನಿನ್ನೆ ತಡ ರಾತ್ರಿ ವ್ಯಕ್ತಿಯನ್ನ ಕೊಲೆ ಮಾಡಿ ದೃಷಕೃತ್ಯ ಎಸೆದಿರುವ ಶಂಕೆ ವ್ಯಕ್ತವಾಗಿತ್ತಿದೆ.
ವ್ಯಕ್ತಿಯ ಬೆನ್ನು ಹಾಗೂ ತಲೆಯ ಹಿಂಭಾಗದಲ್ಲಿ ಗಾಯಗಳಾಗಿದ್ದು. ರಕ್ತದ ಮಡುವಿನಲ್ಲಿ ಬಿದ್ದ ವ್ಯಕ್ತಿ ಶವ ಕಂಡು ಸ್ಥಳೀಯರು ಸ್ಥಳೀಯ ಪೊಲೀಸ್ ರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಮೇರೆಗೆ ಅಥಣಿ ಪೊಲೀಸ್ ರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೊಲೆಗಡುಕರ ಪತ್ತೆಗೆ ಬಲೆ ಬಿಸಿದ್ದಾರೆ.ಈ ಸಂಭಂದ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಡಿಯಲ್ಲಿ ಭೀಕರ ವ್ಯಕ್ತಿಯ ಕೊಲೆ – ಸ್ಥಳಕ್ಕೆ ಪೊಲೀಸ್ ಭೇಟಿ
