ಉ.ಕ ಸುದ್ದಿಜಾಲ ಬೆಳಗಾವಿ :
ಡಿಸಿಸಿ ಗೆಲುವಿನ ಲೆಕ್ಕಾಚಾರದಲ್ಲಿದವರಿಗೆ ಶಾಕ್ ಡಿಸಿಸಿ ಚುನಾವಣೆ ಮುಂದೂಡಿಸಲು ಹೈ ಕೋರ್ಟ ಆದೇಶ ಹುಕ್ಕೇರಿ ತಾಲೂಕಿನ ಡಿಸಿಸಿ ಚುನಾವಣೆ ಮುಂದೂಡಿಕೆ ಆದೇಶ ಹುಕ್ಕೇರಿ ತಾಲೂಕಿನ PKPS ಸಂಘಗಳಿಂದ ಪ್ರತಿನಿಧಿಸುವ ನಿರ್ದೇಶಕರ ಚುನಾವಣೆ ಅಭ್ಯರ್ಥಿಗಳಾದ ರಮೇಶ ಕತ್ತಿ, ರಾಜೇಂದ್ರ ಪಾಟೀಲ್ ಗೆ ಶಾಕ್
ಮುಂದಿನ ಆದೇಶದವರೆಗೆ ಚುನಾವಣೆ ಮುಂದೂಡಿಕೆ ಹುಕ್ಕೇರಿ ತಾಲೂಕು ಹೊರತುಪಡಿಸಿ ಇನ್ನುಳಿದ ತಾಲೂಕಿನ ಡಿಸಿಸಿ ಚುನಾವಣೆ ಯಥಾವತ್ತಾಗಿ ಅ.19ಕ್ಕೆ ನಡೆಯಲಿವೆ...
ತೀವ್ರ ಕೂತುಹಲ ಮೂಡಿಸಿರುವ ಮಾಜಿ ಸಂಸದ ರಮೇಶ ಕತ್ತಿ ಹಾಗೂ ಸಂಗಮ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ರಾಜೇಂದ್ರ ಪಾಟೀಲ ನಡುವೆ ಹುಕ್ಕೇರಿ ತಾಲೂಕಿನ ಬೆಳಗಾವಿ ಡಿಸಿಸಿ ಬ್ಯಾಂಕಿಗೆ ಇದೇ ರವಿವಾರ ಅಕ್ಟೋಬರ್ 19 ರಂದು ನಡೆಯಬೇಕಿದ್ದ ಹುಕ್ಕೇರಿ ತಾಲೂಕಿನ ಚುನಾವಣೆ ಮುಂದುಡುವಂತೆ ನ್ಯಾಯಾಲಯ ಆದೇಶ ಮಾಡಿದೆ.
ಧಾರವಾಡ ಪೀಠದ ಹೈ ಕೋರ್ಟ ಆದೇಶದ ಮೇರೆಗೆ ಚುನಾವಣೆ ಮೂಂದುಡಲಾಗಿದೆ. ಇದೇ ಅಕ್ಟೋಬರ್ 28 ರಂದು ನ್ಯಾಯಾಲಯ ಈ ಕುರಿತು ವಿಚಾರಣೆ ನಡೆಸಲಿದೆ.
